Slide
Slide
Slide
previous arrow
next arrow

ಸುಹಾಶ್ಚಂದ್ರ ಹೆಗಡೆ ಕೆಶಿನ್ಮನೆಗೆ ಅಂತರಾಷ್ಟ್ರೀಯ ಪ್ರಶಸ್ತಿ

300x250 AD

ಶಿರಸಿ: ಧಾರವಾಡದ ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ವಿಭಾಗದ 5ನೇ ಸೆಮಿಸ್ಟರ್‌ ವಿದ್ಯಾರ್ಥಿಯಾದ ತಾಲೂಕಿನ ಕೆಶಿನ್ಮನೆಯ ಸುಹಾಶ್ಚಂದ್ರ ಹೆಗಡೆ ಬೆಂಗಳೂರಿನ ಎಥೋಲಾಜಿಕಲ್‌ ಸೊಸೈಟಿ ಆಫ್‌ ಇಂಡಿಯಾ ಹಾಗೂ ಸ್ಕೂಲ್‌ ಆಫ್‌ ಅಪ್ಲೈಡ್‌ ಸೈನ್ಸ್‌ಸ್‌ ರೇವಾ ಯುನಿವರ್ಸಿಟಿ ಅವರ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಅತ್ಯುತ್ತಮ ಮೌಖಿಕ ಪ್ರಶಸ್ತಿಯನ್ನು ಪಡೆದಿದ್ದಾರೆ.

ಸುಹಾಶ್ಚಂದ್ರ ಹೆಗಡೆ ಪ್ರಾಣಿಗಳ ನಡುವಳಿಕೆ ಮತ್ತು ಪ್ರಾಣಿಶಾಸ್ತ್ರದ ಅಧ್ಯಯನಗಳಲ್ಲಿನ ಪ್ರವೃತ್ತಿಗಳ ಎರಡು ದಿನಗಳ ಸಮ್ಮೇಳನದಲ್ಲಿ ಜಾನುವಾರು ನಿರ್ವಹಣೆಯ ನಡವಳಿಕೆಯ ತತ್ವಗಳು (Behavioral Principles of Livestock Handling) ಎಂಬ ವಿಷಯಯವನ್ನು ಮಂಡಿಸಿದ್ದರು. ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿ.ಎಚ್.ಡಿ. ಪ್ರಾಧ್ಯಾಪಕಕರುಗಳು, ಸಂಶೋಧನಾ ವಿದ್ವಾಂಸರುಗಳು ಸೇರಿದಂತೆ 200 ಕ್ಕೂ ಹೆಚ್ಚು ಅಭ್ಯರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಸುಹಾಶ್ಚಂದ್ರ ಹೆಗಡೆ ಕೆಶಿನ್ಮನೆ ಅವರಿಗೆ ಪ್ರಾಣಿಶಾಸ್ತ್ರ ವಿಭಾಗದ ಡಾ. ಕಾರ್ತೀಕ ರಾವ್‌ ಇವರು ಮಾರ್ಗದರ್ಶನ ನೀಡಿದ್ದರು. ಸುಹಾಸ್ಚಂದ್ರ ಹೆಗಡೆ ಶ್ರೀಮತಿ ಸುಮಾ ಹಾಗೂ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಪುತ್ರನಾಗಿದ್ದು, ತಮ್ಮ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಭೈರುಂಬೆಯಲ್ಲಿ ಹಾಗೂ ಶಿರಸಿಯ ಚೈತನ್ಯ ವಿದ್ಯಾಲಯದಲ್ಲಿ ಪಿ.ಯು.ಸಿ. ವ್ಯಾಸಂಗವನ್ನು ಮಾಡಿರುತ್ತಾರೆ.

300x250 AD
Share This
300x250 AD
300x250 AD
300x250 AD
Back to top