Slide
Slide
Slide
previous arrow
next arrow

ಹಾಲೇಶ್ವರ ಶಿವ ಮಂದಿರದ ಜಾತ್ರಾ ಮಹೋತ್ಸವ ಸಂಪನ್ನ

300x250 AD

ದಾಂಡೇಲಿ: ನಗರದ ಬಸವೇಶ್ವರ ನಗರದಲ್ಲಿರುವ ಶ್ರೀ.ಹಾಲೇಶ್ವರ ಶಿವ ಮಂದಿರದ ಜಾತ್ರಾ ಮಹೋತ್ಸವವು ಸಂಭ್ರಮ, ಸಡಗರದಿಂದ ಸಂಪನ್ನಗೊoಡಿತು.
ಜಾತ್ರಾ ಮಹೋತ್ಸವದ ಮುನ್ನ ದಿನ ವಾರ ಜಾಗರಣೆ ಹಾಗೂ ಶಿವಭಜನೆ ಕಾರ್ಯಕ್ರಮ ಜರುಗಿತು. ಜಾತ್ರೆಯ ದಿನ ಬೆಳಗ್ಗಿನಿಂದಲೆ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ರುದ್ರಾಭಿಷೇಕ ಹಾಗೂ ಬಿಲ್ವಾರ್ಚನೆ, ಮಧ್ಯಾಹ್ನ ಮಹಾಪೂಜೆಯಾದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಆಗಮಿಸಿ, ಶ್ರೀ.ಸ್ವಾಮಿಯ ದರ್ಶನವನ್ನು ಪಡೆದು ಪ್ರಸಾದವನ್ನು ಸ್ವೀಕರಿಸಿದರು. ಜಾತ್ರಾ ಮಹೋತ್ಸವದ ಯಶಸ್ಸಿಗೆ ಶ್ರೀಹಾಲೇಶ್ವರ ಶಿವಮಂದಿರ ಸೇವಾ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯ ಭಕ್ತಾಭಿಮಾನಿಗಳು ಶ್ರಮಿಸಿದ್ದರು.

300x250 AD
Share This
300x250 AD
300x250 AD
300x250 AD
Back to top