ಶಿರಸಿ: ನಾಡಿನ ಪ್ರಸಿದ್ಧ ಹಾಸ್ಯ ಸಾಹಿತಿ, ಉಪನ್ಯಾಸಕಿ ಭುವನೇಶ್ವರಿ ಹೆಗಡೆಗೆ ಬೆಂಗಳೂರಿನಲ್ಲಿ ಪ್ರಥಮ ಹಾಸ್ಯ ಸಾಹಿತಿ ಟಿ.ಸುನಂದಮ್ಮ ಹೆಸರಿನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಅಕ್ಕಮಹಾದೇವಿ ಸಭಾಂಗಣದಲ್ಲಿ ಪ್ರಶಸ್ತಿಯನ್ನು ಹೆಸರಾಂತ ಸಾಹಿತಿಗಳಾದ ಎಂ.ಎಸ್.ನರಸಿಂಹಮೂರ್ತಿ, ಎಚ್. ದುಂಡಿರಾಜ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್.ಪುಷ್ಪ, ಪ್ರತಿಷ್ಠಾನದ ಪ್ರತಿಷ್ಟಾಪಕ ನರಸಿಂಹಮೂರ್ತಿ, ಕಾರ್ಯದರ್ಶಿ ಡಾ. ಆರ್.ಪೂರ್ಣಿಮಾ, ಡಾ.ವಸುಂಧರ ಭೂಪತಿ , ಸುನಂದಮ್ಮ ಅವರ ಸೊಸೆ ಶ್ರೀಲತಾ ಪಾಲ್ಗೊಂಡರು. ಪ್ರಶಸ್ತಿಯು 30 ಸಾವಿರ ರೂ. ನಗದು, ಫಲಕ ಒಳಗೊಂಡಿದೆ.
‘ಭುಹೆ’ಗೆ ಸುನಂದಮ್ಮ ಪ್ರಶಸ್ತಿ ಪ್ರದಾನ
