ಹಳಿಯಾಳ: ಪಟ್ಟಣದ ಹವಗಿ ಮತ್ತು ತೇರಗಾವ್ ಗ್ರಾಮದ ಭಗವಾನ್ ಶ್ರೀ 1008 ಪಾಶ್ವನಾಥ್ ದಿಗಂಬರ ಜೈನ ಮಂದಿರಕ್ಕೆ ಶಾಸಕ ಆರ್.ವಿ.ದೇಶಪಾಂಡೆ ಭೇಟಿ ನೀಡಿದರು.
ವಿಶ್ವಶಾಂತಿಗಾಗಿ ಮತ್ತು ಮನುಕುಲದ ಏಳಿಗೆಗಾಗಿ ಶ್ರಮಿಸಿದ ಭಗವಾನ್ ಮಹಾವೀರ ಅವರ ಜನ್ಮ ಕಲ್ಯಾಣ ದಿನದ ನಿಮಿತ್ತ ಭೇಟಿ ನೀಡಿ ವಿಶೇಷ ಪೂಜಾ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಭಗವಾನ್ ಮಹಾವೀರ ಭೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಧರ್ಮ ಪಂಗಡ ಎನ್ನದೆ ಎಲ್ಲರೂ ಒಗ್ಗಟ್ಟಿನಿಂದ ಮಹಾವೀರರು ತೋರಿಸಿದ ದಾರಿಯಲ್ಲಿ ನಡೆಯುತ್ತಾ, ಅವರ ಸಂದೇಶವನ್ನು ವಿಶ್ವಕ್ಕೆ ಸಾರೋಣ ಎಂದು ಅವರು ಕರೆನೀಡಿದರು.
ಈ ಸಂದರ್ಭದಲ್ಲಿ ಹವಗಿ ಮತ್ತು ತೇರಗಾವ್ ಗ್ರಾಮದ ಮುಖಂಡರು ಹಾಗೂ ಜೈನ ಸಮಾಜದವರು ಇದ್ದರು.
ದಿಗಂಬರ ಜೈನ ಮಂದಿರಕ್ಕೆ ಶಾಸಕ ದೇಶಪಾಂಡೆ ಭೇಟಿ
