Slide
Slide
Slide
previous arrow
next arrow

ಶಿರಸಿ ಪ್ರತ್ಯೇಕ ಜಿಲ್ಲೆ ಮಾಡುವುದರಲ್ಲಿ ವೈಯಕ್ತಿಕ ಹಿತಾಸಕ್ತಿಯಿಲ್ಲ: ಉಪೇಂದ್ರ ಪೈ

300x250 AD

ಶಿರಸಿ: ಶಿರಸಿ ಪ್ರತ್ಯೇಕ ಜಿಲ್ಲೆ ಮಾಡುವುದರಲ್ಲಿ ನನ್ನ ವೈಯಕ್ತಿಕ ಹಿತಾಸಕ್ತಿಯಿಲ್ಲ. ಅದು ಘಟ್ಟದ ಮೇಲಿನ ಏಳು ತಾಲೂಕಿನ ಜನರ ಹಿತಾಸಕ್ತಿ. ಈ ಜನರ ಬಯಕೆಯನ್ನು ವಿಧಾನಸೌಧದಲ್ಲಿ ಎತ್ತರದ ಸ್ಥಾನದ ಮೇಲೆ ಕುಳಿತುಕೊಳ್ಳುತ್ತಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿಯವರೇ ತೀರಿಸಬಹುದಿತ್ತು. ಆದರೆ ಅವರು ಕೊನೆ ಪಕ್ಷ ಆ ಹುದ್ದೆಯಿಂದ ಕೆಳಗಿಳಿಯುವ ಸಂದರ್ಭದಲ್ಲಿಯಾದರೂ ಹೇಳಬಹುದಿತ್ತಲ್ಲವೆಂದು ಶಿರಸಿ- ಸಿದ್ದಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಉಪೇಂದ್ರ ಪೈ ವಿಷಾದ ವ್ಯಕ್ತಪಡಿಸಿದರು.

ಅವರು ಸೋಮವಾರ ನಾಮಪತ್ರ ಸಲ್ಲಿಸಿದ ಬಳಿಕ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತ ಆರು ಬಾರಿ ಗೆದ್ದ ಕಾಗೇರಿಯವರಿಗೆ ಶಿರಸಿ ಪ್ರತ್ಯೇಕ ಜಿಲ್ಲೆ ಮಾಡುವ ವಿಷಯ ದೊಡ್ಡದಲ್ಲಾಗಿತ್ತು. ಜನರ ಎಲ್ಲಾ ಸಮಸ್ಯೆಗಳಿಗೂ ಪ್ರತಿಭಟನೆ ಮಾಡುವುದಾದರೆ ನಾವು ಜನಪ್ರತಿನಿಧಿಗಳನ್ನು ಏಕೆ ಆರಿಸಿಕಳಿಸಬೇಕು. ಅವರಿಗೆ ಶಿರಸಿ ಜಿಲ್ಲೆ ಮಾಡುವ ಆಸಕ್ತಿಯಿಲ್ಲ. ಅದಕ್ಕೆ ತಲೆಯೂ ಕೆಡಿಸಿಕೊಳ್ಳಲಿಲ್ಲ. ಈಗ ಜನಾದೇಶ ರೂಪಿಸಲಿಲ್ಲವೆಂದು ಜಾರಿಕೊಳ್ಳುತ್ತಿದ್ದಾರೆ. ಆದ್ದರಿಂದ ಜನರು ಕಾಗೇರಿಯವರಿಗೆ ಆರು ಬಾರಿ ಗೆಲ್ಲಿಸಿ ತಪ್ಪು ಮಾಡಿದ್ದಾರೆಂದು ಗುಡುಗಿದರು. ನಾನು ಚುನಾವಣೆಗೆ ನಿಂತ ಉದ್ದೇಶವೇ ಶಿರಸಿ ಪ್ರತ್ಯೇಕ ಜಿಲ್ಲೆ ಮಾಡುವುದು, ಈ ಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿ ಮಾಡುವುದು, ಈ ಸ್ವತ್ತು ಸಮಸ್ಯೆಯಿಂದ ಇಲ್ಲಿನ ಜನರನ್ನು ಪಾರು ಮಾಡುವುದು, ಬೆಟ್ಟ ಲ್ಯಾಂಡಿಗೆ ರೈತರು ತೆರಿಗೆ ತುಂಬದಂತೆ ಮಾಡುವುದು ಮತ್ತು ಕ್ಷೇತ್ರದ ಜನರಿಗೆ ಇನ್ನಿತರ ಮೂಲಭೂತ ಸೌಕರ್ಯ ಒದಗಿಸುವಂತೆ ಮಾಡುವುದು ಎಂದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಜನರು ಈಗಾಗಲೇ ತೀರ್ಮಾನ ಮಾಡಿರುವುದರಿಂದ ಇಲ್ಲಿಯೂ ಕೂಡಾ ಜನರು ಜೆಡಿಎಸ್ ಅಭ್ಯರ್ಥಿಯನ್ನೆ ಬದಲಾವಣೆಗಾಗಿ ಗೆಲ್ಲಿಸಲಿದ್ದಾರೆಂದು ಹೇಳಿದರು. ನಾನು ಹೋದ ಕಡೆಗಳೆಲ್ಲ ಜನರ ಆಶಿರ್ವಾದ ಮತಗಳಾಗಿ ಪರಿವರ್ತನೆಯಾಗುತ್ತಿದೆ. ಹಳ್ಳಿಹಳ್ಳಿ ಕಡೆ ಜೆಡಿಎಸ್ ಅಭಿಮಾನಿಗಳಿರುವುದರಿಂದ ನನ್ನನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದಾರೆ. ಈ ಪ್ರೀತಿ ವಿಶ್ವಾಸವನ್ನು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲವೆಂದರು.

300x250 AD

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ವಕ್ತಾರ ಮುನಾಫ್, ಪ್ರಮುಖರಾದ ಸತೀಶ ಬೈರಳ್ಳಿ, ಸೈಯದ್ ಮುಝಿಬ್, ಜಾಫರ್, ಜೆ.ಪಿ.ನಾಯ್ಕ, ಶ್ರೀಪಾದ ದೀಕ್ಷಿತ್, ಚೈತ್ರಾ ಗೌಡಾ, ಸರಸ್ವತಿ ಗೌಡಾ, ಹರೀಶ ಗೌಡ್ರು, ರಾಜು ಭಟ್ಟ ಮುಂತಾದವರಿದ್ದರು.

Share This
300x250 AD
300x250 AD
300x250 AD
Back to top