Slide
Slide
Slide
previous arrow
next arrow

ಕಾರ್ಖಾನೆಯ ಕಾರ್ಮಿಕರಿಂದ ಚುನಾವಣೆ ಬಹಿಷ್ಕಾರ; ತಹಶೀಲ್ದಾರ ಮಾತುಕತೆ

300x250 AD

ದಾಂಡೇಲಿ: ತಾಲೂಕಿನ ಕೇರವಾಡದಲ್ಲಿರುವ ಶ್ರೇಯಸ್-ಶ್ರೀನಿಧಿ ಕಾರ್ಖಾನೆಯು ಸ್ಥಗಿತಗೊಂಡು ಉದ್ಯೋಗವಿಲ್ಲದೆ ಹಾಗೂ ವೇತನ, ಪಿಎಫ್, ಇಎಸ್‌ಐ ಸೌಲಭ್ಯದಿಂದ ವಂಚಿತರಾಗಿ ಸಂಕಷ್ಟವನ್ನು ಅನುಭವಿಸುತ್ತಿರುವ ಕಾರ್ಖಾನೆಯ ಕಾರ್ಮಿಕರು ನ್ಯಾಯಕ್ಕಾಗಿ ಆಗ್ರಹಿಸಿ ಈ ಬಾರಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಮತದಾನವನ್ನು ಬಹಿಷ್ಕರಿಸುವ ನಿರ್ಧಾರವನ್ನು ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಹಳೆ ನಗರಸಭೆಯ ಆವರಣದಲ್ಲಿ ತಹಶೀಲ್ದಾರ್ ಅಶೋಕ್ ಶಿಗ್ಗಾವಿಯವರು ಕಾರ್ಮಿಕರ ಜೊತೆ ಮಾತುಕತೆ ನಡೆಸಿದರು.

ತಹಶೀಲ್ದಾರ್ ಅಶೋಕ್ ಶಿಗ್ಗಾವಿಯವರ ಜೊತೆ ಬಿ.ಎಂ.ಎಸ್ ಸಂಘಟನೆಯ ಉಪಾಧ್ಯಕ್ಷ ಭರತ್ ಪಾಟೀಲ್ ಮತ್ತು ಸಂಘದ ಪ್ರಮುಖರಾದ ಗಜಾನನ ಮಾಳವದೆಯವರು ಕಳೆದ ಮೂರು ವರ್ಷಗಳಿಂದ ಶ್ರೇಯಸ್- ಶ್ರೀನಿಧಿ ಕಾರ್ಖಾನೆಯ ಕಾರ್ಮಿಕರು ಅನುಭವಿಸುತ್ತಿರುವ ಪರಿಸ್ಥಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು, ಕಾರ್ಮಿಕರಿಗೆ ಬದುಕು ನೀಡಿ ಎಂದು ಮನವಿ ಮಾಡಿದರು.
ಮತದಾನ ಬಹಿಷ್ಕಾರದ ನಿರ್ಧಾರವನ್ನು ವಾಪಾಸ್ಸು ಪಡೆದುಕೊಳ್ಳಬೇಕು. ನಿಮ್ಮ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ನ್ಯಾಯಯುತವಾಗಿ ಸ್ಪಂದಿಸುವುದಾಗಿ ಅಶೋಕ್ ಶಿಗ್ಗಾವಿಯವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಕಚೇರಿಯ ಕಂದಾಯ ನಿರೀಕ್ಷಕ ರಾಘವೇಂದ್ರ ಪಾಟೀಲ್, ಮುಕುಂದ್, ದಯಾನಂದ ಚಿಟ್ಟಿ ಹಾಗೂ ಕಾರ್ಮಿಕರು ಇದ್ದರು.

300x250 AD
Share This
300x250 AD
300x250 AD
300x250 AD
Back to top