Slide
Slide
Slide
previous arrow
next arrow

ಮನೆಮನೆ ಸಂಪರ್ಕಕ್ಕೆ ಆದ್ಯತೆ ನೀಡಿ ಗೆಲುವಿನ ಗುರಿ ಸಾಧಿಸಬೇಕು: ವಿಶ್ವೇಶ್ವರ ಹೆಗಡೆ ಕಾಗೇರಿ

300x250 AD

ಸಿದ್ದಾಪುರ: ಸಂಘಟನಾತ್ಮಕವಾಗಿ ನಾವು ಮನೆಮನೆ ಸಂಪರ್ಕಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡಲಿದ್ದೇವೆ. ಮನೆ ಮನೆ ಸಂಪರ್ಕವೇ ನಮ್ಮ ಮತದಾರರನ್ನು ತಲುಪಲು ಇರುವ ಪ್ರಮುಖ ಅವಕಾಶವಾಗಿದೆ. ಚುನಾವಣೆಗಾಗಿ ಸಂಘಟನಾತ್ಮಕವಾಗಿ ನಮ್ಮ ಕಾರ್ಯಕರ್ತರ ಸೈನ್ಯ ಪಡೆ ಸಿದ್ಧವಾಗಿದೆ. ಬಿಜೆಪಿ ಸಿರ್ಸಿ ಸಿದ್ದಾಪುರ ಕ್ಷೇತ್ರದಲ್ಲಿ ದಾಖಲೆ ಮತಗಳೊಂದಿಗೆ ಗೆಲುವು ಸಾಧಿಸಲಿದೆ ಎಂದು ಶಿರಸಿ- ಸಿದ್ದಾಪುರ ವಿಧನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ಹೇಗೆ ಇವೆ ಎನ್ನುವುದು ಇಡಿ ಕ್ಷೇತ್ರದ ಜನತೆಗೆ ರಾಜ್ಯದ ಜನತೆಗೆ ಸ್ಪಷ್ಟವಾಗಿ ತಿಳಿದಿದೆ. ರಾತ್ರಿ ಕಾಣುವ ಬಾವಿಗೆ ಹಗಲು ಏಕೆ ಬೀಳಬೇಕು ಎಂಬ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷ ಜಯಭೇರಿ ಗಳಿಸಲಿದೆ ಹಾಗೂ ರಾಜ್ಯದಲ್ಲಿ ಸಂಪೂರ್ಣ ಬಲದೊಂದಿಗೆ ಬಿಜೆಪಿ ಪಕ್ಷ ಆಡಳಿತಕ್ಕೆ ಬರಲಿದೆ ಎಂದರು.
ಶಿರಸಿ- ಸಿದ್ದಾಪುರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ನನ್ನ ಆಯ್ಕೆ ಮಾಡಿರುವುದಕ್ಕೆ ಹಾಗೂ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ನಾನು ನನ್ನ ರಾಜ್ಯದ ,ರಾಷ್ಟ್ರದ ನಾಯಕರಿಗೆ ನಮ್ಮ ವಿಭಾಗ ನಮ್ಮ ಜಿಲ್ಲೆ ಕ್ಷೇತ್ರದಿಂದ ಪ್ರಾರಂಭಿಸಿ ನಮ್ಮ ಮಹಾ ಶಕ್ತಿ ಕೇಂದ್ರ, ಶಕ್ತಿ ಕೇಂದ್ರ ನಮ್ಮ ಬೂತ್ ವರೆಗಿನ ಎಲ್ಲಾ ಪದಾಧಿಕಾರಿಗಳಿಗೂ ನಾನು ಕೃತಜ್ಞತೆ ಹಾಗೂ ಧನ್ಯವಾದಗಳು ಸಲ್ಲಿಸುತ್ತೇನೆ. ನಮ್ಮ ಪಕ್ಷದೊಳಗಿನ ಒಂದು ಪ್ರಜಪ್ರಭುತ್ವದ ತಳಪಾಯದಲ್ಲಿ ಈ ಎಲ್ಲಾ ಆಯ್ಕೆ ಪ್ರಕ್ರಿಯೆಗಳು ನಡೆದಿದೆ. ನಮ್ಮ ಶಕ್ತಿ ಕೇಂದ್ರದ, ಅಧ್ಯಕ್ಷರ ಮೂಲಕ ಅಭ್ಯರ್ಥಿ ಆಯ್ಕೆಗೆ ಅಭಿಪ್ರಾಯ ತೆಗೆದುಕೊಳ್ಳಲಾಗಿದೆ. ನಮ್ಮ ಮಂಡಲ ಜಿಲ್ಲೆ ವಿಭಾಗ ರಾಜ್ಯ ರಾಷ್ಟ್ರ ಈ ಎಲ್ಲಾ ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆದು ಅಂತಿಮವಾಗಿ ನನ್ನ ಹೆಸರು ಘೋಷಣೆಯಾಗಿದೆ ಎಂದು ಸ್ಪಷ್ಟಪಡಿಸಿದರು.

300x250 AD

ನಮ್ಮ ಆಡಳಿತ ಅವಧಿಯಲ್ಲಿ ನಾನು ಮಾಡಿದ ಕೆಲಸ ನಮ್ಮ ಕ್ಷೇತ್ರದ ಜನತೆಯ ಕಣ್ಣೆದುರು ಇದೆ. ನಾನು ಸ್ಪೀಕರ್ ಆಗಿದ್ದು ಇಷ್ಟೊಂದು ಅಭಿವೃದ್ಧಿ ಕೆಲಸಕ್ಕೆ ಕಾರಣವಾಗಿದೆ. ಈ ಅಭಿವೃದ್ಧಿಗೆ ಕಾರಣವಾದವರು ಆಡಳಿತ ಪಕ್ಷದಲ್ಲಿರುವವರು ಪ್ರತಿಪಕ್ಷದಲ್ಲಿ ಇರುವವರು ಹಾಗೂ ಎಲ್ಲಾ ಗೌರವಾನ್ವಿತ ಸದಸ್ಯರು ಅಧಿಕಾರಿಗಳು ನನ್ನ ಮಾಧ್ಯಮ ಸ್ನೇಹಿತರು ಸಚಿವಾಲಯದ ಸಿಬ್ಬಂದಿಗಳು ಎಲ್ಲರೂ ಕಾರಣಿ ಕರ್ತರಾಗಿದ್ದಾರೆ. ಹಿಂದೆ0ದೂ ಕಾಣದ ವೇಗದಲ್ಲಿ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿಯಾಗಿದೆ. ಸಿದ್ದಾಪುರಕ್ಕೆ ಒಂದು ಕೆ ಎಸ್ ಆರ್ ಟಿ ಸಿ ಡಿಪೋ ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ಉತ್ತಮವಾದ ಒಂದು ಸ್ವಿಮಿಂಗ್ ಫೋನ್, ರಾಜ ಕಾಲುವೆ ಕಾಮಗಾರಿ ಹೀಗೆ ಆಗಬೇಕಿದೆ ಅಭಿವೃದ್ಧಿ ಕೆಲಸಗಳು ಒಂದಾದ ನಂತರ ಒಂದು ಬರುತ್ತದೆ. ಕ್ಷೇತ್ರದ ಜನತೆ ನನ್ನನ್ನು ಬೆಂಬಲಿಸಿ ಗೆಲ್ಲಿಸುತ್ತಾರೆ ನಾವು ಬಹುಮತದ ಸರ್ಕಾರವನ್ನು ರಚನೆ ಮಾಡುತ್ತೇವೆ ಒಳ್ಳೆಯ ವೇಗವಾದ ಅಭಿವೃದ್ಧಿ ಕಾರ್ಯಗಳು ಮಾಡಲು ನಾವು ಕಾರ್ಣಿಕತರಾಗುತ್ತೇವೆ ಎಂದರು.

Share This
300x250 AD
300x250 AD
300x250 AD
Back to top