Slide
Slide
Slide
previous arrow
next arrow

ಸಮಸ್ಯೆಗಳು ಪರಿಹಾರವಾಗಿವೆ, ಗೆಲುವಿನ ಗುರಿ ಕಡೆ ಸಾಗೋಣ: ಗಣಪತಿ ಉಳ್ವೇಕರ್

300x250 AD

ಕಾರವಾರ: ನಗರದ ಹೈಚರ್ಚ್ ರಸ್ತೆಯಲ್ಲಿನ ಪಂಚತಾರ ಹೋಟೆಲ್‌ನ ಕೆಳಭಾಗದಲ್ಲಿ ನೂತನವಾಗಿ ಆರಂಭಿಸಲಾದ ಬಿಜೆಪಿಯ ಚುನಾವಣಾ ಕಾರ್ಯಾಲಯವನ್ನು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಈವರೆಗೆ ವೈಯಕ್ತಿಕವಾಗಿ, ರಾಜಕೀಯವಾಗಿ ಸಣ್ಣಪುಟ್ಟ ಸಮಸ್ಯೆಗಳು ಇದ್ದವು. ಆದರೆ ಆ ಎಲ್ಲಾ ಸಮಸ್ಯೆಗಳಿಗೆ ಈಗ ಪರಿಹಾರ ಸಿಕ್ಕಿದೆ. ಹೋಮಕ್ಕೆ ಆಹುತಿಯಾದ ಕರಿ ಎಳ್ಳಿನಂತೆ ಎಲ್ಲವೂ ಸುಟ್ಟು ಹೋಗಿದೆ. ಹಿಂದೊ0ದು- ಮುಂದೊ0ದು ಮಾತನಾಡುವುದನ್ನ ಇಟ್ಟುಕೊಳ್ಳದೇ, ಒಂದೇ ಆಯ್ಕೆ, ಒಂದೇ ಛಲವಿಟ್ಟುಕೊಂಡು ಗೆಲುವೇ ನಮ್ಮ ಗುರಿಯಾಗಿರಲಿ ಎಂದು ಹೇಳಿದರು.
ಶುಕ್ರವಾರ ಶುಭದಿನದಂದು ಈ ಕಾರ್ಯಾಲಯ ಉದ್ಘಾಟನೆಯಾಗಿದೆ. ಎಲ್ಲರಿಗೂ ಒಳ್ಳೆಯದಾಗಲಿದೆ. ಪ್ರಧಾನಿಯವರ ಮಾರ್ಗದರ್ಶನ, ಮುಖ್ಯಮಂತ್ರಿ ಬೊಮ್ಮಾಯಿಯವರ ನೇತೃತ್ವದಲ್ಲಿ ರಾಜ್ಯ, ಜಿಲ್ಲೆ, ಕ್ಷೇತ್ರಕ್ಕೆ ಬಹಳಷ್ಟು ಯೋಜನೆಗಳು ಬಂದಿರುವುದರಿ0ದ ನಮಗೆ ಮತ ಕೇಳುವ ಹಕ್ಕಿದೆ. ಆರಕ್ಕೆ ಆರೂ ಕ್ಷೇತ್ರದಲ್ಲೂ ಕಾರ್ಯಕರ್ತರ ಜವಾಬ್ದಾರಿ ಹೆಚ್ಚಿದೆ. ಜಿಲ್ಲೆಯ ಆರೂ ಕ್ಷೇತ್ರಕ್ಕೂ ಪ್ರಚಾರಕ್ಕೆ ತೆರಳಿ ಆರೂ ಕ್ಷೇತ್ರವನ್ನೂ ಗೆಲ್ಲಿಸಲು ಪ್ರಯತ್ನಿಸೋಣ. ಇಲ್ಲಿ ರೂಪಾಲಿ ನಾಯ್ಕ ಅವರನ್ನ ಹೆಚ್ಚಿನ ಮತದಿಂದ ಗೆಲ್ಲಿಸೋಣ ಎಂದು ಕರೆನೀಡಿದರು.

ವಿಭಾಗದ ಸಹ ಪ್ರಭಾರಿ ಎನ್.ಎಸ್.ಹೆಗಡೆ ಮಾತನಾಡಿ, ಚುನಾವಣಾ ದೃಷ್ಟಿಯನ್ನ ಗಮನದಲ್ಲಿಟ್ಟುಕೊಂಡು ದಿನನಿತ್ಯದ ಚುನಾವಣಾ ಚಟುವಟಿಕೆಗಳು ಇಲ್ಲಿಂದಲೇ ಆಗಬೇಕು. ಎಲ್ಲಾ ಕಾರ್ಯಕರ್ತರಿಗೆ ಸೇರಲು ಅನುಕೂಲವಾಗವೇಕೆಂಬ ಕಾರಣಕ್ಕೆ ಈ ಕಾರ್ಯಾಲಯ ಉದ್ಘಾಟಿಸಲಾಗಿದೆ. ದಿನನಿತ್ಯದ ಸಮನ್ವಯಗಳು ಈ ಕೇಂದ್ರದಿಂದಲೇ ಆಗಬೇಕು. ಕಾರ್ಯಾಲಯ ಎಂದರೆ ಸಮನ್ವಯತೆಯ ಕೇಂದ್ರ. ಇದು ಕೇವಲ ಕುಳಿತುಕೊಳ್ಳಲು ತೆರೆಯಲಾದ ಕೇಂದ್ರವಲ್ಲ, ಕಾರ್ಯಚಟುವಟಿಕೆಗಾಗಿ ಇರುವ ಕೇಂದ್ರ. ಇಲ್ಲಿ ರಾಜಕೀಯ ವಾತಾವರಣ ನಿರ್ಮಾಣವಾಗಬೇಕು. ಪ್ರಚಾರ ಮಾಡುವ ಕಾರ್ಯಕರ್ತರ ದಣಿವು ನಿವಾರಿಸುವ ಕೇಂದ್ರ ಇದಾಗಬೇಕು. ಸಣ್ಣಪುಟ್ಟ ವ್ಯತ್ಯಾಸಗಳಿದ್ದರೆ ಇಲ್ಲಿ ಎಲ್ಲವನ್ನೂ ಸರಿಪಡಿಸಿಕೊಂಡು ಹೋಗಬೇಕು. ಪ್ರಚಾರಕ್ಕೆ ಹೋದಾಗ ಎಲ್ಲೂ ವಾದ ಮಾಡದೆ, ಅಭಿವೃದ್ಧಿ ಆಧಾರದಲ್ಲಿ ಚರ್ಚೆ ಮಾಡಬೇಕು, ಅದರ ಆಧಾರದಲ್ಲಿ ಚುನಾವಣೆ ಗೆಲ್ಲಬೇಕು. ಸಂಘಟನೆ ಶಕ್ತಿ ಗಟ್ಟಿ ಮಾಡಬೇಕು. ಮೇ 13ರ ಎಣಿಕೆಯ ದಿನ ರೂಪಾಲಿ ನಾಯ್ಕ ಗೆದ್ದಿದ್ದಾರೆ ಎಂಬ ಸಂದೇಶ ಬರಬೇಕು ಎಂದರು.

300x250 AD

ಕ್ಷೇತ್ರ ಸಂಚಾಲಕ ಜಗದೀಶ್ ನಾಯಕ ಮೊಗಟಾ, ನಮ್ಮ ಕೆಲಸ ಹಿಂದೊOದು- ಮುಂದೊOದು ಇರದೆ ನೇರವಾಗಿರಬೇಕು. ಪಕ್ಷದ ಮಾರ್ಗದರ್ಶನದಂತೆ ಕಾರ್ಯಕ್ರಮಗಳಾಗಬೇಕು. ಪ್ರಾಮಾಣಿಕವಾಗಿ ಪಕ್ಷದ ಕಾರ್ಯಕರ್ತರಾಗಿ ಕೆಲಸ ಮಾಡಬೇಕು. ಈ ಬಾರಿಯೂ ಡಬಲ್ ಎಂಜಿನ್ ಸರ್ಕಾರ ಬರಲಿದೆ. ರೂಪಾಲಿಯವರನ್ನ ಈ ಬಾರಿಯೂ ಆಯ್ಕೆ ಮಾಡಿ, ಶಾಸಕಿಯಿಂದ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನ ಮಾಡಿಸಿಕೊಳ್ಳಬೇಕು ಎಂದರು.

ಬಿಜೆಪಿ ಹಿಂದುಳಿದ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜೇಂದ್ರ ನಾಯ್ಕ ಮಾತನಾಡಿ, ಬಿಜೆಪಿಗೆ ಯಾಕೆ ಮತ ಕೊಡಬೇಕು ಎಂದು ಬೂತ್‌ಗಳಲ್ಲಿ ಜನತೆ ಖಂಡಿತವಾಗಿ ಪ್ರಶ್ನೆ ಕೇಳುತ್ತಾರೆ. ಭಾರತದ ರಕ್ಷಣೆಗೆ, ಅಖಂಡತ್ವ, ಸಾರ್ವಭೌಮತ್ವ, ಹಿಂದುತ್ವದ ರಕ್ಷಣೆ ಬಿಜೆಪಿಯಿಂದ ಮಾತ್ರ ಸಾಧ್ಯ ಎನ್ನುವುದನ್ನ ಅಂಥವರಿಗೆ ಹೇಳಬೇಕು. ಹಿಂದುತ್ವದ ರಕ್ಷಣೆ ದೇಶದ ಯಾವುದೇ ಪಾರ್ಟಿಯಿಂದ ಸಾಧ್ಯವಿಲ್ಲ. ಅದು ಬಿಜೆಪಿಯಿಂದ ಮಾತ್ರ ಸಾಧ್ಯ ಎನ್ನುವುದನ್ನ ಮತದಾರರಿಗೆ ಹೇಳಬೇಕು. ದೇಶ ಸುಭದ್ರವಾಗಿದ್ದರೆ ಮಾತ್ರ ನಾವೆಷ್ಟೇ ಆಸ್ತಿ ಮಾಡಿದರೂ ರಕ್ಷಣೆ ಮಾಡಿಕೊಳ್ಳಲು ಸಾಧ್ಯ. 2014ರ ಮೊದಲು ದೇಶ ಹೇಗಿತ್ತು, ಈಗ ಹೇಗಿದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಪ್ರಧಾನಿಯವರಿಂದ ಹೇಗೆ ಅಭಿವೃದ್ಧಿ ಆಗಿದೆಯೋ ಹಾಗೇ ಶಾಸಕಿ ರೂಪಾಲಿ ನಾಯ್ಕ ಅವರಿಂದ ಕ್ಷೇತ್ರದ ಅಭಿವೃದ್ಧಿ ಆಗಿದೆ. ಕೇವಲ ಅಂಕೋಲಾದಲ್ಲೇ ನಾವು ಈ ಬಾರಿ 20 ಸಾವಿರ ಲೀಡ್ ಕೊಡುತ್ತೇವೆ, ಇದನ್ನು ಬರೆದಿಟ್ಟುಕೊಳ್ಳಿ. ಬೂತ್ ಮಟ್ಟದಲ್ಲಿ ಕೆಲಸ ಮಾಡಿ ಬಹುಮತದಿಂದ ಆಯ್ಕೆ ಮಾಡಿ, ಉಳ್ವೇಕರ್ ಅವರ ಕೈಯನ್ನೂ ಬಲಪಡಿಸೋಣ ಎಂದರು.
ಬಿಜೆಪಿ ರೈತ ಮೋರ್ಚಾದ ರಾಜ್ಯ ಕಾರ್ಯದರ್ಶಿ ಪ್ರಸನ್ನ ಕೆರೆಕೈ, ಈ ಕಚೇರಿ ಕಾರ್ಯಕ್ಕೆ ಆಲಯವಾಗಲಿ. ಚುನಾವಣಾ ನಿರ್ವಹಣಾ ಸಮಿತಿಗಳು, ತಂಡದೊOದಿಗೆ ಶಿಸ್ತುಬದ್ಧ ಕೆಲಸಗಳಾಗಲಿ. ಸಂಘಟನಾತ್ಮಕವಾಗಿ, ಶಿಸ್ತುಬದ್ಧವಾಗಿ ಚುನಾವಣೆ ನಡೆಸುವ ವಾತಾವರಣ ರೂಪುಗೊಳ್ಳಲಿ ಎಂದು ಹಾರೈಸಿದರು.
ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಅತಿ ಕಡಿಮೆ ಸಮಯದಲ್ಲಿ ನಿಗದಿಯಾಗಿ ಕಚೇರಿಯ ಉದ್ಘಾಟನಾ ಕಾರ್ಯಕ್ರಮವಾಗಿದೆ. ಕಚೇರಿಯೆಂದರೆ ಯದ್ವಾತದ್ವ ಇರುವಂಥದ್ದಲ್ಲ. ಈ ಚುನಾವಣಾ ಕಾರ್ಯಾಲಯಕ್ಕೆ ತನ್ನದೇ ಆದ ಮಹತ್ವ ಇದೆ. ನೀತಿ ಸಂಹಿತೆಯ ಪಾಲನೆಯೊಂದಿಗೆ ಚುನಾವಣಾ ಕಾರ್ಯಾಲಯ ನಡೆಸುವಂತಾಗಬೇಕು. ನಗರದ ಮಧ್ಯ ಭಾಗದಲ್ಲಿ ಕಚೇರಿ ಇರುವುದರಿಂದ ನಮ್ಮನ್ನು ಗಮನಿಸುವವರು ಹೆಚ್ಚಿರುವುದರಿಂದ ಸಂಯಮದಿOದ ವರ್ತಿಸಬೇಕು. ಜಿಲ್ಲೆಯಲ್ಲಿ ಒಂದು ಮತವೂ ಮಹತ್ವದ್ದು. ಆರಕ್ಕೆ ಆರು ಕ್ಷೇತ್ರದಲ್ಲಿ ಬಿಜೆಪಿಗೆ ಮತ ಕೊಡಬೇಕು. ಹಿಂದೆಮು0ದೆ ಕಾಲೆಳೆಯುವ ಕೆಲಸಗಳಾಗುತ್ತದೆ. ಕೆಲವರು ನಮ್ಮನ್ನು ಒಡೆಯಲು ಹೊಂಚು ಹಾಕುತ್ತಿರುತ್ತಾರೆ. ಕಾರ್ಯಕರ್ತರು ಗಟ್ಟಿಯಾಗಿ ನಿಲ್ಲಬೇಕು. ರಾಜ್ಯದಲ್ಲಿ ಮತ್ತೆ ನಮ್ಮ ಸರ್ಕಾರ ರಚನೆಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share This
300x250 AD
300x250 AD
300x250 AD
Back to top