• Slide
    Slide
    Slide
    previous arrow
    next arrow
  • ಸಂಭವನೀಯ ಅಭ್ಯರ್ಥಿಯ ಪಟ್ಟಿಯಲ್ಲಿ ಹೆಸರಿದೆ: ವಿ.ಎಸ್.ಪಾಟೀಲ

    300x250 AD

    ಮುಂಡಗೋಡ: ಯಲ್ಲಾಪುರ ಕ್ಷೇತ್ರದ ಸಂಭವನೀಯ ಅಭ್ಯರ್ಥಿಯನ್ನಾಗಿ ಹೆಸರು ಕಳುಹಿಸಿದ್ದಾರೆ. ಇನ್ನೇನು ಎರಡು- ಮೂರು ದಿನಗಳಲ್ಲಿ ಕಾಂಗ್ರೆಸ್‌ನಿಂದ ಅಂತಿಮ ಪಟ್ಟಿ ಬರಲಿದೆ ಎಂದು ಮಾಜಿ ಶಾಸಕ ವಿ.ಎಸ್.ಪಾಟೀಲ್ ಹೇಳಿದರು.
    ಪಟ್ಟಣದ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ತಾಲೂಕಾ ಮಂಡಳ ಅಧ್ಯಕ್ಷ ಜ್ಞಾನೇಶ್ವರ ಗುಡಿಯಾಳ ನೇತ್ರತ್ವದಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿ, ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ಜನಪ್ರತಿನಿಧಿಯಾದ ನಂತರ ಸರ್ಕಾರದ ದುಡ್ಡು ಜನರ ದುಡ್ಡಂತೆ ಅದನ್ನ ಒಳ್ಳೆಯದಕ್ಕೆ ಉಪಯೋಗಿಸಬೇಕು ಹೊರತು ಬೇರೆ ಕೆಲಸಕ್ಕೆ ಬಳಸಬಾರದು. ಈಗ ಕೆರೆ ತುಂಬುವ ಯೋಜನೆ ಮಾಡಿದ್ದಾರೆ. ಈಗ ನಾನು ಈ ಯೋಜನೆ ಸರಿ ಇಲ್ಲ ಎಂದರೆ ವಿರೋಧ ಪಕ್ಷದವರು ಹೇಳುತ್ತಾರೆ ಎನ್ನುತ್ತಾರೆ. ಆದರೆ ಯೋಜನೆಯ ಬಗ್ಗೆ ಜನರ ಬಳಿ ಕೇಳಿದಾಗ ನಿಮಗೂ ಒಂದು ಕಲ್ಪನೆ ಬರುತ್ತದೆ. ಜನರ ದುಡ್ಡನ್ನ ಐದು- ಆರು ನೂರು ಕೋಟಿಯ ಹಣವನ್ನು ನಿರಾಯಾಸವಾಗಿ ಉಪಯೋಗಕ್ಕೆ ಇಲ್ಲದಂತೆ ಬಳಸಿದ್ದಾರೆ ಎಂದು ಆರೋಪಿಸಿದರು.
    ಹತ್ತು ವರ್ಷಗಳಲ್ಲಿ ಆಶ್ರಯ ಮನೆಗಳನ್ನು ಎಷ್ಟು ಕೊಟ್ಟಿದ್ದಾರೆ ಎಂದು ಅವರಿಗೆ ಕೇಳಿ. ನಾನು ಐದು ವರ್ಷದಲ್ಲಿ 11 ಸಾವಿರ ಮನೆಗಳನ್ನು ಗ್ರಾಮ ಪಂಚಾಯತ ಮುಖಾಂತರ ಕೊಡುವಂತ ಮಾಡಿದ್ದೆ. ರೈತರು ಕೃಷಿ ಇಲಾಖೆಯಲ್ಲಿ ತಾಡಪತ್ರಿ ಪಡೆಯಬೇಕಾದರೆ ಶಾಸಕರ ಪರವಾನಗಿ ಪತ್ರ ಪಡೆದುಕೊಂಡು ಬರಬೇಕು. ಕೃಷಿ ಅಧಿಕಾರಿ ಅವರು ತಾಡಪತ್ರಿಗಳು ಯಾರದೋ ಮನೆಯಲ್ಲಿ ಇಟ್ಟು ಹಂಚಿದ್ದನ್ನು ನಾನು ಕೇಳಿದ್ದೇನೆ ಎಂದರು.
    ಈ ಸಂದರ್ಭದಲ್ಲಿ ಕೃಷ್ಣ ಹಿರೇಳ್ಳಿ, ರಾಮಕೃಷ್ಣ ಮೂಲಿಮನಿ, ಎಚ್.ಎಂನಾಯ್ಕ ಮುಂತಾದವರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top