• Slide
  Slide
  Slide
  previous arrow
  next arrow
 • ಜಿಲ್ಲೆಗೆ ಮತ್ತೆ ಕಾಲಿಟ್ಟ ಕೊರೋನಾ!

  300x250 AD

  ಕಾರವಾರ: ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಕೊರೋನಾ ಪ್ರಕರಣ ಮತ್ತೆ ಜಿಲ್ಲೆಯಲ್ಲಿ ಕಾಲಿಟ್ಟಿದೆ. ಮಂಗಳವಾರ ಒಂದೇ ದಿನ 8 ಪ್ರಕರಣ ದಾಖಲಾಗಿ ಕೊರೋನಾ ಇನ್ನೂ ಜೀವಂತವಿದೆ ಎಂಬುವುದನ್ನ ತೋರಿಸಿದೆ.
  ಕಳೆದ ಮೂರು ವರ್ಷದ ಹಿಂದೆ ದೇಶಕ್ಕೆ ಆಗಮಿಸಿದ್ದ ಕೊರೋನಾ ಸಾಕಷ್ಟು ಅವಾಂತರವನ್ನ ಸೃಷ್ಟಿ ಮಾಡಿತ್ತು. ಲಕ್ಷಾಂತರ ಜನರು ಕೊರೋನಾದಿಂದ ಮೃತಪಟ್ಟಿದ್ದರು. ಅಲ್ಲದೇ ಲಾಕ್ ಡೌನ್ ನಿಂದ ವ್ಯಾಪಾರ ವಹಿವಾಟುಗಳೇ ಬಂದ್ ಆಗಿ ಜನರು ಸಾಕಷ್ಟು ಸಮಸ್ಯೆಗೆ ಸಿಲುಕಿದ್ದರು. ಸದ್ಯ ಕೊರೋನಾ ಪ್ರಕರಣ ಇಲ್ಲ ಎನ್ನಲಾಗುತ್ತಿದ್ದರು ಇದರ ನಡುವೆ ಜಿಲ್ಲೆಯ ಸಿದ್ದಾಪುರದಲ್ಲಿ 5 ಹಾಗೂ ಶಿರಸಿಯಲ್ಲಿ 3 ಪ್ರಕರಣಗಳು ಮಂಗಳವಾರ ಧೃಡಪಟ್ಟಿದೆ.
  ಏಪ್ರಿಲ್ 1 ರಂದು ಜಿಲ್ಲೆಯ ಸಿದ್ದಾಪುರ, ಹಳಿಯಾಳ ಹಾಗೂ ಜೋಯಿಡಾ ತಾಲೂಕಿನಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿತ್ತು. ಏಪ್ರಿಲ್ 2 ರಂದು ಜಿಲ್ಲೆಯ ಮುಂಡಗೋಡಿನಲ್ಲಿ 2, ಶಿರಸಿ, ಸಿದ್ದಾಪುರ ಹಾಗೂ ಜೋಯಿಡಾದಲ್ಲಿ ತಲಾ 1 ಪ್ರಕರಣ ದಾಖಲಾಗಿತ್ತು. ಮಂಗಳವಾರ 8 ಪ್ರಕರಣ ದಾಖಲಾಗಿದೆ. ಸೋಂಕು ಕಾಣಿಸಿಕೊಂಡವರಲ್ಲಿ ಈ ಹಿಂದೆ ಆಗುತ್ತಿದ್ದ ಆರೋಗ್ಯದಲ್ಲಿನ ಏರುಪೇರು ಆಗುತ್ತಿಲ್ಲವಾದರು ಆರೋಗ್ಯ ಇಲಾಖೆ ಮಾತ್ರ ಎಚ್ಚೆತ್ತುಕೊಂಡು ಕೊರೋನಾ ಸೋಂಕಿತರಿಗೆ ಗುಣ ಮುಖವಾಗಲು ಚಿಕಿತ್ಸೆ ಕೊಡುವ ಕಾರ್ಯ ಮಾಡುತ್ತಿದೆ. ಸದ್ಯ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 71927 ಜನರಿದ್ದರೇ, 833 ಜನರ ಕೊರೋನಾದಿಂದಲೇ ಮೃತಪಟ್ಟಿದ್ದರು. 71082 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top