Slide
Slide
Slide
previous arrow
next arrow

ಇಂಡಿಯಾಸ್ ಡ್ಯಾನ್ಸ್ ಪವರ್‌: ಜಿಲ್ಲೆಯ ತನುಶ್ರೀ, ಧಾತ್ರಿ ಉತ್ತಮ ಪ್ರದರ್ಶನ

300x250 AD

ದಾಂಡೇಲಿ: ನಗರದ ಅಭಿಷೇಕ್ ಡ್ಯಾನ್ಸ್ ಅಕಾಡೆಮಿಯ ವಿದ್ಯಾರ್ಥಿನಿಯರಾದ ತನುಶ್ರೀ ಬೋವಿ ಮತ್ತು ಧಾತ್ರಿ ಗೌಡ ಭೋಪಾಲ್‌ನಲ್ಲಿ ನಡೆಯುತ್ತಿರುವ ಇಂಡಿಯಾಸ್ ಡ್ಯಾನ್ಸ್ ಪವರ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ ಮುಂದಿನ ಸುತ್ತಿಗೆ ಆಯ್ಕೆಯಾಗಿದ್ದಾರೆ.
ಜೊಯಿಡಾ ಪೊಲೀಸ್ ಠಾಣೆಯಲ್ಲಿ ಎಎಸೈಯಾಗಿರುವ ದಾಮೋದರ್ ಭೋವಿ ಸುಪುತ್ರಿಯಾದ ನಗರದ ತನುಶ್ರೀ ಮತ್ತು ನಗರದ ಹೆಸ್ಕಾಂ ಸಿಬ್ಬಂದಿ ರಾಘವೇಂದ್ರ ಗೌಡ ಸುಪುತ್ರಿಯಾಗಿರುವ ಧಾತ್ರಿ ಇವರಿಬ್ಬರು ಅತ್ಯುತ್ತಮ ಪ್ರದರ್ಶನ ನೀಡಿ ನಿರ್ಣಾಯಕರ ಗಮನ ಸೆಳೆದು ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡು ನಗರದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ನಗರದಲ್ಲಿ ಕಳೆದ 4 ವರ್ಷಗಳಿಂದ ನೃತ್ಯ ತರಬೇತಿ ನೀಡುತ್ತಿರುವ ಅಭಿಷೇಕ್ ಡ್ಯಾನ್ಸ್ ಅಕಾಡೆಮಿಯ ನೃತ್ಯ ಗುರು ಅಭಿಷೇಕ್ ಪಾಟೀಲ್ ಮಾರ್ಗದರ್ಶನ ಮತ್ತು ತರಬೇತಿಯೊಂದಿಗೆ ಈ ಇಬ್ಬರು ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಸಾಧನೆಗೈದ ವಿದ್ಯಾರ್ಥಿನಿಯರಿಗೆ ನಗರದ ಗಣ್ಯರನೇಕರು ಅಭಿನಂದನೆ ಸಲ್ಲಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top