Slide
Slide
Slide
previous arrow
next arrow

ಹಿತ್ಲಳ್ಳಿ ಭಾಗದ ರೈತರಿಗೆ ಕಾಡು ಹಂದಿಗಳ ಕಾಟ

300x250 AD

ಯಲ್ಲಾಪುರ: ತಾಲೂಕಿನ ಹಿತ್ಲಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಮಾರು ಐವರು ರೈತರ ತೋಟಗಳಲ್ಲಿ ಇತ್ತೀಚೆಗೆ ಕಾಡು ಹಂದಿಗಳು ನುಗ್ಗಿ, ಏಳೆಯ ಅಡಿಕೆ ಮರದ ಸಿಂಗಾರವನ್ನೂ ಸೇರಿದಂತೆ ಮರದ ವಿವಿಧ ಮೃದು ಭಾಗಗಳನ್ನು ಹಾಳು ಮಾಡಿದ್ದಾವೆ.

ಶಂಕರ ಆಚಾರಿ ಗುರ್ಕೇಮನೆ, ಸುಬ್ರಾಯ ಹೆಗಡೆ ಬಾಳಿಗೆಮನೆ, ಪರಮೇಶ್ವರ ಹೆಗಡೆ ಗುರ್ಕೇಮನೆ, ಗಣಪತಿ ಚಲವಾದಿ ಕಲ್ಲಕೊಡ್ಲು, ಕೃಷ್ಣ ಪೂಜಾರಿ ಗುರ್ಕೇಮನೆ ಈ ರೈತರು ಬೆಳೆಸಿದ್ದ ತೋಟದ ನೂರಾರು ಅಡಿಕೆ ಮರಗಳನ್ನು ಹಂದಿಗಳು ಸಿಗಿದುಹಾಕಿವೆ.

ಜೀವನೊಪಾಯಕ್ಕಾಗಿ ಕೃಷಿಯನ್ನೆ ಆದರಿಸಿ ವಿವಿಧ ಬೆಳೆಗಳನ್ನು ಬೆಳೆಯುವ ರೈತರಿಗೆ ನಿರಂತರ ಸಮಸ್ಯೆಗಳು ಎದುರಾಗುತ್ತಿರುತ್ತವೆ. ಬಲೆಗಳ ದರದ ಏರುಪೇರು, ಜೊತೆಗೆ ಇತ್ತೀಚೆಗೆ ವನ್ಯ ಪ್ರಾಣಿಗಳ ಮಿತಿಮೀರಿದ ಉಪಟಳದಿಂದಾಗಿ ರೈತ ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಗ, ಹಂದಿ, ನವಿಲು, ಇತರೆ ಪ್ರಬೇಧದ ಪಕ್ಷಿಗಳು ಹೀಗೆ ವಿವಿಧ ಪ್ರಾಣಿಗಳು ರೈತರ ತೋಟ, ಗದ್ದೆಗಳಿಗೆ ಹಿಂದಿನಿ0ದಲೂ ಬರುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ಅವುಗಳ ಹಾವಳಿಯಿಂದಾಗಿ ರೈತರು ಭಯಭೀತರಾಗಿದ್ದಾರೆ. ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಗ್ರಾಮಸ್ಥರು, ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ಸಿಬ್ಬಂದಿಗಳೊ0ದಿಗೆ ಬಂದು ತೋಟದಂಚಿನ ಕಾಡಿನಲ್ಲಿರುವ ಹಂದಿಗಳನ್ನು ಬೇರೆಡೆ ಸ್ಥಳಾಂತರಿಸಬೇಕು, ತೋಟಕ್ಕೆ ಉಂಟುಮಾಡುತ್ತಿರುವ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಹೇಳಿದ್ದಾರೆ.

300x250 AD

ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಸನ್ನ ಭಟ್ಟ ಮಾತನಾಡಿ, ಈ ಬಗ್ಗೆ ನಾವು ಅನೇಕ ಸಭೆಗಳಲ್ಲಿ ಅಧಿಕಾರಿಗಳೆದುರು ವಿಷಯ ಪ್ರಸ್ತಾಪಿಸಿದ್ದೇವೆ. ಆದರೆ ಅಧಿಕಾರಿಗಳು ರೈತರ ಮನವಿಯನ್ನು ಕಿಂಚಿತ್ತೂ ಗಮನಕೊಟ್ಟಿಲ್ಲ. ಹೀಗಾಗಿ ನಮಗೆ ಬೇಸರವಾಗಿದೆ. ಇನ್ನಾದರೂ ಇಲಾಖೆ ವನ್ಯ ಪ್ರಾಣಿಗಳ ಮಿತಿಮೀರಿದ ಉಪಟಳಕ್ಕೆ ಕಡಿವಾಣ ಹಾಕುವಂತೆ ಅವರು ವಿನಂತಿಸಿದ್ದಾರೆ.

Share This
300x250 AD
300x250 AD
300x250 AD
Back to top