ಅಂಕೋಲಾ: ತಾಲೂಕಿನ ಮಂಜಗುಣಿಯ ಶ್ರೀ ಮಹಾದೇವಿ ದೇವಸ್ಥಾನದಲ್ಲಿ ಏ.17ರಂದು ವರ್ಧಂತಿ ಉತ್ಸವ ಹಾಗೂ 18ರಂದು ಜಾತ್ರಾ ಮಹೋತ್ಸವವು ನಡೆಯಲಿದೆ.
17ರಂದು ಬೆಳಿಗ್ಗೆ 9ರಿಂದ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾಗುವುದು. ಸಾಮೂಹಿಕ ಪ್ರಾರ್ಥನೆ, ಗಣೇಶ ಪೂಜೆ, ಶ್ರೀ ಸೂಕ್ತ ಹೋಮ, ಮಧ್ಯಾಹ್ನ 12.30 ಘಂಟೆಗೆ ಪೂರ್ಣಾಹುತಿ, ಮಂಗಳಾರತಿ, ಪ್ರಾರ್ಥನೆ, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ.
18ರ ಜಾತ್ರಾ ಮಹೋತ್ಸವದಂದು ಬೆಳಿಗ್ಗೆ 7 ಘಂಟೆಯಿOದ ಅಭಿಷೇಕ, 10 ಘಂಟೆಯಿ0ದ ಭಕ್ತರಿಂದ ಉಡಿಸೇವೆ ಇತ್ಯಾದಿ ಸ್ವೀಕರಿಸುವುದು. ಮಧ್ಯಾಹ್ನ 12 ಘಂಟೆಯಿAದ ಶ್ರೀ ದೇವಿಯ ಮಹಾಪೂಜೆ, ಹರಕೆ ಇತ್ಯಾದಿ ಹಾಗೂ ಮಧ್ಯಾಹ್ನ 3 ರಿಂದ ರಾತ್ರಿ 9 ಘಂಟೆಯವರೆಗೆ ಪಲ್ಲಕ್ಕಿ ಉತ್ಸವ, ಮಹಾ ಮಂಗಳಾರತಿ, ಪ್ರಸಾದ ವಿತರಣೆ, ನಂತರ ಶ್ರೀ ದೇವಿಯ ಫಲಾವಳಿಗಳ ಲಿಲಾವು, ನಂತರ ರಾತ್ರಿ 11-30 ಘಂಟೆಗೆ ಜಾತ್ರೋತ್ಸವದ ಅಂಗವಾಗಿ ಶ್ರೀ ಮಹಾದೇವಿ ಯುವ ನಾಟ್ಯ ಮಂಡಳಿ, ಮಂಜಗುಣಿ ಇವರಿಂದ ‘ಸ್ವಾಭಿಮಾನಿ ಹೆಂಡತಿಗೆ ಶಾಪವಾದ ಗಂಡ’ ಅರ್ಥಾತ್ ‘ಬಂಗಾರದOತ ಮಗ’ ನಾಟಕ ಪ್ರದರ್ಶನ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಅರ್ಚಕ ರಾಜೇಶ ಬಾನಾವಳಿಕರ ತಿಳಿಸಿದ್ದಾರೆ.