Slide
Slide
Slide
previous arrow
next arrow

ಬೇಸಿಗೆ ಶಿಬಿರಗಳಿಂದ ಸೃಜನಾತ್ಮಕತೆ: ನಾರಾಯಣ ದೈಮನೆ

300x250 AD

ಭಟ್ಕಳ: ಬೇಸಿಗೆ ಶಿಬಿರದಲ್ಲಿ ಭಾಗವಹಿಸುವುದರಿಂದ ಸೃಜನಾತ್ಮಕವಾದದ್ದನ್ನು ಕಲಿಯಲು ಸಾಧ್ಯ ಎಂದು ಅಳ್ವೇಕೋಡಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ನಾರಾಯಣ ದೈಮನೆ ಹೇಳಿದರು.

ಅವರು ಇಸ್ಥೆಟಿಕ್ ಕಲ್ಚರಲ್ ಅಂಡ್ ಎಜ್ಯುಕೇಶನಲ್ ಫೌಂಡೇಶನ್ ಆಯೋಜಿಸಿದ್ದ ಚಿಣ್ಣರ ಮೇಳ -2 ಬೇಸಿಗೆ ಶಿಬಿರವನ್ನು ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಬೇಸಿಗೆ ರಜೆಯಲ್ಲಿ ಮಕ್ಕಳು ಅಜ್ಜಿಯ ಮನೆ, ಮಾವನ ಮನೆಗಳಿಗೆ ಹೋಗುವುದರ ಮೂಲಕ ತಮ್ಮ ಬೇಸಿಗೆ ರಜೆಯನ್ನು ಆಟೋಟಗಳಲ್ಲಿ ಕಳೆಯುತ್ತಿದ್ದರು. ಆದರೆ ಈಗ ಅಂತಹ ಪರಿಕಲ್ಪನೆ ಬಹುತೇಕ ಇಲ್ಲವಾಗಿದೆ. ಈಗಿನ ಮಕ್ಕಳು ಬೇಸಿಗೆ ರಜೆಯನ್ನು ಮೊಬೈಲ್ ಮತ್ತು ಟಿವಿಯಲ್ಲಿ ಕಳೆಯುವುದಕ್ಕಿಂತ ಇಂತಹ ಶಿಬಿರದಲ್ಲಿ ಭಾಗವಹಿಸಬೇಕು ಎಂದರು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ ನಾಯ್ಕ ಮಾತನಾಡಿ, ಇಂತಹ ಬೇಸಿಗೆ ಶಿಬಿರಗಳಲ್ಲಿ ಮಕ್ಕಳು ಕಥೆ ಮತ್ತು ನಾಟಕಗಳಲ್ಲಿ ಭಾಗವಹಿಸುವುದರಿಂದ ನೈತಿಕ ಮೌಲ್ಯಗಳನ್ನು ಕಲಿಯಲು ಸಾಧ್ಯ ಎಂದು ಹೇಳಿದರು.
ಇನ್ನೋರ್ವ ಅತಿಥಿಗಳಾದ ಭಟ್ಕಳ ಅರ್ಬನ್ ಬ್ಯಾಂಕಿನ ನಿವೃತ್ತ ಜನರಲ್ ಮ್ಯಾನೇಜರ್ ಸುಭಾಷ ಶೆಟ್ಟಿ ಮಾತನಾಡುತ್ತಾ, ನಾವು ಚಿಕ್ಕವರಿರುವಾಗ ಆಯಾ ಕಾಲಕ್ಕೆ ತಕ್ಕಂತೆ ಗೋಲಿ ಆಟ, ಲಗೋರಿ, ಬುಗುರಿ ಆಟ, ಚಿನ್ನಿದಾಂಡು, ಗಾಳಿಪಟ ಮುಂತಾದ ಗ್ರಾಮೀಣ ಆಟಗಳು ನಮ್ಮ ಬೇಸಿಗೆ ರಜೆಯನ್ನು ರಂಜನೀಯವಾಗಿಸುತ್ತಿದ್ದವು. ಆದರೆ ಈಗ ಅವೆಲ್ಲವು ಮಾಯವಾಗಿದೆ. ಬೇಸಿಗೆ ಶಿಬಿರದಲ್ಲಿ ಇಂತಹ ಗ್ರಾಮೀಣ ಆಟಗಳ ಪರಿಚಯವನ್ನು ಸಹ ಮಾಡಿಸಿ ಎಂದು ಸಲಹೆ ನೀಡಿದರು.

300x250 AD

ಭಟ್ಕಳ ಅರ್ಬನ್ ಬ್ಯಾಂಕಿನ ನಿವೃತ್ತ ಜನರಲ್ ಮ್ಯಾನೇಜರ್ ಮಾನಾಸುತ ಶಂಭು ಹೆಗಡೆ ಮಾತನಾಡುತ್ತಾ, ಭಟ್ಕಳಕ್ಕೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ವಿಭಿನ್ನವಾಗಿ ಬೇಸಿಗೆ ಶಿಬಿರವನ್ನು ಆಯೋಜನೆ ಮಾಡಿದ್ದಕ್ಕೆ ಆಯೋಜಕರನ್ನು ಅಭಿನಂದಿಸುತ್ತಾ, ಬೇಸಿಗೆ ಶಿಬಿರದ ಮಹತ್ವದ ಕುರಿತು ಆಶು ಕವನವನ್ನು ರಚಿಸಿ ವಾಚಿಸಿದರು.
ವಿದ್ಯಾಂಜಲಿ ಪಬ್ಲಿಕ್ ಶಾಲೆಯ ಮುಖ್ಯಾಧ್ಯಾಪಕ ಶೈಲಜಾ ಪ್ರಭು ಮತ್ತು ವಿದ್ಯಾ ಭಾರತಿ ಶಾಲೆಯ ಮುಖ್ಯಾಧ್ಯಾಪಕ ರೂಪಾ ಖಾರ್ವಿ ಮಾತನಾಡಿದರು. ಇಸ್ಥೆಟಿಕ್ ಕಲ್ಚರಲ್ ಅಂಡ್ ಎಜ್ಯುಕೇಶನಲ್ ಫೌಂಡೇಶನ್‌ನ ಸುದರ್ಶನ ಭಟ್ಕಳ ಅಧ್ಯಕ್ಷತೆ ವಹಿಸಿ ಸರ್ವರ ಸಹಕಾರವನ್ನು ಕೋರಿದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಪ್ರಕಾಶ ಶಿರಾಲಿ ಸ್ವಾಗತಿಸಿದರು. ದಿ ನ್ಯೂ ಇಗ್ಲೀಷ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ.ವೀರೇಂದ್ರ ಶಾನಭಾಗ ವಂದನಾರ್ಪಣೆ ಮಾಡಿದರು. ವಿದ್ಯಾಧರ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು. ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. 

Share This
300x250 AD
300x250 AD
300x250 AD
Back to top