• Slide
    Slide
    Slide
    previous arrow
    next arrow
  • ಏ.18ಕ್ಕೆ ಅಂಬಾಭವಾನಿ ದೇವಿಯ ವಾರ್ಷಿಕೋತ್ಸವ

    300x250 AD

    ಕಾರವಾರ: ಬೈತಖೋಲ ಗ್ರಾಮದಲ್ಲಿರುವ ಶ್ರೀ ಅಂಬಾಭವಾನಿ ದೇವಿಯ ವಾರ್ಷಿಕೋತ್ಸವ (ಜಾತ್ರೆ) ಇದೇ ಏ.18ರಂದು ನಡೆಯಲಿದೆ.
    ಅಂದು ಬೆಳಿಗ್ಗೆ 9 ಗಂಟೆಗೆ ಶುದ್ಧಹವನ, ಶ್ರೀದೇವಿಗೆ ಅಬಿಷೇಕ, ಮಧ್ಯಾಹ್ನ 12.30 ಗಂಟೆಗೆ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ತದನಂತರ ಉಡಿ ತುಂಬುವ ಕಾರ್ಯಕ್ರಮ, ಸಂಜೆ 4 ಗಂಟೆಗೆ ಬೈತಖೋಲ ಗ್ರಾಮದಲ್ಲಿ ಶ್ರೀದೇವಿಯ ಪಲ್ಲಕ್ಕಿ ಮೆರವಣಿಗೆ, ಪಲ್ಲಕ್ಕಿ ದೇವಸ್ಥಾನಕ್ಕೆ ಬಂದ ಮೇಲೆ ಮಹಾಮಂಗಳಾರತಿ, ದೇವಿಯ ಸನ್ನಿಧಾನದಲ್ಲಿ ಬಂದ0ತಹ ಫಲ- ಫಲಾವಳಿಗಳ ಲೀಲಾವು, ಪ್ರಸಾದ ವಿತರಣೆ ನಡೆಯಲಿದೆ.
    ಆದ್ದರಿಂದ ಎಲ್ಲಾ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಅಂಬಾಭವಾನಿ ದೇವಸ್ಥಾನದ ಟೆಂಪಲ್ ಕಮಿಟಿ ಹಾಗೂ ಕುಳಾವಿ ಕುಟುಂಬದ ಸದಸ್ಯರು ವಿನಂತಿಸಿಕೊ0ಡಿದ್ದಾರೆ.


    ಗೋಂದಳ ಉತ್ಸವ 21ಕ್ಕೆ
    ಪ್ರತಿ 3 ವರ್ಷಕ್ಕೊಮ್ಮೆ ನಡೆಯಲಿರುವ ಶ್ರೀ ಅಂಬಾಭವಾನಿ ದೇವಿಯ ಗೋಂದಳ ಉತ್ಸವವು ಏ.21ರಂದು ನಡೆಯಲಿದ್ದು, ಅಂದು ಬೆಳಿಗ್ಗೆ 9 ಗಂಟೆಯಿ0ದ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ ನಡೆಯುವುದು. ಅದೇ ದಿನ ರಾತ್ರಿ 8 ಗಂಟೆಯಿ0ದ 11 ಗಂಟೆಯವರೆಗೆ ಶ್ರೀಅಂಬಾಭವಾನಿ ದೇವಸ್ಥಾನದ ವತಿಯಿಂದ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top