ಹೊನ್ನಾವರ: ನಿವೇದಿತ್ ಆಳ್ವಾ ಕುಮಟಾ- ಹೊನ್ನಾವರ ಮತದಾರ ಕ್ಷೇತ್ರಕ್ಕೆ ಅತ್ಯುತ್ತಮ ಅಭ್ಯರ್ಥಿ ಎಂದು ಕಾಂಗ್ರೆಸ್ ಮುಖಂಡ ಬಾಲಚಂದ್ರ ನಾಯ್ಕ ಅಭಿಪ್ರಾಯಿಸಿದ್ದಾರೆ.
ಅವರು ಇತ್ತೀಚೆ ನಿವೇದಿತಾ ಆಳ್ವಾ ಕುರಿತಾಗಿ ಕೆಲ ಸ್ಥಾಪಕ ಹಿತಾಶಕ್ತಿಗಳು ಕ್ಷೇತ್ರದಲ್ಲಿ ನಡೆಸಿರುವ ಅಪಪ್ರಚಾರ ಖಂಡಿಸಿ ಸೋಮವಾರ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಪೂರ್ವಜರು ಕೂಡಾ ಜಿಲ್ಲೆಯಲ್ಲೇ ಇದ್ದವರು. ನಿವೇದಿತಾ ಆಳ್ವಾ ತಾಯಿ ಮಾಜಿ ಸಂಸದೆ ಮಾರ್ಗರೇಟ್ ಆಳ್ವಾ ಜಿಲ್ಲೆಯಲ್ಲಿಯೇ ಉಳಿದು ಬಂದವರು, ನಿವೇದಿತಾ ಅಳ್ವಾ ಅಜ್ಜಿ ಜೋಕಿಮ್ ಆಳ್ವಾ ಕೂಡಾ ನಮ್ಮ ಕ್ಷೇತ್ರದಿಂದಲೇ ಸಂಸತ್ ಸದಸ್ಯರಾದವರು. 1999ರ ಲೋಕಸಭೆಗೆ ಮಾರ್ಗರೇಟ್ ಆಳ್ವಾರವರಿಗೆ ಅತೀ ಹೆಚ್ಚು ಮತವನ್ನು ನೀಡಿದ ಕ್ಷೇತ್ರ ಕುಮಟಾ ವಿಧಾನ ಸಭಾ ಕ್ಷೇತ್ರ ಅಂತಿರುವಾಗ ನಿವೇದಿತಾ ಆಳ್ವ ಪರಕೀಯರೆಂದು ಸುದ್ದಿ ಹಬ್ಬಿಸುವವರು ಜಾಗೃತವಾದ ಹೇಳಿಕೆಯನ್ನು ನೀಡಬೇಕು ಎಂದಿದ್ದಾರೆ.
ಹೊನ್ನಾವರ ಪಟ್ಟಣಕ್ಕೆ ಸೀಮಿತವಾದ ಧಾರ್ಮಿಕ ಕೇಂದ್ರ ಒಂದರ ಪ್ರತಿನಿಧಿ ಹೆಸರಲ್ಲಿ ವ್ಯಕ್ತಿ ಓರ್ವ ಹೇಳಿಕೆ ನೀಡಿದ ಎಂದರೆ ಅದು ಆತ ಪ್ರತಿನಿಧಿಸುವ ಸಂಸ್ಥೆಯ ಒಟ್ಟೂ ಅಭಿಪ್ರಾಯ ಅಲ್ಲ . ಧಾರ್ಮಿಕ ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಲು ಆ ವ್ಯಕ್ತಿ ಪ್ರಯತ್ನಿಸಿದ್ದಾನೆ ಎಂದೇ ಅರ್ಥ. ಅಲ್ಲದೇ ಆತ ಸೂಚಿಸಿದ ಹೆಸರೂ ಕೂಡಾ ಯಾರಿಗಾಗಿ ಆತ ಹೇಳಿಕೆ ನೀಡಿದ್ದಾನೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಎಂದಿಗೂ ಕಾಂಗ್ರೆಸ್ಸಿಗೆ ಮತ ನೀಡದೇ ಎಲ್ಲಾ ಅಧಿಕಾರವನ್ನು ಕಾಂಗ್ರೆಸ್‌ನಲ್ಲಿ ಅನುಭವಿಸಿದ ವ್ಯಕ್ತಿಯ ಪರ ನೀಡಿದ ಹೇಳಿಕೆಯನ್ನು ತಾವು ಖಂಡಿಸುತ್ತೇವೆ’ ಎಂದಿದ್ದಾರೆ. ಮಾರ್ಗರೇಟ್ ಆಳ್ವಾ ಬೆಳೆಸಿದ ವ್ಯಕ್ತಿಗಳು ಅವರಿಂದ ಹುದ್ದೆ ಲಾಭ ಪಡೆದವರು. ಅವರ ವಿರುದ್ಧವೇ ಹೇಳಿಕೆ ನೀಡುತ್ತಿರುವುದು ನಾಚಿಕೆ ಬಿಟ್ಟವರ ಹೇಳಿಕೆಯಾಗಿದೆ ಎಂದಿದ್ದಾರೆ.
ದೇಶದ ಯಾವುದೇ ವ್ಯಕ್ತಿ ತನ್ನ ಇಚ್ಛೆ ಉಳ್ಳ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿಯಲು ಸಂವಿಧಾನ ಅವಕಾಶ ನೀಡಿದೆ. ಹೀಗಿರುವಾಗ ಅವರ ಸ್ಪರ್ಧೆ ವಿರೋಧಿಸುವವರು ಸಂವಿಧಾನ ವಿರೋಧಿ ವಂಶವಾಹಿನಿ ಹೊಂದವರು ಎಂದು ಹೇಳಬೇಕಾಗುತ್ತದೆ. ಆದ್ದರಿಂದ ಮಹತ್ವವಿಲ್ಲದವರ ನಿಜ ಕಾಂಗ್ರೆಸ್ಸಿಗರಲ್ಲದ ಹೇಳಿಕೆಗಳನ್ನು ಪಕ್ಷದ ಮುಖಂಡರು. ಇನ್ನಾದರೂ ನಿಯಂತ್ರಿಸಲಿ ಪಕ್ಷಕ್ಕೆ ಮುಜುಗರ ತರುವ ಹೇಳಿಕೆಯನ್ನು ಕೊಡಿಸುತ್ತಿರುವ ಗೋಮುಖ ವ್ಯಾಘ್ರಗಳನ್ನು ಪಕ್ಷದಿಂದ ಉಚ್ಛಾಟಿಸಿ ಎಂದು ಆಗ್ರಹಿಸಿದ್ದಾರೆ.