• Slide
    Slide
    Slide
    previous arrow
    next arrow
  • ವಿವಿಧೆಡೆ ಸಿಆರ್‌ಪಿಎಫ್, ಪೊಲೀಸರ ಪರೇಡ್

    300x250 AD

    ಯಲ್ಲಾಪುರ: ವಿಧಾನಸಭಾ ಚುನಾವಣೆ ಹಿನ್ನಲೆ ಪಟ್ಟಣ ಹಾಗೂ ಕಿರವತ್ತಿ ಗ್ರಾಮದ ವಿವಿಧೆಡೆ ಸಿಆರ್‌ಪಿಎಫ್ ಸಿಬ್ಬಂದಿಯೊAದಿಗೆ ಪೊಲೀಸ್ ತಂಡದಿoದ ರೂಟ್ ಮಾರ್ಚ್ ನಡೆಯಿತು.

    ಪಟ್ಟಣದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ರಂಗನಾಥ ನಿಲಮ್ಮನವರ ನೇತೃತ್ವದಲ್ಲಿ ಯಲ್ಲಾಪುರ ಠಾಣೆಯ ಪಿಎಸ್‌ಐಗಳಾದ ರವಿ ಗುಡ್ಡಿ, ಸುನೀಲ ಠಾಣೆಯ ಸಿಬ್ಬಂದಿಗಳು ಈ ಪರೇಡ್‌ನಲ್ಲಿ ಭಾಗವಹಿಸಿದರು. ಪೊಲೀಸ್ ಠಾಣೆಯಿಂದ ಆರಂಭಿಸಿದ ಪರೇಡ್ ರವೀಂದ್ರನಗರ, ಶಿರಸಿ ರಸ್ತೆ, ನೂತನಗರ ಜಡ್ಡಿ, ಸಬಗೇರಿ ತಲುಪಿ ನಂತರ ಪೊಲೀಸ್ ಠಾಣೆಗೆ ಆಗಮಿಸಿ ಪೆರೇಡ್ ಕೊನೆಗೊಂಡಿತು.

    300x250 AD

    ಕಿರವತ್ತಿ ಗ್ರಾಮದಲ್ಲಿ ಜಯಂತಿ ನಗರ ವೃತ್ತದಿಂದ ಆರಂಭಿಸಿ, ಮಸೀದಿ ಗಲ್ಲಿ ಮದ್ನೂರು ಕ್ರಾಸ್ ವರೆಗೂ ಪರೇಡ್ ನಡಿಸಲಾಯಿತು. 25ಕ್ಕೂ ಅಧಿಕ ಪೊಲೀಸರು, 60ಕ್ಕೂ ಹೆಚ್ಚು ಶಸ್ತಸಜ್ಜಿತ ಸಿಆರ್‌ಪಿಎಫ್ ಯೋಧರು ರಸ್ತೆಯುದ್ದಕ್ಕೂ ಹೆಜ್ಜೆ ಹಾಕಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top