ಯಲ್ಲಾಪುರ: ಸಂತೋಷವು ನಮ್ಮೊಳಗೆ ಇದೆ. ಅದನ್ನು ಹೊರಗೆ ಹುಡುಕಲು ಪ್ರಯತ್ನಿಸಬೇಡಿ. ಪ್ರತಿಯೊಂದು ಜೀವಿಯ ಮೇಲೂ ಕರುಣೆ ಇರಬೇಕು. ದ್ವೇಷವು ವಿನಾಶಕ್ಕೆ ಮಾತ್ರ ಕಾರಣವಾಗುತ್ತದೆ. ನಿಮ್ಮ ಎಲ್ಲಾ ಪ್ರಯತ್ನಗಳನ್ನು ಸರಿಯಾದ ದಿಕ್ಕಿನಲ್ಲಿ ಮಾಡುವ ಮೂಲಕ ನೀವು ದೇವರುಗಳನ್ನು ಕಾಣಬಹುದು ಎಂದು ತಹಶೀಲ್ದಾರ ಎಮ್.ಗುರುರಾಜ ಹೇಳಿದರು.
ಅವರು ಮಂಗಳವಾರ ಬೆಳಗ್ಗೆ ತಾಲೂಕ ದಂಡಾಧಿಕಾರಿ ಕಚೇರಿಯಲ್ಲಿ ಭಗವಾನ್ ಮಹಾವೀರ ಜಯಂತಿಯAದು ಮಹಾವೀರರ ಭಾವಚಿತ್ರಕ್ಕೆ ಪೂಜ ಸಲ್ಲಿಸಿ ಮಾತನಾಡಿದರು. ಮಹಾವೀರರ ಕುರಿತು ಮಾತನಾಡಿದ ಕಚೇರಿಯ ಸಿಬ್ಬಂದಿ ಶ್ರೀಧರ ಎಲಿಗೌಡ, ಮಹಾವೀರರ ಬಾಲ್ಯದ ಹೆಸರು ವರ್ಧಮಾನ. ಅವರು 30 ನೇ ವಯಸ್ಸಿನಲ್ಲಿ ರಾಜಮನೆತನದ ವೈಭೋಗವನ್ನು ತ್ಯಜಿಸಿ ಹನ್ನೆರಡು ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿ, ಕೈವಲ್ಯ ಜ್ಞಾನವನ್ನು ಪಡೆದರು. ಈ ಮಹಾವೀರರ ಜನ್ಮದಿನವನ್ನು ಮಹಾವೀರ ಜಯಂತಿ ಎಂದು ಆಚರಿಸಲಾಗುತ್ತದೆ ಎಂದು ಅವರು, ಮಹಾವೀರರ ತತ್ವ ಸಿದ್ಧಾಂತಗಳ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ ಸಿ.ಜಿ.ನಾಯ್ಕ, ಉಪ ತಹಶೀಲ್ದಾರ ಎಚ್.ಎನ್.ರಾಘವೇಂದ್ರ, ಶಿರಸ್ತೆದಾರ ಗೀತಾ ಜಾಧವ್ ಹಾಗೂ ಕಚೇರಿಯ ಸಿಬ್ಬಂದಿಗಳು ಇದ್ದರು.