ಗೋಕರ್ಣ: ತದಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಈಗಾಗಲೇ ಉಪ ಸಮಿತಿಗಳನ್ನು ರಚಿಸಲಾಗಿದ್ದು, ಹಳೆಯ ವಿದ್ಯಾರ್ಥಿಗಳು, ವರ್ಗಾವಣೆಗೊಂಡ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರು ತಮ್ಮನ್ನು ಸಂಪರ್ಕಿಸುವAತೆ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ರಮಾನಂದ ನಾಯ್ಕ (೯೪೪೮೫೭೫೯೮೭) ತಿಳಿಸಿದ್ದಾರೆ. ಈಗಿರುವ ಶಾಲೆಯ ಜಾಗ ಇಕ್ಕಟ್ಟಾಗಿದ್ದು, ಪರ್ಯಾಯ ಜಾಗವನ್ನು ಹುಡುಕುವುದು ಮತ್ತು ಈಗಿನ ತಂತ್ರಜ್ಞಾನದ ಮೂಲಕವಾಗಿ ಹೈಟೆಕ್ ಶಾಲೆ ನಿರ್ಮಿಸುವುದು, ಕ್ರೀಡಾಂಗಣ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.