ಕುಮಟಾ: ತಾಲೂಕಿನ ಗಂಗಾವಳಿಯಲ್ಲಿ ನಡೆದ ನಾಮಧಾರಿ ಸಮಾಜದ ಸುಗ್ಗಿ ಹಬ್ಬದಲ್ಲಿ ಪಾಲ್ಗೊಂಡ ಜಿಪಂ ಮಾಜಿ ಸದಸ್ಯರಾದ ಪ್ರದೀಪ ನಾಯಕ ದೇವರಬಾವಿ ಮತ್ತು ಶಿವಾನಂದ ಹೆಗಡೆ ಕಡತೋಕಾ ಸಂಭ್ರಮಿಸಿದರು.
ತಾಲೂಕಿನ ಗಂಗಾವಳಿಯಲ್ಲಿ ನಡೆಯುವ ನಾಮಧಾರಿ ಸಮಾಜದ ಸುಗ್ಗಿ ಹಬ್ಬ ವಿಶೇಷತೆಯನ್ನು ಹೊಂದಿದೆ. ಸುಗ್ಗಿ ಸಂಸ್ಕೃತಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುತ್ತಿರುವ ನಾಮಧಾರಿ ಸಮಾಜದ ಬಾಂಧವರು ಈ ಹಬ್ಬವನ್ನು ಅತೀ ಸಂಭ್ರಮದಿಂದ ಆಚರಿಸುತ್ತಾರೆ. ಸುಗ್ಗಿ ತುರಾಯಿ ಕಟ್ಟಿಕೊಂಡಿ ಕೋಲಾಟ ಆಡುತ್ತ ಜಾನಪದ ಗೀತೆಯೊಂದಿಗೆ ಕುಣಿದು ಕುಪ್ಪಳಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ.
ಇಂಥ ವಿಶೇಷವಾದ ಸುಗ್ಗಿ ಹಬ್ಬದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಜಿಪಂ ಮಾಜಿ ಸದಸ್ಯರಾದ ಪ್ರದೀಪ ನಾಯಕ ದೇವರಬಾವಿ ಮತ್ತು ಶಿವಾನಂದ ಹೆಗಡೆ ಕಡತೋಕಾ ಅವರು ಹಬ್ಬದ ವಿಶೇಷಯಂತೆ ಕಂಡು ಖುಷಿಪಟ್ಟರು. ಇಂಥ ಜಾನಪರ ಸೊಗಡನ್ನು ಮುಂದಿನ ತಲೆ ಮಾರಿಗೆ ದಾಟಿಸುವ ಮೂಲಕ ಈ ಕಲಾ ಸಂಸ್ಕೃತಿಯನ್ನು ರಕ್ಷಿಸಬೇಕೆಂದು ಇವರಿಬ್ಬರು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯರಾದ ಪ್ರದೀಪ ನಾಯಕ ದೇವರಬಾವಿ ಮತ್ತು ಶಿವಾನಂದ ಹೆಗಡೆ ಕಡತೋಕಾ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಸುಗ್ಗಿ ಹಬ್ಬದಲ್ಲಿ ಕುಮಟಾ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ಕೋಡ್ಕಣಿ, ಪ್ರಮುಖರಾದ ನಾಗರಾಜ ನಾಯ್ಕ ಗಂಗಾವಳಿ, ಮನೋಹರ ಗೌಡ, ಶ್ರೀನಿವಾಸ ನಾಯ್ಕ ಇತರರು ಉಪಸ್ಥಿತರಿದ್ದರು.