ಯಲ್ಲಾಪುರ: ಮಂಚೀಕೇರಿಯ ಶ್ರೀರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಶಿಕ್ಷಕ ಮತ್ತು ಶಿಕ್ಷಕೇತರ ನಿವೃತ್ತ ಉದ್ಯೋಗಿಗಳು ತಾವು ದುಡಿದ ಸಂಸ್ಥೆಗೆ 2.25 ಲಕ್ಷ ರೂ.ಗಳ ನಿಧಿಯನ್ನು ಸಂಸ್ಥೆಯ ಖಾಯಂ ಠೇವಣಿ ಇಡಲು ನೀಡಿದ್ದಾರೆ.
ನಿವೃತ್ತ ಶಿಕ್ಷಕರು ಹಾಗೂ ಸಿಬ್ಬಂದಿಗಳು ನೀಡಿದ ಹಣವನ್ನು ಕಾಯಂ ಠೇವಣಿಯಾಗಿ ಆರ್ಥಿಕ ಸಂಸ್ಥೆಯಲ್ಲಿ ಇಡಬೇಕೆಂದು ಬಯಸಿದ್ದು, ಇದರಿಂದ ಬರುವ ಬಡ್ಡಿಯನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಉಪಯೋಗಿಸಲು ಕೋರಿದ್ದಾರೆ. ಈ ಹಣದಿಂದ ಬರುವ ಬಡ್ಡಿಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಪ್ರೋತ್ಸಾಹಧನ ನೀಡುವಂತೆ ತಿಳಿಸಿದ್ದಾರೆ.
ನಿಧಿ ಸಮರ್ಪಣೆಯ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರು, ಸಿಬ್ಬಂದಿ ಪಿ.ಎಲ್.ಶಾಸ್ತ್ರೀ ಗೊಣಸರಮನೆ, ವಿ.ಜಿ.ಭಟ್ಟ ಹೊಸ್ಮನೆ ಚವತ್ತಿ, ಪಿ.ಎಸ್. ಫಾಯದೆ ಮಂಚಿಕೇರಿ, ಜಿ.ಟಿ.ಹೆಗಡೆ ಹೊನ್ನಾವರ, ಸುಬ್ರಹ್ಮಣ್ಯ ಶರ್ಮ ಹಾಸಣಗಿ, ಜಿ.ಜಿ.ಹೆಗಡೆ ಗೋರ್ಸಗದ್ದೆ, ಪಿ.ಮುಕುಂದ ಹಾಸಣಗಿ, ಜಿ.ಟಿ.ಭಟ್ಟ ಬೊಮ್ನಳ್ಳಿ, ಎಚ್.ಜಿ.ಹೆಗಡೆ ಕುಮಟಾ, ಎಂ.ಸಿ.ಜಮಾದಾರ ಬೆಳಗಾವಿ, ಐ.ಐ.ಶೇಖಖ್ ಮಂಚಿಕೇರಿ ಮುಂತಾದ ದಾನಿಗಳು ಇದ್ದರು.