Slide
Slide
Slide
previous arrow
next arrow

ದೇಶಪಾಂಡೆಯವರ ಗೆಲುವು ನಿಶ್ಚಿತ: ಪ್ರಸಾದ್ ದೇಶಪಾಂಡೆ

300x250 AD

ದಾಂಡೇಲಿ: ಆರ್.ವಿ.ದೇಶಪಾಂಡೆಯವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರ ಜನತೆ ನೋಡಿದ್ದಾರೆ. 9ನೇ ಗೆಲುವಿನ ಮೂಲಕ ಕ್ಷೇತ್ರದ ಜನತೆ ಈ ಬಾರಿ ಐತಿಹಾಸಿಕ ದಾಖಲೆಗೆ ಸಾಕ್ಷಿಯಾಗಲಿದ್ದಾರೆ ಎಂದು ಶಾಸಕ ದೇಶಪಾಂಡೆಯವರ ಹಿರಿಯ ಪುತ್ರ ಪ್ರಸಾದ್ ದೇಶಪಾಂಡೆ ವಿಶ್ವಾಸ ವ್ಯಕ್ತಪಡಿಸಿದರು.

ಅವರ ಅಭಿವೃದ್ಧಿ ಕಾರ್ಯಗಳು, ಕ್ಷೇತ್ರದ ಬಗ್ಗೆ ದೇಶಪಾಂಡೆಯವರಿಗಿರುವ ಕಾಳಜಿ ಮತ್ತು ದೂರದೃಷ್ಟಿಯ ಪರಿಣಾಮವಾಗಿ ಇವತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ದಾಂಡೇಲಿ, ಜೊಯಿಡಾ ತಾಲ್ಲೂಕು ಜಗತ್ತಿನ ಗಮನ ಸೆಳೆಯುವಂತಾಗಿದೆ. ಕ್ಷೇತ್ರದಲ್ಲಿ ಅವರ ಅಭಿವೃದ್ಧಿ ಕಾರ್ಯಗಳು ಮತ್ತು ಕಾಂಗ್ರೆಸ್ ಪಕ್ಷದ ಬದ್ಧತೆಯನ್ನು ಮೆಚ್ಚಿ ಅತೀ ಹೆಚ್ಚಿನ ಮತಗಳ ಅಂತರದಲ್ಲಿ ಅವರನ್ನು ಮತದಾರರು ಗೆಲ್ಲಿಸಲಿದ್ದಾರೆ ಎಂದು ಹೇಳಿದರು.

300x250 AD
Share This
300x250 AD
300x250 AD
300x250 AD
Back to top