Slide
Slide
Slide
previous arrow
next arrow

ದಾಂಡೇಲಿ: ಭಗವಾನ್ ಮಹಾವೀರ ಜಯಂತಿ ಆಚರಣೆ

300x250 AD

ದಾಂಡೇಲಿ: ನಗರದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಮಂಗಳವಾರ ಭಗವಾನ್ ಶ್ರೀಮಹಾವೀರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ತಹಶೀಲ್ದಾರ್ ಅಶೋಕ್ ಶಿಗ್ಗಾವಿಯವರು ಭಗವಾನ್ ಶ್ರೀಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹಾವೀರ ಜಯಂತಿಯನ್ನು ಜೈನ ಸಮುದಾಯದ ಜನ ದೇಶದಾಧ್ಯಂತ ಸಂಭ್ರಮ, ಸಡಗರದಿಂದ ಇಂದು ಆಚರಿಸಿಕೊಳ್ಳುತ್ತಿದ್ದಾರೆ. ಜೈನ ಸಮುದಾಯದ 24ನೇ ತೀರ್ಥಂಕರರಾದ ವರ್ಧಮಾನ ಮಹಾವೀರರ ಜನ್ಮದಿನವನ್ನು ಸ್ಮರಿಸುವ ಜೈನರ ಮಹತ್ವದ ಹಬ್ಬವೇ ಮಹಾವೀರ ಜಯಂತಿ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಾಂಡೇಲಿ ಜೈನ ಸಮಾಜ ಸೇವಾ ಟ್ರಸ್ಟಿನ ಅಧ್ಯಕ್ಷ ಸಂದೇಶ್ ಎಸ್.ಜೈನ್ ಮಾತನಾಡಿ, 30 ವರ್ಷ ವಯಸ್ಸಿನವರೆಗೂ ರಾಜ್ಯಭಾರ ಮಾಡುತ್ತಿದ್ದ ಮಹಾವೀರರು ನಂತರ ಇದ್ದಕ್ಕಿದ್ದಂತೆ ತನ್ನ ಸಿಂಹಾಸನ ಮತ್ತು ತನ್ನ ಕುಟುಂಬವನ್ನು ತೊರೆದು ಸತ್ಯದ ಅನ್ವೇಷಣೆಯಲ್ಲಿ ತನ್ನದೇ ಆದ ದಾರಿಯಲ್ಲಿ ಒಬ್ಬರೆ ಸಾಗುತ್ತಾರೆ. ಸುಮಾರು 12 ವರ್ಷಗಳ ತನಕ ತಪಸ್ವಿಯಾಗಿ ತನ್ನ ರಾಜ್ಯವನ್ನು ಬಿಟ್ಟಿದ್ದರು. ಈ ಸಮಯದಲ್ಲಿ ಮಹಾವೀರರು ಪ್ರತಿಯೊಬ್ಬರಿಗೂ ಅಹಿಂಸಾ ಮಾರ್ಗವನ್ನು ಬೋಧನೆ ಮಾಡಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು ಮತ್ತು ಯಾರನ್ನೂ ತಿರಸ್ಕಾರ ಭಾವನೆಯಿಂದ ನೋಡಬಾರದು ಎಂದು ತಿಳಿಸಿದ್ದರು.
ವರ್ಧಮಾನ ಆಗಿದ್ದ ಮನುಷ್ಯ ಮಹಾವೀರರಾಗಿ ಬದಲಾಗಲು ಅವರಲ್ಲಿದ್ದ ವಿಶಿಷ್ಟವಾದ ಚಾತುರ್ಯಗಳು ಮತ್ತು ಸೂಕ್ಷ್ಮ ಸಂವೇದನಾ ಶಕ್ತಿ ಕಾರಣವಾಯ್ತು. ಜಗತ್ತಿಗೆ ಅಹಿಂಸೆಯನ್ನು ಬೋಧಿಸಿದ ಮಹಾವೀರ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಶಾಂತಿಯ ಸಮಾಜ ಕಟ್ಟಲು ನಾವೆಲ್ಲರೂ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ರಾಘವೇಂದ್ರ ಪೂಜೇರಿ, ಕಂದಾಯ ನಿರೀಕ್ಷಕ ರಾಘವೇಂದ್ರ ಪಾಟೀಲ್, ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳಾದ ಗೌಡಪ್ಪ ಬನಕದಿನ್ನಿ, ದೀಪಾಲಿ ಪೆಡ್ನೇಕರ್, ಮುಕುಂದ್, ದಯಾನಂದ ಚಿಟ್ಟಿ, ರವಿ ಕಮ್ಮಾರ್ ಮೊದಲಾದವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top