Slide
Slide
Slide
previous arrow
next arrow

ನಿವೇದಿತ್ ಆಳ್ವಾ ಸ್ಪರ್ಧೆಗೆ ಮುಸ್ಲಿಂ ಜಮಾತ್ ವಿರೋಧ

300x250 AD

ಹೊನ್ನಾವರ: ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲು ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಪ್ರಯತ್ನದಲ್ಲಿರುವ ನಿವೇದಿತ್ ಆಳ್ವಾರವರಿಗೆ ಹೊನ್ನಾವರ ಮುಸ್ಲಿಂ ಜಮಾತ್ ಅಧ್ಯಕ್ಷ ಆಝಾದ್ ಅಣ್ಣಿಗೇರಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಅವರು ಈ ಕುರಿತಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಸ್ತುವಾರಿಯಾಗಿರುವ ಎ.ಐ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾರಿಗೆ ಪತ್ರ ಬರೆದು, ನಿವೇದಿತ್ ಆಳ್ವಾ ಅವರಿಗೆ ಪಕ್ಷದ ಟಿಕೇಟ್ ನೀಡದೇ, ಕುಮಟಾ- ಹೊನ್ನಾವರ ಭಾಗದಲ್ಲಿ ಜನಪ್ರಿಯರಾಗಿರುವ ಶಿವಾನಂದ ಹೆಗಡೆಯವರಿಗೆ ಪಕ್ಷದ ಟಿಕೇಟ್ ನೀಡುವಂತೆ ಆಗ್ರಹಿಸಿದ್ದಾರೆ. ನಿವೇದಿತ್ ಆಳ್ವಾ ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ಹೊಸಬರಾಗಿದ್ದು, ಅವರಿಗೆ ಯಾವುದೇ ರಾಜಕೀಯ ಅನುಭವವಿಲ್ಲ ಮತ್ತು ಈ ಭಾಗದಲ್ಲಿ ಸಾರ್ವಜನಿಕರ ಸಂಪರ್ಕವೂ ಇಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

300x250 AD

ನಿವೇದಿತ್ ಆಳ್ವಾರಂತಹ ಅನುಭವವಿಲ್ಲದವರನ್ನು ಕಾಂಗ್ರೆಸ್ ಪಕ್ಷ ಅಭ್ಯರ್ಥಿಯಾಗಿ ಘೋಷಿಸಿದರೆ ಇದರಿಂದ ಭಾರತೀಯಜನತಾ ಪಕ್ಷ ಜಯಗಳಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಆಯ್ಕೆಯಾಗುವುದನ್ನು ತಪ್ಪಿಸಬೇಕಾದರೆ ಹೊನ್ನಾವರ ಮುಸ್ಲಿಂ ಜಮಾತ್ ಅನಿವಾರ್ಯವಾಗಿ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಬೆಂಬಲ ಸೂಚಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಆದುದರಿಂದ ಸ್ಥಳೀಯವಾಗಿ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಶಿವಾನಂದ ಹೆಗಡೆಯವರಿಗೆ ಕಾಂಗ್ರೆಸ್ ಪಕ್ಷ ಟಿಕೇಟ್ ಘೋಷಿಸಿದ್ದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಹೊನ್ನಾವರ ಮುಸ್ಲಿಂ ಜಮಾತ್ ಸಂಪೂರ್ಣ ಬೆಂಬಲಿಸುವುದಾಗಿ ರಣದೀಪ್ ಸಿಂಗ್ ಸುರ್ಜೆವಾಲಾರಿಗೆ ಬರೆದ ಪತ್ರದಲ್ಲಿ ಜಮಾಲ್ ಆಝಾದ್ ಅಣ್ಣಿಗೇರಿ ಆಗ್ರಹಿಸಿದ್ದಾರೆ.

Share This
300x250 AD
300x250 AD
300x250 AD
Back to top