• Slide
    Slide
    Slide
    previous arrow
    next arrow
  • ಹತ್ತನೇ ತರಗತಿಯ ಪರೀಕ್ಷೆಗಳಲ್ಲಿ ಬೇಕಿದೆ ಒಂದಿಷ್ಟು ಬದಲಾವಣೆ

    300x250 AD

    ಹತ್ತನೇ ತರಗತಿಯ ಪರೀಕ್ಷೆಗಳಲ್ಲಿ ಹಲವು ಅಮೂಲಾಗ್ರ ಬದಲಾವಣೆಗಳು ಆಗಿದೆ ಅಲ್ಲದೆ ಇನ್ನು ಒಂದಿಷ್ಟು ಆಗಬೇಕಾಗಿದೆ. ಪ್ರತಿಪಕ್ಷ ಕೇಂದ್ರದಲ್ಲೂ ಆರಕ್ಷಕ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ನೇಮಿಸಿದ್ದು ಒಂದು ಉತ್ತಮ ಸಂಗತಿ. ಅಲ್ಲದೆ ಪ್ರವೇಶದ್ವಾರದಲ್ಲಿ ಮೊಬೈಲ್ಸ್ ಸ್ವಾಧೀನ ಅಧಿಕಾರಿಯ ಯೋಜಿಸಿದ್ದು ಒಂದು ಮಹತ್ವದ ಸಂಗತಿ. ಅಲ್ಲದೆ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಿದ್ದು ಮಹತ್ವದ ವಿಷಯ.

    ಆದರೆ ಬದಲಾವಣೆಗಳು ಒಂದಿಷ್ಟು ಬೇಕಾಗಿದೆ ಅದರಲ್ಲಿ ಪ್ರಮುಖವಾಗಿ ಉತ್ತರ ಪತ್ರಿಕೆಯ ಕೈಪಿಡಿಯಲ್ಲಿ 40ಕ್ಕೂ ಹೆಚ್ಚು ಪುಟಗಳು ಇರುತ್ತದೆ ಅದು ಕೆಲವು ಉಪಯೋಗಕ್ಕೆ ಬರುತ್ತವೆ ಕೆಲವು ಅರ್ಧದಷ್ಟು ನಿರುಪಯೋಗಿ ಆಗುತ್ತದೆ. ಮುಖ್ಯ ಉತ್ತರದ ಕೈಪಿಡಿಯಾದ ಪುಟಗಳ ಸಂಖ್ಯೆಯಲ್ಲಿ ಕಡಿಮೆ ಮಾಡುವ ಅವಶ್ಯಕತೆ ಇದೆ. ಇದು ದೊಡ್ಡ ಪ್ರಮಾಣದಲ್ಲಿ ಅನವಶ್ಯಕ ಕಾಗದದ ಉಪಯೋಗಕ್ಕೆ ಕಾರಣವಾಗಿದೆ. ಉತ್ತರ ಪತ್ರಿಕೆಯ ಕೈಪಿಡಿ ಒಂದು ಮುಗಿದಿದೆ ಎಂದು ವಿದ್ಯಾರ್ಥಿ ಹೇಳಿದಾಗ ಇನ್ನು 40 ಪುಟದ್ದೇ ಕೈಪಿಡಿಯನ್ನ ನೀಡಲಾಗುತ್ತದೆ. ಅಂದರೆ ಎರಡನೇ ಕೈಪಿಡಿಯಲ್ಲಿ ಹತ್ತು ಪುಟಗಳನ್ನ ವಿದ್ಯಾರ್ಥಿ ಉಪಯೋಗಿಸಿದರೆ 30 ಪುಟಗಳು ನೇರ ನೇರ ಹಾಳು.
    ಇನ್ನು ಕೆಲವು ಪ್ರಖ್ಯಾತ ಅತಿ ಹೆಚ್ಚು ವಿದ್ಯಾರ್ಥಿಗಳ ಸಂಖ್ಯೆ ಇರುವಂತಹ ಪರೀಕ್ಷಾ ಕೇಂದ್ರದಲ್ಲಿ ಶತಪ್ರತಿಶತ ಫಲಿತಾಂಶ ತರುವ ಹುಮ್ಮಸ್ಸಿನಿಂದ ಕೆಲವು ಅನೈತಿಕ ವಿಚಾರಗಳು ಆಗಿವೆ ಎಂಬ ಗುಸು-ಗುಸು ಮಾತು ಪಾಲಕರಲ್ಲಿ.

    ಇನ್ನು ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಆಯಾ ವಿಷಯಗಳ ಶಿಕ್ಷಕರನ್ನೇ ಮೇಲ್ವಿಚಾರಕರನ್ನಾಗಿ ನೇಮಿಸಿದ್ದು ಇದೆ ಎಂದು ಕೆಲವು ಪಾಲಕರ ಮನದಾಳದ ಮಾತಾಗಿದೆ.

    300x250 AD

    ಚುನಾವಣಾ ಮಾದರಿಯಲ್ಲೇ ಈ ರೀತಿ ಮಹತ್ವದ ಘಟ್ಟದ ಪರೀಕ್ಷೆಗಳಿಗೆ ಇತರ ಜಿಲ್ಲೆಯ ಸಿಬ್ಬಂದಿಯನ್ನೇ ನೇಮಿಸುವ ವಿಚಾರ ಸರಕಾರ ಮಾಡಲು ಈಗ ಉತ್ತಮ ಕಾಲವಾಗಿದೆ.

    (ವಿ.ಸೂ. ಓದುಗರ ವೈಯಕ್ತಿಕ ಮಾಹಿತಿಯಾಗಿದೆ)

    Share This
    300x250 AD
    300x250 AD
    300x250 AD
    Leaderboard Ad
    Back to top