Slide
Slide
Slide
previous arrow
next arrow

ಆರೋಹಿ ಶೈಕ್ಷಣಿಕ ಕೇಂದ್ರದಿಂದ ದೈಹಿಕ ಶಿಕ್ಷಕ ಜೋಗಳೇಕರ್‌ಗೆ ವರ್ಷದ ವ್ಯಕ್ತಿ ಗೌರವ

300x250 AD

 ಶಿರಸಿ : ಇಲ್ಲಿಯ ಆರೋಹಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕೇಂದ್ರದಿಂದ ತನ್ನ ಪ್ರಥಮ ವರ್ಷದ ವಾರ್ಷಿಕ ಸಮಾರೋಹದ ಅಂಗವಾಗಿ ಸಂಘಟಿಸಿದ್ದ ಸಂಗೀತ ಸನ್ಮಾನ ಕಾರ್ಯಕ್ರಮದಲ್ಲಿ ವರ್ಷದ ವ್ಯಕ್ತಿಯಾಗಿ ಸಾಮಾಜಿಕ ಕಾರ್ಯಕರ್ತ ಹಾಗೂ ಶಿರಸಿ ಲಯನ್ಸ್ ಶಾಲೆಯ ದೈಹಿಕ ಶಿಕ್ಷಕರಾದ ನಾಗರಾಜ ಜೋಗಳೇಕರ್‌ರವರನ್ನು ಸನ್ಮಾನಿಸಲಾಯಿತು.

ಗೌರವ ಸನ್ಮಾನವನ್ನು ಮುಖ್ಯ ಅಭ್ಯಾಗತರಾದ ಲಯನ್. ಉದಯ ಸ್ವಾದಿ, ಲಯನ್ಸ್ ಎಜ್ಯುಕೇಶನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರೋ. ರವಿ ನಾಯಕ, ಧಾರವಾಡ ಹಾಲು ಒಕ್ಕೂಟದ ಹಾಗೂ ಶಿರಸಿ ಕೆ.ಡಿ.ಸಿ.ಸಿ. ಬ್ಯಾಂಕ್‌ನ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೇಶಿನಮನೆ, ವಿದ್ವಾನ ದತ್ತಮೂರ್ತಿ ಭಟ್ಟ್ ರವರು ನೆರವೇರಿಸಿದರು.

ಸಮಾರೋಪ ಸಮಾರಂಭದಲ್ಲಿ ಸನ್ಮಾನ ನೇರವೇರಿಸಿ ಮಾತನಾಡಿದ ಯಕ್ಷಗಾನ ಕಲಾವಿದ ಹಾಗೂ ಉಪನ್ಯಾಸಕ ವಿ. ದತ್ತಮೂರ್ತಿ ಭಟ್ಟ, ಶಿವಮೊಗ್ಗ ಸಂಸ್ಥೆಯ ಕಾರ್ಯ ಚಟುವಟಿಕೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಪ್ರೊ. ರವಿ ನಾಯಕ ಮಾತನಾಡಿ, ಸಂಗೀತ ವಾತಾವರಣವನ್ನು ಚಿಕ್ಕ ಮಕ್ಕಳಲ್ಲಿ ಹುಟ್ಟಿಸುವದು ಮತ್ತು ಎಲೆಮರೆ ಕಾಯಿಯಂತೆ ಸಮಾಜದಲ್ಲಿ ಸೇವೆ ಗೈಯ್ಯುವರನ್ನು ಗೌರವಿಸುವ ಕೆಲಸ ನಿಜಕ್ಕೂ ಶ್ಲಾಘನೀಯವೆಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಆರೋಹಿಯ ಉಪಾಧ್ಯಕ್ಷರಾದ ಸಿ.ಎಸ್. ನಾರಾಯಣ ದೇಸಾಯಿ ಬೆಂಗಳೂರು, ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ಉಪನ್ಯಾಸಕ ಡಾ. ಹರೀಶ ಹೆಗಡೆ ಮಾತನಾಡಿ ಶುಭ ಹಾರೈಸಿದರು.
ಇದಕ್ಕು ಪೂರ್ವದಲ್ಲಿ ಸಂಗೀತ ಸಮಾರೋಹ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದ ಖ್ಯಾತ ಚಲನಚಿತ್ರ ನಟ ನೀರ್ನಳ್ಳಿ ರಾಮಕೃಷ್ಣ ಸಂಗೀತ ಆಲಿಸುವದರಿಂದ, ಅಭ್ಯಸಿಸುವುದರ ಪರಿಣಾಮ ಕುರಿತಾಗಿ ವಿವರಿಸುತ್ತ ತಮ್ಮ ಜೀವನದ ಸಂಗೀತಾಭ್ಯಾಸ ತನ್ಮೂಲಕ ನಟನಾಗಿ ಪರಿವರ್ತನೆಗೊಂಡ ಬಗೆ ವಿವರಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಲ್ಲೊಬ್ಬರಾದ ಲ. ಲೋಕೇಶ ಹೆಗಡೆ ಪ್ರಗತಿ ಟ್ರೇಡರ್ಸ್, ಶಿರಸಿ, ಟಿ.ಎಸ್.ಎಸ್. ನೀರ್ದೆಶಕರಾದ ಸೀತಾರಾಮ ಹೆಗಡೆ ನೀರ್ನಳ್ಳಿ ಮಾತನಾಡಿ ಮಕ್ಕಳಿಗೆ ಸಂಗೀತಾಭ್ಯಾಸ ಮಾಡಿಸುವುದು, ಸಂಸ್ಕಾರ ಕೊಡುವುದು ಎರಡು ಒಂದೇ. ಅವರ ಮುಂದಿನ ದಿನದ ಜೀವನದಲ್ಲಿ ಸಾಧನೆಗೆ ಭದ್ರ ಬುನಾದಿಯಾಗುತ್ತದೆ, ಏಕಾಗ್ರತೆ ಹಾಗೂ ಜೀವನದ ಗುರಿ ತಲುಪುವಲ್ಲಿ ಸಂಗೀತಾಭ್ಯಾಸ ಬಹಳ ಮುಖ್ಯವಾಗುತ್ತದೆ ಎಂದರು. ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಎನ್. ವಿ. ಜಿ ಭಟ್ ಮಾತನಾಡಿದರು. ವೇದಿಕೆಯಲ್ಲಿ ಹಿರಿಯ ಸಂಗೀತ ವಿದ್ವಾಂಸ ವಿ. ದತ್ತಾತ್ರೇಯ ಗಾಂವ್ಕರ್ ಚಿಟ್ಟೆಪಾಲ್, ಸಿ.ಎನ್.ನಾರಾಯಣ ದೇಸಾಯಿ, ಡಾ. ಹರೀಶ ಹೆಗಡೆ ವಿಜಯಪುರ, ಮುಂತಾದವರು ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದ ನಂತರ ಆರೋಹಿ ಸಂಗೀತ ಶಾಲೆಯ ಮಕ್ಕಳ ಗಾಯನ ಹಾಗೆ ಇದೇ ಪ್ರಥಮ ಬಾರಿಗೆ ಆಯೋಜಿಸಿದ್ದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಛೋಟಾ ಖ್ಯಾಲ್ ಸ್ಪರ್ಧೆಗಳು ನಡೆಯಿತು. ನಂತರದಲ್ಲಿ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಗಾಯನ ನಡೆಯಿತು. ಈ ಸಂದರ್ಭದಲ್ಲಿ ಅಭಿಷೇಕ ಮುರ್ಡೇಶ್ವರ  ತಬಲಾ ಸಾಥ್ ನೀಡಿದರು.
ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸಂಗೀತ ಶಿಕ್ಷಕಿ ದೀಪಾ ಶಶಾಂಕ್ ತಮ್ಮ ಸಂಗೀತ ಕಛೇರಿ ನಡೆಸಿಕೊಟ್ಟು ರಾಗ್ ಜೋಗನ್ನು ವಿಸ್ತಾರವಾಗಿ ಹಾಡಿದರು.
ಆಮಂತ್ರಿತ ಕಲಾವಿದರಾಗಿದ್ದ ವಿಜಯಪುರದ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಂಗೀತ ಉಪನ್ಯಾಸಕ ಖ್ಯಾತ ಗಾಯಕರು ಆದ ಡಾ. ಹರೀಶ ಹೆಗಡೆ ತಮ್ಮ ಗಾಯನವನ್ನು ನಡೆಸಿಕೊಟ್ಟು ಆರಂಭಿಕವಾಗಿ ರಾಗ್ ಭೂಪ್‌ನ್ನು ಪ್ರಸ್ತುತಗೊಳಿಸಿದರು. ತದನಂತರದಲ್ಲಿ ವಚನ್ ಭಕ್ತಿಗೀತೆ ಹಾಗೂ ಕೊನೆಯಲ್ಲಿ ರಾಗ್‌ಬೈರವಿಯಲ್ಲಿ ತರಾನ ಪ್ರಸ್ತುತಗೊಳಿಸುತ್ತ ಒಟ್ಟಾರೆ ಸಂಗೀತ ಕಾರ್ಯಕ್ರಮ ಸಮಾಪ್ತಿಗೊಳಿಸಿದರು. ಶಿಕ್ಷಕಿ ದೀಪಾ ಶಶಾಂಕ ಹಾಗೂ ಡಾ. ಹರೀಶ್ ಗಾಯನಕ್ಕೆ ಹಾರ್ಮೋನಿಯಂನಲ್ಲಿ ಸತೀಶ ಭಟ್ಟ ಹೆಗ್ಗಾರ್ ಹಾಗೂ ತಬಲಾದಲ್ಲಿ ಗಣೇಶ ಗುಂಡ್ಕಲ್ ಸಮರ್ಥವಾಗಿ ಸಾತ್ ನೀಡಿದರೆ ಹಿನ್ನೆಲೆಯ ತಾನ್ಪುರ ಹಾಗೂ ಸಹಗಾನದಲ್ಲಿ ಗಾಯಕಿ ಶ್ರೀಮತಿ ಕವಿತಾ ಹರೀಶ್‌ ಸಹಕರಿಸಿದರು. ಮುಂಜಾನೆಯಿಂದ ತಡರಾತ್ರಿಯವರೆಗೂ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಗ್ರಾಮೀಣ ಭಾಗದಲ್ಲಿ ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಮಾಡುತ್ತಿರುವ ಗಾಯಕ ಶ್ರೀ ಚೈತನ್ಯ ಸಂಗೀತ ಶಾಲೆ ಹೀಪ್ನಳ್ಳಿ ಇದರ ಸಂಗೀತ ಶಿಕ್ಷಕ ವಿ. ಶ್ರೀಧರ ಹೆಗಡೆ ದಾಸನಕೊಪ್ಪರವರನ್ನು ಗೌರವಿಸಲಾಯಿತು. ಆರೋಹಿ ಸಂಸ್ಥೆಯ ಅಧ್ಯಕ್ಷ ಮತ್ತು ಲಯನ್ಸ್ ಶಿಕ್ಷಣ ಸಂಸ್ಥೆಯ ಮುಖ್ಯಾಧ್ಯಾಪಕ ಶಶಾಂಕ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ನುಡಿಯೊಂದಿಗೆ ಕೊನೆಯಲ್ಲಿ ವಂದಿಸಿದರು. ನಿರೂಪಕ ಗಿರಿಧರ ಕಬ್ನಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

300x250 AD
Share This
300x250 AD
300x250 AD
300x250 AD
Back to top