• Slide
  Slide
  Slide
  previous arrow
  next arrow
 • ಆಳ್ವಾಗೆ ಅಪಸ್ವರ; ಮೀನುಗಾರ ಮುಖಂಡರ ಅಸಮಧಾನ

  300x250 AD

  ಅಂಕೋಲಾ: ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಿವೇದಿತ್ ಆಳ್ವಾ ಅವರ ಕುರಿತಾದ ಅಪಸ್ವರಕ್ಕೆ ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ವಿಭಾಗದ ಕಾರ್ಯದರ್ಶಿ ರಾಜು ಹರಿಕಾಂತ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ಮಾರ್ಗರೇಟ್ ಆಳ್ವಾ ಹಾಗೂ ಅವರ ಕುಟುಂಬದ ಕಾಂಗ್ರೆಸ್ ಪಕ್ಷಕ್ಕೆ ಕೊಡುಗೆ ಅಪಾರವಾದದ್ದು. ಇಂತಹ ಕೊಡುಗೆ ಆಧಾರದ ಮೇಲೆ ಕಾಂಗ್ರೆಸ್ ಹೈಕಮಾಂಡ್ ನಿವೇದಿತ್ ಅವರಿಗೆ ಸೂಕ್ತವಾದ ಸ್ಥಾನಮಾನ ಜೊತೆಗೆ ಕುಮಟಾ- ಹೊನ್ನಾವರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಲು ಹೊರಟಿರುವುದು ಸ್ವಾಗತಾರ್ಹ ಸಂಗತಿ. ಇದನ್ನು ಕ್ಷೇತ್ರದ ಮತದಾರರು ಒಟ್ಟಾಗಿ ಒಪ್ಪಿ ಅವರ ಆಯ್ಕೆಗೆ ಸ್ಪಂದಿಸುವುದು ಕರ್ತವ್ಯ. ಅದನ್ನು ಹೊರತುಪಡಿಸಿ ವಿರೋಧ ವ್ಯಕ್ತಪಡಿಸುವಲ್ಲಿ ಕಾಣದ ಕೈಗಳ ಕೈವಾಡ ಇರುವುದು ಕಂಡುಬರುತ್ತದೆ ಎಂದಿದ್ದಾರೆ.

  ಈ ಹಿಂದೆ ಮಾಜಿ ಶಾಸಕಿ ಶಾರದ ಶೆಟ್ಟಿ ಅವರ ಅಭ್ಯರ್ಥಿಯ ಸಂದರ್ಭದಲ್ಲಿ ಭಾರಿ ವಿರೋಧ ವ್ಯಕವಾಗಿತ್ತು. ಅದಾಗಿಯೂ ಮಾರ್ಗರೇಟ್ ಆಳ್ವಾ ಅವರು ವಿಶಾಲ ಹೃದಯದಿಂದ ಶಾರದಾ ಶೆಟ್ಟಿಯವರ ಪರ ನಿಂತು ಕ್ಷೇತ್ರದ ಮುಖಂಡರನ್ನು ಎದುರು ಹಾಕಿಕೊಂಡು ಟಿಕೇಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೇ ಆಡಳಿತ ಅವಧಿಯಲ್ಲಿ ಅವರಿಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸಂಪುಟದರ್ಜೆ ಸ್ಥಾನಮಾನ ನೀಡಿ, ಅಧ್ಯಕ್ಷ ಸ್ಥಾನ ನೀಡುವಲ್ಲಿ ಮುಂಚೂಣಿಯಲ್ಲಿದ್ದರು. ಹೀಗಿರುವಾಗ ಶಾರದಾ ಶೆಟ್ಟಿಯವರು ಈಗ ಮುಂಚೂಣಿಯಲ್ಲಿ ನಿಂತು ನಿವೇದಿತರಿಗೆ ಅಭ್ಯರ್ಥಿ ಆಯ್ಕೆಯಲ್ಲಿ ಸಹಕರಿಸಿ ಗೆಲುವಿಗೆ ಪ್ರಮುಖ ಪಾತ್ರ ವಹಿಸಬೇಕಾಗಿದೆ ಎಂದಿದ್ದಾರೆ.

  300x250 AD

  ಈ ದಿಶೆಯಲ್ಲಿ ಮಾರ್ಗರೇಟ್ ಆಳ್ವಾ ಅವರ ಕುಟುಂಬದ ಋಣವನ್ನು ತೀರಿಸುವ ಸುವರ್ಣಾವಕಾಶ ಒದಗಿ ಬಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಾಗೂ ಹೈಕಮಾಂಡ್ ನಿರ್ದೇಶನದಂತೆ ಕ್ಷೇತ್ರ ಹೊರಗಿನವರೂ ಅಥವಾ ಒಳಗಿನವರೂ ಎನ್ನುವ ನಿಯಮ ಇರುವುದಿಲ್ಲ. ಕೆಲವೊಮ್ಮೆ ವ್ಯಕ್ತಿ ಅವರ ಸಾಮರ್ಥ್ಯ ಆಡಳಿತ ನೀತಿ ಮತ್ತು ಎಲ್ಲರೊಂದಿಗೆ ಬೆರೆಯುವ ವ್ಯಕ್ತಿತ್ವ ಹೊಂದಿರುವ ನಿವೇದಿತ್ ಅವರ ಮೇಲೆ ಹೈಕಮಾಂಡ್ ಒಂದು ಅವಕಾಶ ನೀಡುತ್ತಿರುವುದನ್ನು ಈ ಕ್ಷೇತ್ರ ಹಾಗೂ ಜಿಲ್ಲೆಯ ಪ್ರತಿಯೊಬ್ಬ ಕಾರ್ಯಕರ್ತರು ಹೆಮ್ಮೆಪಡಬೇಕಾದ ವಿಚಾರ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವ ಸಂದರ್ಭದಲ್ಲಿ ಇಂತಹ ಅಪಸ್ವರ ಸಲ್ಲದು ಎಂದು ಅವರು ಮನವಿ ಮಾಡಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top