• Slide
    Slide
    Slide
    previous arrow
    next arrow
  • ಪ್ರಾಮಾಣಿಕವಾಗಿ ಮಾಡಿದ ಕೆಲಸ ಗುರುತಿಸಿ ಪಕ್ಷ ಟಿಕೆಟ್ ನೀಡಿದೆ: ಸ್ಪೀಕರ್ ಕಾಗೇರಿ

    300x250 AD

    ಶಿರಸಿ: ವಿಧಾನ ಸಭಾ ಸ್ಪೀಕರ್ ಆಗಿ, ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದನ್ನು ಗುರುತಿಸಿ ಪಕ್ಷ ಈ ಬಾರಿಯೂ ಟಿಕೆಟ್‌ ನೀಡಿದೆ. ಏ.18 ರಂದು ನಾಮಪತ್ರ ಸಲ್ಲಿಸುವುದಾಗಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

    ಇಲ್ಲಿನ ಧೀನದಯಾಳ ಭವನದಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಳೆದ ನಾಲ್ಕು ವರ್ಷಗಳಿಂದ ಪಕ್ಷದ ಚಟುವಟಿಕೆಯಿಂದ ದೂರ ಇದ್ದೆ. ಬುಧವಾರ ಬೆಂಗಳೂರಿನ‌ ಪಕ್ಷದ ಕಾರ್ಯಾಲಯಕ್ಕೆ ಭೇಟಿ ನೀಡಿ ಮತ್ತೆ ಸದಸ್ಯತ್ವ ಪಡೆದುಕೊಂಡಿದ್ದೇನೆ. ನಮ್ಮ ಕ್ಷೇತ್ರದ ಮತದಾರರು ಎಂದೂ ಸಭಾಧ್ಯಕ್ಷ, ಶಾಸಕ ಎಂದು ವಿಶೇಷವಾಗಿ ನೋಡಿಲ್ಲ. ನಾನೂ ಸಭಾಧ್ಯಕ್ಷನಾಗಿ, ಶಾಸಕನಾಗಿ ಇಲ್ಲಿನ ಜನರನ್ನು ನನ್ನ ಮತದಾದರು ಎನ್ನುವ ಭಾವನೆಯಿಂದ ನೋಡಿಲ್ಲ.

    300x250 AD

    ನಮ್ಮ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಸೂಕ್ತ ಸಲಹೆ ಸೂಚನೆ ನೀಡಬಹುದು ಎಂದರು. ನಗರ ಮಂಡಲದ ಅಧ್ಯಕ್ಷ ರಾಜೇಶ ಶಿಟ್ಟಿ, ನರಸಿಂಹ ಹೆಗಡೆ, ಗಣಪತಿ ನಾಯ್ಕ, ವೀಣಾ ಶೆಟ್ಟಿ, ದೀಪಾ ಮಹಾಲಿಂಗಣ್ಣನವರ್, ನಂದನಸಾಗರದ ಸದಾನಂದ ಭಟ್ ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top