ಜೊಯಿಡಾ: ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದ ವಾಹನ ಮತ್ತು ಸರಾಯಿಯನ್ನು ಅನಮೋಡ ಅಬಕಾರಿ ಅಧಿಕಾರಿಗಳು ತಾಲೂಕಿನ ಅನಮೋಡ ಚೆಕ್ಪೋಸ್ಟ್ ಬಳಿ ಖಚಿತ ಮಾಹಿತಿ ಆಧಾರದ ಮೇರೆಗೆ ಜಪ್ತಿಪಡಿಸಿಕೊಂಡಿದ್ದಾರೆ.
ಉತ್ತರಪ್ರದೇಶದ ಮನೋಜಕುಮಾರ ಬಲವೀರ ಸಿಂಹ ಎನ್ನುವವನನ್ನು ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಾಹನದ ಮಾಲೀಕನನ್ನು ಪತ್ತೆ ಹಚ್ಚಲಾಗುತ್ತಿದೆ. ಈಚರ್ ಕಂಪನಿಯ ಲಾರಿಯಲ್ಲಿ 43.280 ಲೀ. ವಿವಿಧ ರೀತಿಯ ಮದ್ಯವನ್ನು ಈತ ಸಾಗಾಟ ಮಾಡುತ್ತಿದ್ದ.
ಅಬಕಾರಿ ಉಪ ಆಯುಕ್ತ ಜಗದೀಶ್ ಎನ್.ಕೆ. ಹಾಗೂ ಯಲ್ಲಾಪುರದ ಅಬಕಾರಿ ಉಪ ಅಧೀಕ್ಷಕ ಶಂಕರಗೌಡ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅನಮೋಡ ಅಬಕಾರಿ ಸಬ್ ಇನ್ಸ್ಪೆಕ್ಟರ್ ಶ್ರೀಕಾಂತ್ ಬಿ.ಅಸೋದೆ, ಸಿಬ್ಬಂದಿಗಳಾದ ರಾಜು ಭಟ್ಕಲ್, ನಾಗೇಂದ್ರ ಬೋವಿವಡ್ಡರ, ಯು.ಎನ್.ತುಳಜಿ ಹಾಗೂ ರಾಮನಗರ ಪೊಲೀಸ್ ಠಾಣೆಯ ಸಂತೋಷ್ ಲಮಾಣಿ, ಎಸ್ಎಸ್ಟಿ ತಂಡದ ವಿನೋದ ಗಾವಡೆ ಪಾಲ್ಗೊಂಡಿದ್ದರು.