• Slide
    Slide
    Slide
    previous arrow
    next arrow
  • ವಂದಿಗೆಯಲ್ಲಿ ಮನೆ ಬಾಗಿಲು ಮುರಿದು ಕಳ್ಳತನ

    300x250 AD

    ಅಂಕೋಲಾ: ಯಾರೂ ಇಲ್ಲದ ವೇಳೆ ಮನೆಯ ಬಾಗಿಲು ಮುರಿದು ಕಳ್ಳತನ ಮಾಡಿದ ಘಟನೆ ತಾಲೂಕಿನ ವಂದಿಗೆಯಲ್ಲಿ ನಡೆದಿದೆ.

    ನಿವೃತ್ತ ಡಿಎಫ್‌ಓ ಗೋವಿಂದರಾಯ ಹಿತ್ತಲಮಕ್ಕಿ ಮನೆಯಲ್ಲಿ ಕಳ್ಳತನ ನಡೆದಿದ್ದು, ಯಾರೋ ಕಳ್ಳರು ಭಾನುವಾರ ರಾತ್ರಿ ವೇಳೆಯಲ್ಲಿ ನೆಲಮಹಡಿಯ ಬಾಗಿಲು ಮುರಿದು ಮೊದಲನೆ ಮಹಡಿಯ ಮುಂಬಾಗಿಲನ್ನೂ ಒಡೆದು ಬೆಡ್ ರೂಮಿನ ಕಪಾಟಿನಲ್ಲಿದ್ದ ರೂ.10000 ನಗದು, ರೂ.3000 ಬೆಲೆಯ 50 ಗ್ರಾಂ ಬೆಳ್ಳಿಯ ಲೋಟ ಹಾಗೂ ಮನೆಯ ಮುಂಭಾಗದಲ್ಲಿ ನಿಲ್ಲಿಸಿಟ್ಟಿದ್ದ ಸಂಬಂಧಿಯೊಬ್ಬರ ಬಜಾಜ್ ಪಲ್ಸರ್ ಬೈಕನ್ನೂ ಕಳುವು ಮಾಡಿದ್ದಾರೆ.
    ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡು ಈ ಕೃತ್ಯ ಎಸಗಲಾಗಿದ್ದು, ಕಳ್ಳತನದ ಕುರಿತು ಗೋವಿಂದರಾಯ ಹಿತ್ತಲಮಕ್ಕಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪೊಲೀಸ್ ಉಪನಿರೀಕ್ಷಕ ಮಹಾಂತೇಶ ಬಿ.ವಿ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top