• Slide
    Slide
    Slide
    previous arrow
    next arrow
  • ಮಾರುತಿಗೆ ಕೊಳಲು ನುಡಿಸಿ ಪೂಜೆ ಸಲ್ಲಿಕೆ

    300x250 AD

    ದಾಂಡೇಲಿ: ಪಂ.ಚoದ್ರಶೇಖರ್ ಎಸ್. ಅವರ ಸುಪುತ್ರ, ನಗರದ ಜನತಾ ವಿದ್ಯಾಲಯದ ಪಿಯುಸಿ ವಿದ್ಯಾರ್ಥಿ ಜೈತ್ ಸಿ.ಎಸ್., ಶುಕ್ರವಾರ ನಗರದ ಹಳಿಯಾಳ ರಸ್ತೆಯಲ್ಲಿರುವ ಶ್ರೀಮಾರುತಿ ಮಂದಿರದಲ್ಲಿ ದೇವರಿಗೆ ಕೊಳಲು ವಾದನದ ಮೂಲಕ ಪೂಜೆ ಸಲ್ಲಿಸಿ ಕಲಾಭಕ್ತಿ ಸಮರ್ಪಿಸಿದ್ದಾನೆ.
    ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ಕೊಳಲು ನುಡಿಸುವಿಕೆಯನ್ನು ರೂಢಿ ಮಾಡಿಕೊಂಡು, ಅತ್ಯಲ್ಪ ಅವಧಿಯಲ್ಲೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಜನಪ್ರೀತಿಯನ್ನು ಪಡೆದುಕೊಂಡಿದ್ದಾನೆ. ಈತ ಈಗಾಗಲೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಇನ್ನೂ ಅನೇಕ ಕಾರ್ಯಕ್ರಮಗಳಲ್ಲಿ ಹಾಗೂ ಹತ್ತು ಹಲವು ದಿಗ್ಗಜರ ಸಮ್ಮುಖದಲ್ಲಿ ಕೊಳಲು ವಾದನ ಕಾರ್ಯಕ್ರಮವನ್ನು ನೀಡಿ ಎಲ್ಲರ ಮೆಚ್ಚುಗೆ ಮತ್ತು ಅಪ್ಪುಗೆಗೆ ಪಾತ್ರನಾಗಿದ್ದಾನೆ.
    ತನ್ನ ಪರಿಶ್ರಮದ ಸಾಧನೆಯ ಫಲವಾಗಿ ಆನ್ಲೆöÊನ್ ಮೂಲಕ ಕೊಳಲು ವಾದನ ತರಬೇತಿಯನ್ನು ನೀಡುತ್ತಿರುವ ಈತನಲ್ಲಿ ದೇಶ- ವಿದೇಶಗಳ ವಿದ್ಯಾರ್ಥಿಗಳು ತರಬೇತಿಯನ್ನು ಪಡೆದುಕೊಳ್ಳುತ್ತಿರುವುದು ಈತನ ಸಾಮಾರ್ಥ್ಯಕ್ಕೊಂದು ಉತ್ತಮ ಉದಾಹರಣೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top