ಅಂಕೋಲಾ: ಅಕ್ರಮವಾಗಿ ಸಂಗ್ರಹಿಸಿಟ್ಟ ಲಕ್ಷಾಂತರ ರೂಪಾಯಿ ಮೌಲ್ಯದ ಸಾರಾಯಿಯನ್ನು ಖಚಿತ ಮಾಹಿತಿಯ ಮೇರೆಗೆ ಅಬಕಾರಿ ಇಲಾಖೆ ಸಿಬ್ಬಂದಿ ವಶಪಡಿಸಿಕೊಂಡ ಘಟನೆ ತಾಲೂಕಿನ ಹಾರವಾಡದಲ್ಲಿ ನಡೆದಿದೆ.
ತಾಲೂಕಿನ ಹಾರವಾಡ ಗ್ರಾಮದ ತರಂಗಮೇಟದ ಹರಿಕಂತ್ರವಾಡಾದ ಶ್ವೇತಾ ಹರಿಕಂತ್ರರವರ ಮನೆಯ ಮೇಲೆ ಅಬಕಾರಿ ದಾಳಿ ಮಾಡಿ, 324 ಲೀಟರ್ ಗೋವಾ ಫೆನ್ನಿ ಹಾಗೂ 280 ಲೀ. ಗೇರು ಹಣ್ಣಿನಿಂದ ತಯಾರಾದ ಫೆನ್ನಿ, ಅಂದಾಜು 3 ಲಕ್ಷ 22 ಸಾವಿರ ಮೌಲ್ಯದ ಒಟ್ಟು 604 ಲೀ. ಫೆನ್ನಿ ವಶಪಡಿಸಿಕೊಂಡಿದ್ದಾರೆ. ದಾಳಿಯ ಸಂದರ್ಭದಲ್ಲಿ ಆರೋಪಿ ಶ್ವೇತಾ ಓಡಿ ಪರಾರಿಯಾಗಿದ್ದಾಳೆ.
ಅಬಕಾರಿ ನಿರೀಕ್ಷಕ ರಾಹುಲ ನಾಯಕ, ಉಪ ನಿರೀಕ್ಷಕ ಪ್ರಶಿಕ್ಷಣಾರ್ಥಿ ಮಧುರ ದಾಸ್, ಸಿಬ್ಬಂದಿ ಈರಣ್ಯ ಕುರುಬೇಟ, ಶ್ರೀಶೈಲ ಹಡಪದ, ರವಿ ಸಂಕಣ್ಮರವರ, ಗಿರೀಶ ಅರೆವಾಳ ಕಾರ್ಯಾಚರಣೆಯಲ್ಲಿದ್ದರು.
ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮದ್ಯ ವಶಕ್ಕೆ; ಆರೋಪಿ ಪರಾರಿ!
