ಶಿರಸಿ: ಅರಸೀಕೆರೆ ಕ್ಷೇತ್ರದ ವಿಧಾನಸಭಾ ಸದಸ್ಯ ಶಿವಲಿಂಗೇಗೌಡ ರವಿವಾರದಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ರಾಜೀನಾಮೆ ಸಲ್ಲಿಸಿದರು.
ಅರಸಿಕೇರೆಯಿಂದ 2008, 2013, 2018ರಲ್ಲಿ ಜೆಡಿಎಸ್ ಪಕ್ಷದಿಂದ ವಿಧಾನಸಭೆಗೆ ಆಯ್ಕೆ ಆಗಿದ್ದ ಶಿವಲಿಂಗೇಗೌಡ ಐನೂರಕ್ಕೂ ಅಧಿಕ ಬೆಂಬಲಿಗರ ಜೊತೆ ಶಿರಸಿಗೆ ಆಗಮಿಸಿ ಸ್ಪೀಕರ್ ಅವರಿಗೆ ರಾಜೀನಾಮೆ ಸಲ್ಲಿಸಿದರು.
ಪ್ರಮುಖರಾದ ಎಪಿಎಂಸಿ ರಾಮಚಂದ್ರ, ಜಿ.ಪಂ ಮಾಜಿ ಅಧ್ಯಕ್ಷ ಹುಚ್ಚೇಗೌಡರು, ಸುರೇಶ ಚಗಚಗೇರಿ, ಈಶ್ವರಪ್ಪ ಚಗಚಗೇರಿ, ಮಾಜಿ ಉಪಾಧ್ಯಕ್ಷ ಬಿಳೆ ಚೌಡಯ್ಯರು, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗಂಡಸಿ ಅಯ್ಯಣ್ಣ, ಬಾಣಾವರ ರವಿ ಶಂಕರ, ಜಿ.ಕೆ. ಸತೀಶ, ಲೋಕೇಶ, ಬಿ.ಎಂ. ಧರ್ಮಣ್ಣ, ಪ್ರಜ್ವಲ್, ಹೆಗ್ಗಡ ಮಂಜಣ್ಣ, ನಾಗರಹಳ್ಳಿ ದೇವರಾಜು, ಜಿ.ಎಂ.ರಂಗನಾಥ ಇತರರು ಇದ್ದರು.
ಈ ಹಿಂದೆ ಶಿವಲಿಂಗೇಗೌಡ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರುವುದಾಗಿ ಹೇಳಿದ್ದರು.