• Slide
  Slide
  Slide
  previous arrow
  next arrow
 • ಸರ್ಕಾರದ ಜನವಿರೋಧಿ ನಡೆಯನ್ನು ಪ್ರಶ್ನಿಸುವ ಅಗತ್ಯವಿದೆ: ಶ್ರೀಝಾ ಚಕ್ರವರ್ತಿ

  300x250 AD

  ಹೊನ್ನಾವರ: ಪರಿಸರ, ಜೀವವೈವಿಧ್ಯತೆಗಳ ರಕ್ಷಣೆ ಮತ್ತು ಮೀನುಗಾರರ ಜೀವನೋಪಾಯವೂ ಸೇರಿದಂತೆ ಕರಾವಳಿಯ ಸಬಲೀಕರಣದ ಹಿತದೃಷ್ಟಿಯಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪರಿಸರ ಮತ್ತು ಜನವಿರೋಧಿ ನಡೆಯನ್ನು ಸೂಕ್ತ ವೇದಿಕೆಗಳಲ್ಲಿ ಪ್ರಶ್ನಿಸುವ ಅಗತ್ಯವಿದೆ ಎಂದು ಹೈಕೋರ್ಟ್ ಮತ್ತು ಎನ್.ಜಿ.ಟಿ ವಕೀಲರಾದ ಶ್ರೀಝಾ ಚಕ್ರವರ್ತಿಯವರು ಪ್ರತಿಪಾದಿಸಿದ್ದಾರೆ.

  ತಾಲೂಕಿನ ಕಾಸರಕೋಡ ಟೊಂಕದಲ್ಲಿ ಲಿವಿಂಗ್ ಅರ್ಥ್ ಫೌಂಡೇಶನ್ ಆಶ್ರಯದಲ್ಲಿ ಮೀನುಗಾರರ ಸಂಘಟನೆಗಳ ಪದಾಧಿಕಾರಿಗಳಿಗೆ ಮತ್ತು ಮೀನುಗಾರರಿಗಾಗಿ ಆಯೋಜಿಸಲಾಗಿದ್ದ ಒಂದು ದಿನದ ಕರಾವಳಿ ಸಬಲೀಕರಣ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

  ದೇಶದ ಬಿಹಾರ ಮತ್ತು ಕರ್ನಾಟಕದಲ್ಲಿ ಸ್ಥಳೀಯ ಸಾರ್ವಜನಿಕರ ಅಹವಾಲುಗಳನ್ನು ಆಲಿಸದೇ ಕೇಂದ್ರ ಸರ್ಕಾರವು ಇತ್ತೀಚೆಗೆ ಏಕಪಕ್ಷೀಯವಾಗಿ ಸಿಆರ್‌ಝೆಡ್ ನಿಯಮಗಳನ್ನು ಮತ್ತು ಸಮುದ್ರದ ಭರತರೇಖೆಯಿಂದ 50 ಮೀಟರ್ ಭೂಪ್ರದೇಶವನ್ನು ಪೋರ್ಟ ವ್ಯಾಪ್ತಿಗೆ ಒಳಪಡಿಸಿ ಮೂಲ ನಕ್ಷೆಗಳನ್ನು ತಿದ್ದುಪಡಿ ಮಾಡಲಾಗಿದೆ. ಹೀಗೆ ತಿದ್ದುಪಡಿ ಮಾಡುವ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾನೂನಿಗೆ ವ್ಯತಿರಿಕ್ತವಾಗಿ ನಡೆದುಕೊಂಡಿರುವದು ಮತ್ತು ಪರಂಪರಾಗತ ಮೀನುಗಾರರ  ಹಿತರಕ್ಷಣೆಗೆ ಅಗತ್ಯ ಕ್ರಮ ವಹಿಸದೇ ಇರುವುದು ಕಂಡು ಬಂದಿದೆ ಎಂದರು.

  300x250 AD

  ಕಡಲ ವಿಜ್ಞಾನಿ ಡಾ.ಪ್ರಕಾಶ ಮೇಸ್ತ ಮಾತನಾಡಿ, ಇತ್ತೀಚಿನ ಸಿಆರ್‌ಝೆಡ್ ನಿಯಮಗಳ ತಿದ್ದುಪಡಿಯಿಂದ ಸ್ಥಳೀಯ ಮೀನುಗಾರರಿಗೆ ಆಗಬಹುದಾದ ಅನಾನುಕೂಲತೆಗಳ ಬಗ್ಗೆ ಮತ್ತು ಜೀವ ವೈವಿಧ್ಯತೆಗಳ ರಕ್ಷಣೆಯ ವಿಚಾರದಲ್ಲಿ ಎದರಾರಾಗಬಹುದಾದ ಸಮಸ್ಯೆಗಳ ಬಗ್ಗೆ ವಿವರಿಸಿದರು. ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು.
  ಕರಾವಳಿ ಮೀನುಗಾರರ ಸಂಘದ ಅಧ್ಯಕ್ಷ ರಾಜೇಶ್ ತಾಂಡೇಲ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದರು. ಮೀನುಗಾರರ ಪ್ರಮುಖ ಗಣಪತಿ ತಾಂಡೇಲ ಮತ್ತು ರೇಖಾ ತಾಂಡೇಲ್, ರೇಣುಕಾ ಜಿ.ತಾಂಡೇಲ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು. ಲಿವಿಂಗ್ ಅರ್ಥ್ ಫೌಂಡೇಶನ್ನಿನ ಪ್ರತಿನಿಧಿ, ವಕೀಲೆ ಸರಿತಾ ಫರ್ನಾಂಡಿಸ್ ಸಿಆರ್‌ಝೆಡ್ ನಿಯಮಗಳ ಇತ್ತೀಚಿನ ತಿದ್ದುಪಡಿ ಮತ್ತು ಸಿಆರ್‌ಝೆಡ್ ನಕ್ಷೆಯ ಬದಲಾವಣೆಯ ಕಾನೂನಾತ್ಮಕ ಸಾಧಕ ಬಾಧಕಗಳ ಬಗ್ಗೆ ವಿವರಿಸಿಸಿದರು.
  ಸಂದೀಪ ಹೆಗಡೆ, ಸಾವಿತ್ರಿ ತಾಂಡೇಲ್, ಪುಷ್ಪಾ ತಾಂಡೇಲ್, ನಾಗವೇಣಿ ತಾಂಡೇಲ, ಸುನಿತಾ ತಾಂಡೇಲ್, ರಮೇಶ್ ತಾಂಡೇಲ್, ಹರೀಶ ತಾಂಡೇಲ್, ಚಿದಂಬರ ತಾಂಡೇಲ್, ವಿನಯ ಟಿ,ಶ್ರೀಧರ ತಾಂಡೇಲ್, ರಾಜು ತಾಂಡೇಲ ಇನ್ನು ಮುಂತಾದ ಪ್ರಮುಖರು ಇದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top