• Slide
  Slide
  Slide
  previous arrow
  next arrow
 • ಈ ವಿತ್ತ ವರ್ಷದಲ್ಲಿ ಮೊಬೈಲ್‌ ಉತ್ಪಾದನೆಯಿಂದ 1,50,000 ಹೊಸ ಉದ್ಯೋಗ ಸೃಷ್ಟಿ

  300x250 AD

  ನವದೆಹಲಿ: ಈ ಆರ್ಥಿಕ ವರ್ಷದಲ್ಲಿ ದೇಶದಲ್ಲಿ ಮೊಬೈಲ್ ಉತ್ಪಾದನೆಯಲ್ಲಿ 1,50,000 ಹೊಸ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಪ್ರಮುಖ ಹ್ಯಾಂಡ್‌ಸೆಟ್ ತಯಾರಕರು ಭಾರತದಲ್ಲಿ ದೊಡ್ಡ ಪ್ರಮಾಣದ ನೇಮಕಾತಿಯನ್ನು ಯೋಜಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

  ಚೀನಾದ ಆಚೆಗೆ ಉತ್ಪಾದನೆಯನ್ನು ನೋಡುತ್ತಿರುವ ಕಂಪನಿಗಳಿಗೆ ಭಾರತ ಸರ್ಕಾರದ ಉತ್ಪಾದನಾ-ಸಂಯೋಜಿತ ಪ್ರೋತ್ಸಾಹ (ಪಿಎಲ್‌ಐ) ಯೋಜನೆ ಆಕರ್ಷಿಸುತ್ತಿದೆ. TeamLease, Randstad, Quess, and Ciel HR Services ಸೇರಿದಂತೆ ಸ್ಟಾಫಿಂಗ್ ಕಂಪನಿಗಳು ಈ ವಲಯದಲ್ಲಿ ಅಂದಾಜು 120,000–150,000 ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ. ಇದರಲ್ಲಿ ಸುಮಾರು 30,000–40,000  ಉದ್ಯೋಗಗಳು ನೇರ ಉದ್ಯೋಗಗಳಾಗಿರಲಿದೆ. ಉಳಿದವು ಪರೋಕ್ಷ ಉದ್ಯೋಗಗಳಾಗಲಿವೆ.

  ಸ್ಯಾಮ್‌ಸಂಗ್, ನೋಕಿಯಾಮ್ ಫಾಕ್ಸ್‌ಕಾನ್, ವಿಸ್ಟ್ರಾನ್, ಪೆಗಾಟ್ರಾನ್, ಟಾಟಾ ಗ್ರೂಪ್ ಮತ್ತು ಸಾಲ್‌ಕಾಂಪ್‌ನಂತಹ ದೊಡ್ಡ ಕಾರ್ಪೊರೇಟ್ ದೈತ್ಯರು ದೇಶದಲ್ಲಿ ತಮ್ಮ ಉದ್ಯೋಗಿಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.

  300x250 AD

  Share This
  300x250 AD
  300x250 AD
  300x250 AD
  Leaderboard Ad
  Back to top