Slide
Slide
Slide
previous arrow
next arrow

ಬಾಳಿಗಾ ಕಾಲೇಜಿಗೆ 5, 6ಕ್ಕೆ ನ್ಯಾಕ್ ಕಮಿಟಿ ಭೇಟಿ

300x250 AD

ಕುಮಟಾ: ಪಟ್ಟಣದ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯಕ್ಕೆ ಏ.5 ಮತ್ತು 6ರಂದು ನ್ಯಾಕ್ ತಂಡವು ಭೇಟಿ ನೀಡಲಿದೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ವಿ.ಗಾಂವ್ಕರ್ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಧ್ಯಕ್ಷರಾಗಿ ಆಂಧ್ರಪ್ರದೇಶದ ಕರ್ನೂಲ್ ಕ್ಲಸ್ಟರ್ ಯುನಿವರ್ಸಿಟಿ ಉಪಕುಲಪತಿ ಡಾ.ಸಾಯಿ ಗೋಪಾಲ, ಸಂಚಾಲಕ ಸದಸ್ಯರಾಗಿ ಮುಂಬಯಿ ಎಸ್.ಎನ್.ಡಿ.ಟಿ ಮಹಿಳಾ ವಿಶ್ವವಿದ್ಯಾಲಯದ ಪ್ರವಾಚಕಿ ಡಾ.ಮೀರಾ ಶಂಕರ, ಸದಸ್ಯರಾಗಿ ಮಧ್ಯಪ್ರದೇಶದ ಇಂದೋರ ಎಸ್.ಸಿ.ಎಂ.ಕೆ ವಾಣಿಜ್ಯ ಮಹಾವಿದ್ಯಾಲಯದ ಡಾ.ಮಂಗಲ ಮಿಶ್ರಾ ನೇತೃತ್ವದ ನ್ಯಾಕ್ ತಂಡವು ಭೇಟಿ ನೀಡಿ, ಪರಿಶೀಲನೆ ನಡೆಸಲಿದೆ. ಮಹಾವಿದ್ಯಾಲಯವು ಈಗ 4ನೆಯ ಅವಧಿಯ ನ್ಯಾಕ್ ಮೌಲ್ಯಮಾಪನಾ ಹಾಗೂ ಮೌಲ್ಯಾಂಕದ ಪ್ರಕ್ರಿಯೆಗೆ ಒಳಪಡುತ್ತಿದ್ದು, ಕಳೆದ ಮೂರು ಆವರ್ತಗಳಲ್ಲಿ ಮಹಾವಿದ್ಯಾಲಯವು ಅನುಕ್ರಮವಾಗಿ “ಬಿ++,” “ಎ” ಹಾಗೂ “ಎ” ಶ್ರೇಣಿಗಳನ್ನು ಪಡೆದಿದೆ. ಮಹಾವಿದ್ಯಾಲಯದ ಶೈಕ್ಷಣಿಕ ಹಾಗೂ ಸಹಪಠ್ಯ ಚಟುವಟಿಕೆಗಳನ್ನೊಳಗೊಂಡು ಸಂಸ್ಥೆಯ ಮೂಲ ಸೌಕರ್ಯಗಳನ್ನು ಮತ್ತು ಕಳೆದ 5 ವರ್ಷಗಳಲ್ಲಿ ಮಹಾವಿದ್ಯಾಲಯದ ಪ್ರಗತಿಯನ್ನು ಪರಿಶೀಲಿಸುತ್ತಾರೆ ಎಂದರು.

ನ್ಯಾಕ್ ತಂಡವು ವಿದ್ಯಾರ್ಥಿಗಳು, ಉಪನ್ಯಾಸಕರು, ಆಡಳಿತ ಮಂಡಳಿ ಮತ್ತು ಪೂರ್ವ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾರೆ. ನಿಗದಿತ ಮಾನದಂಡಗಳ ಪ್ರಕಾರ ದಾಖಲೆಗಳನ್ನು ಪರಿಶೀಲಿಸಿ ನ್ಯಾಕ್ ಕಚೇರಿಗೆ ಸಮಗ್ರ ವರದಿ ಸಲ್ಲಿಸುತ್ತಾರೆ. ವರದಿ ಹಾಗೂ ಮಹಾವಿದ್ಯಾಲಯವು ಈಗಾಗಲೇ ನ್ಯಾಕ್ ಕಚೇರಿಗೆ ಸಲ್ಲಿಸಿದ ಸ್ವಯಂ ಮೌಲ್ಯಮಾಪನಾ ವರದಿ ಆಧರಿಸಿ ಮಹಾವಿದ್ಯಾಲಯಕ್ಕೆ ನ್ಯಾಕ್ ಮಾನ್ಯತಾ ಶ್ರೇಣಿಯನ್ನು ನೀಡಲಾಗುತ್ತದೆ. ನ್ಯಾಕ್ ಮಾನ್ಯತಾ ಶ್ರೇಣಿಯು 5 ವರ್ಷಗಳ ಕಾಲ ಊರ್ಜಿತವಾಗಿರುತ್ತದೆ ಎಂದ ಅವರು, ಏ.5 ರಂದು ಮಧ್ಯಾಹ್ನ 3.30 ಘಂಟೆಗೆ ನಡೆಯುವ ಸಂವಾದದಲ್ಲಿ ಪಾಲಕರು ಮತ್ತು ಪೂರ್ವ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ವಿನಂತಿಸಿದರು.

300x250 AD

ಸುದ್ದಿಗೋಷ್ಠಿಯಲ್ಲಿ ಕೆನರಾ ಕಾಲೇಜು ಸೊಸೈಟಿಯ ಕಾರ್ಯದರ್ಶಿ ಹನುಮಂತ ಶಾನಭಾಗ, ಐ.ಕ್ಯೂ.ಎ.ಸಿ ಸಂಚಾಲಕ ಡಾ.ಎನ್.ಕೆ.ನಾಯಕ, ಉಪನ್ಯಾಸಕರಾದ ಡಾ.ಪ್ರಕಾಶ ಪಂಡಿತ, ಪ್ರೋ.ಲೋಕೇಶ ಹೆಗಡೆ ಸೇರಿದಂತೆ ಮತ್ತಿತರರು ಇದ್ದರು.

Share This
300x250 AD
300x250 AD
300x250 AD
Back to top