ಹೊನ್ನಾವರ: ಪಟ್ಟಣದ ಎಮ್ಮೆಪೈಲ್ ನಿವಾಸಿಯಾಗಿರುವ, ಹಾಲಿ ಬಿಇಒ ಆಫೀಸ್ ಹತ್ತಿರ ವಾಸವಿರುವ ನಾಗರಾಜ ನಾಯ್ಕ ಎಂಬಾತನ ಮನೆಯಲ್ಲಿ ತಲ್ವಾರ್ ಪತ್ತೆಯಾಗಿದ್ದು, ಸಿಪಿಐ ಮಂಜುನಾಥ ಇ.ಒ ನೇತೃತ್ವದಲ್ಲಿ ಮಂಗಳವಾರ ಪೊಲೀಸರು ದಾಳಿ ನಡೆಸಿ ಆರೋಪಿ ಸಮೇತ ಮಾರಕಾಸ್ತ್ರವನ್ನು ವಶಪಡಿಸಿಕೊಂಡಿದ್ದಾರೆ.
ವಿಧಾನಸಭೆ ಚುನಾವಣೆಯ ಸಮಯದಲ್ಲಿ ಯಾವುದೋ ರಾಜಕೀಯ ಪಕ್ಷದ ಪರವಾಗಿ ಬೆಂಬಲಿಸಿ ಯಾವುದೋ ಕೃತ್ಯ ಎಸಗುವ, ಇಲ್ಲವೇ ಭಾಗಿಯಾಗಿ ಕೃತ್ಯವನ್ನು ಮಾಡುವ ಸಂಚನ್ನು ರೂಪಿಸುವ ಸಾಧ್ಯತೆಯಿಂದ ಹೊಂದಿದ್ದ ಎನ್ನಲಾದ ಮಾರಕಾಸ್ತç ವಶಕ್ಕೆ ಪಡೆಯಲಾಗಿದೆ. ಮನೆಯನ್ನು ಶೋಧನೆ ಮಾಡುವ ಕುರಿತು ನ್ಯಾಯಾಲಯದಿಂದ ಶೋಧನಾ ವಾರೆಂಟ್ ಪಡೆದುಕೊಂಡು ಇಬ್ಬರು ಪಂಚರನ್ನು ಹಾಜರಿಟ್ಟುಕೊಂಡಿದ್ದರು. ಮಂಗಳವಾರ ಬೆಳಗ್ಗೆ ವಾರಂಟ್ ಸಮೇತ ಎರಡು ಗಂಟೆಗಳ ಮನೆಯ ಶೋಧನೆಯನ್ನು ಪಂಚರ ಸಮಕ್ಷಮ ಸಿಬ್ಬಂದಿಯವರೊAದಿಗೆ ಕೈಗೊಳ್ಳಲಾಗಿತ್ತು.
ಈ ವೇಳೆ ಮನೆಯ ಮಂಚದ ಮೇಲಿರುವ ಬೆಡ್‌ನ ಕೆಳಗೆ 2 ಫೀಟ್ 6 ಇಂಚು ಉದ್ದದ ಒಂದು ಕಡೆ ಹರಿತವಾಗಿರುವ ಕಬ್ಬಿಣದ ಲಾಂಗ್‌ನ್ನು ಇಟ್ಟುಕೊಂಡಿದ್ದು ಪತ್ತೆಯಾಗಿದೆ. ಈ ಮಾರಕಾಸ್ತ್ರದ ಬಗ್ಗೆ ನಾಗರಾಜ ನಾಯ್ಕನಿಗೆ ವಿಚಾರಿಸಿದರೆ ಸಮರ್ಪಕವಾಗಿ ಉತ್ತರಿಸಿಲ್ಲ ಎನ್ನಲಾಗಿದೆ. ಈತ ಪೊಲೀಸ್ ಠಾಣೆಯ ರೌಡಿ ಆಸಾಮಿಯಾಗಿದ್ದು, ಮಾರಕಾಸ್ತ್ರದ ಜೊತೆಗೆ ಸಿಕ್ಕಿರುವುದರಿಂದ ವಶಕ್ಕೆ ಪಡೆದು ಕಲಂ 25(1)(ಬಿ)(ಬಿ)ಭಾರತೀಯ ಆಯುಧ ಅಧಿನಿಯಮ 1959ರಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.