• Slide
    Slide
    Slide
    previous arrow
    next arrow
  • ನೀರ್ನಳ್ಳಿ ಆಲೆಮನೆ ಹಬ್ಬ: ಗಾನ-ನೃತ್ಯ-ಚಿತ್ರ-ಹಿಮ್ಮೇಳ ವೈಭವ ಯಶಸ್ವಿ

    300x250 AD

    ಶಿರಸಿ: ತಾಲೂಕಿನ ನೀರ್ನಳ್ಳಿಯ ಹೈಸ್ಕೂಲ್ ಆವರಣದಲ್ಲಿ ಸಂಘಟಿಸಲಾಗಿದ್ದ ‘ಆಲೆಮನೆ ಹಬ್ಬ ಹಾಗೂ ಸಾಂಸ್ಕೃತಿಕ ಸಂಜೆ’ ಕಿಕ್ಕಿರಿದು ಸೇರಿದ ಜನರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ.
    ಉಚಿತ ಪ್ರವೇಶ ಹೊಂದಿದ್ದ ಆಲೆಮನೆ ಹಬ್ಬದಲ್ಲಿ ಕೋಣನಕಟ್ಟೆ ಕಬ್ಬಿನ ಶುದ್ಧ ಹಾಲು ಇದ್ದಿದ್ದು ಆಗಮಿಸಿದ ಅಭಿಮಾನಿಗಳು ತಮ್ಮಿಷ್ಟದ ತಿನಿಸಿನೊಂದಿಗೆ ಕಬ್ಬಿನ ಹಾಲಿನ ಸವಿ ಸವಿದರು.
    ಇದರೊಂದಿಗೆ ಉಚಿತವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಸಂಜೆಯಲ್ಲಿ ಸಂಯೋಜನೆಗೊಂಡಿದ್ದ ‘ಗಾನ-ನೃತ್ಯ-ಚಿತ್ರ-ಹಿಮ್ಮೇಳ ವೈಭವ’ ವಿಶೇಷ ಕಾರ್ಯಕ್ರಮ ಅಭಿಮಾನಿಗಳಿಗೆ ಕಬ್ಬಿನ ಹಾಲಿನೊಂದಿಗೆ ಸಾಂಸ್ಕೃತಿಕ ರಸದೂಟ ನೀಡುವಲ್ಲಿ ಯಶಸ್ವಿಯಾಯಿತು.
    ಗಾನ ವಿಭಾಗದಲ್ಲಿ ಭಾಗವತರಾಗಿ ಸಾಲಿಗ್ರಾಮ ಮೇಳದ ಪ್ರಧಾನ ಭಾಗವತರಾದ ರಾಮಕೃಷ್ಣ ಹೆಗಡೆ ಹಿಲ್ಲೂರ್‌ರವರು ತಮ್ಮ ಸುಮಧುರ ಕಂಠದಲ್ಲಿ ವಿವಿಧ ಯಕ್ಷಗಾನ ಪ್ರಸಂಗಗಳಿಂದ ಆಯ್ದ ಹಾಡುಗಳನ್ನು ಹಾಡಿದರು. ಭಾಗವತರ ಹಾಡಿಗೆ ಹಿಮ್ಮೇಳದಲ್ಲಿ ಮದ್ದಳೆ ವಾದನದಲ್ಲಿ ಅನಿರುದ್ಧ ವರ್ಗಾಸರ ಹಾಗೂ ಚಂಡೆ ವಾದನದಲ್ಲಿ ಪ್ರಸನ್ನ ಹೆಗ್ಗಾರ್ ಸಾಥ್ ನೀಡಿದರು.
    ಮುಮ್ಮೇಳದ ನೃತ್ಯ ಅಭಿನಯದಲ್ಲಿ ಯಕ್ಷಗಾನದ ಭರವಸೆಯ ಕುಡಿಗಳಾದ ಪ್ರವೀಣ ತಟ್ಟೀಸರ ಹಾಗೂ ಸ್ತ್ರೀ ಪಾತ್ರಧಾರಿಯಾಗಿ ನಾಗರಾಜ ಕುಂಕಿಪಾಲ್‌ರವರು ಆಯಾ ಪ್ರಸಂಗದ ಹಾಡಿಗೆ ತಕ್ಕಂತೆ ಗಮನ ಸೆಳೆದರು. ಹಾಡು, ಅಭಿನಯ ಎರಡು ನಡೆಯುತ್ತಿರುವಾಗ ನಿವೃತ್ತ ಕಲಾ ಶಿಕ್ಷಕ, ಖ್ಯಾತ ವ್ಯಂಗ್ಯ ಚಿತ್ರಕಾರ ನಿರ್ನಳ್ಳಿ ಗಣಪತಿಯವರು ಅಂದಿನ ಸನ್ನಿವೇಶವನ್ನು ನೆನಪಿಸುವಂತೆ ಸುಂದರವಾಗಿ ಚಿತ್ರ ಬಿಡಿಸಿ ಸಭೀಕರ ಕರತಾಡನಕ್ಕೆ ಒಳಗಾದರು. ಸರಿ ಸುಮಾರು ಎರಡುವರೆ ತಾಸುಗಳಿಗೂ ಮಿಕ್ಕಿ ನಡೆದ ಕಾರ್ಯಕ್ರಮವನ್ನು ಗಿರಿಧರ ಕಬ್ನಳ್ಳಿ ಸ್ವಾಗತಿಸಿ ನಿರ್ವಹಿಸಿದರು.

    ಇದರೊಂದಿಗೆ ಆಲೆಮನೆ ಹಬ್ಬದಂಗವಾಗಿ ಸ್ವರ್ಣವಲ್ಲೀ ಮಾತೃ ಮಂಡಳಿಯವರಿಂದ ಮತ್ತು ಸುವರ್ಣಾ ಹೆಗಡೆ ನೀರ್ನಳ್ಳಿ ಮತ್ತು ಸಂಗಡಿಗರಿಂದ ಭಜನೆ ಕಾರ್ಯಕ್ರಮ ಸಿಂಚನಾ ಎಲ್. ಹೆಗಡೆಯವರಿಂದ ನೃತ್ಯ, ಅನುಷಾ ಹೊಸ್ಮನೆಯವರಿಂದ ಹಾಡು, ಅನನ್ಯಾ ಭಟ್ಟ ಇವರಿಂದ ಭರತನಾಟ್ಯ, ನಂತರದಲ್ಲಿ ಹುತ್ಗಾರ್ ಸ್ಪಂದನಾ ಇವಳಿಂದ ಗಾಯನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಹಾರ್ಮೋನಿಯಂನಲ್ಲಿ ವರ್ಗಾಸರ ಅಜೇಯ ಹೆಗಡೆ ತಬಲಾದಲ್ಲಿ ಆಡುಕಳ ಗುರುರಾಜ್ ಹೆಗಡೆ ಸಹಕರಿಸಿದರು.
    ಎರಡು ದಿನಗಳ ಕಾಲ ನಡೆದ ನೀರ್ನಳ್ಳಿ ಆಲೆಮನೆ ಹಬ್ಬದಲ್ಲಿ ಸಂಘಟಕ ಗಣೇಶ ಹೆಗಡೆ ಮತ್ತು ಗೆಳೆಯರ ಬಳಗದವರು ಕಲಾವಿದರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top