Slide
Slide
Slide
previous arrow
next arrow

ವೃದ್ಧರಿಗೆ ಮನೆಯಿಂದಲೇ ಮತ ಚಲಾಯಿಸಲು ಅವಕಾಶ: ಜಗಲಾಸರ್

300x250 AD

ಕುಮಟಾ: ಕ್ಷೇತ್ರದಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟ ವೃದ್ಧರಿಗೆ ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಿದ್ದೇವೆ ಎಂದು ಉಪವಿಭಾಗಾಧಿಕಾರಿ ರಾಘವೇಂದ್ರ ಜಗಲಾಸರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈಗಾಗಲೇ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ. ಮೇ 10ಕ್ಕೆ ಮತದಾನ ಮತ್ತು ಮೇ 13ಕ್ಕೆ ಮತ ಏಣಿಕೆ ನಡೆಯಲಿದೆ. ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟೂ 215 ಮತಗಟ್ಟೆಗಳಿದ್ದು, ಕುಮಟಾದಲ್ಲಿ 151 ಮತ್ತು ಹೊನ್ನಾವರದಲ್ಲಿ 64 ಮತಗಟ್ಟೆಗಳನ್ನು ತೆರೆಯಲು ಸಿದ್ಧತೆ ಮಾಡಿಕೊಂಡಿದ್ದೇವೆ. ಅದರಲ್ಲಿ 14 ಸೂಕ್ಷ್ಮ ಮತ್ತು 6 ಅತೀ ಸೂಕ್ಷ್ಮ ಮತಗಟ್ಟೆಗಳು ಹಾಗೂ 1 ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಯಾಗಿದೆ ಎಂದರು.
ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ 4542 ಮತದಾರರನ್ನು ಗುರುತಿಸಲಾಗಿದೆ. 2441 ಪಿಡಬ್ಲುಡಿ ಮತದಾರರಾಗಿದ್ದಾರೆ. ಸ್ವಇಚ್ಚೆಯಿಂದ ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡುವ ವೃದ್ಧ ಮತದಾರರನ್ನು ಪ್ರೋತ್ಸಾಹಿಸಲಾಗುವುದು. ವೃದ್ಧ ಮತದಾರರು ಆದಷ್ಟು ಮತಗಟ್ಟೆಗೆ ಬಂದು ಮತದಾನ ಮಾಡುವುದು ಉತ್ತಮವಾಗಿದ್ದು, ತೀರಾ ಅನಿವಾರ್ಯತೆ ಇದ್ದವರು ಮಾತ್ರ ಈ ಪೋಸ್ಟಲ್ ಬ್ಯಾಲೋಟ್ ಮೂಲಕ ಮತದಾನ ಮಾಡುವಂತೆ ಅವರು ಮನವಿ ಮಾಡಿದರು.
ಇನ್ನು ಕ್ಷೇತ್ರದಲ್ಲಿ 11 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. 6 ಮಹಿಳಾ ನಿರ್ವಹಣೆಯ ಮತಗಟ್ಟೆಗಳು, 1 ಪಿಡಬ್ಲುಡಿ ಮತಗಟ್ಟೆ, ಯುವ ನೌಕರರು ನಿಯಂತ್ರಿಸುವ ಮತಗಟ್ಟೆಗಳು 2 ಮತ್ತು 2 ಮಾದರಿ ಮತಗಟ್ಟೆಗಳಾಗಿವೆ. 16 ಸ್ಯಾಡೌ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಮೊಬೈಲ್ ನೆಟ್‌ವರ್ಕ ಇಲ್ಲದ 16 ಮತಗಟ್ಟೆಗಳ ಪೈಕಿ 11 ಮತಗಟ್ಟೆಗಳಲ್ಲಿ ನೆಟ್ ವರ್ಕ ಸಂಪರ್ಕ ಕಲ್ಪಿಸಲಾಗಿದ್ದು, ಇನ್ನುಳಿದ 5 ಮತಗಟ್ಟೆಗಳಿಗೆ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ವಿವಿಧ ಪಕ್ಷಗಳ, ಸರ್ಕಾರದ ಬ್ಯಾನರ್, ಪೋಸ್ಟರ್‌ಗಳನ್ನು ತೆರವುಗೊಳಿಸಲಾಗಿದೆ. ಪ್ರತಿ ಅಭ್ಯರ್ಥಿಗೂ 40 ಲಕ್ಷ ರೂ. ವರೆಗೆ ಚುನಾವಣಾ ವೆಚ್ಚವನ್ನು ಮಿತಿಗೊಳಿಸಲಾಗಿದೆ. ಹಿರೇಗುತ್ತಿ, ಕತಗಾಲ್ ಮತ್ತು ಚಂದಾವರದಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದ್ದು, ಪಕ್ಷದ ಕಾರ್ಯ ಚಟುವಟಿಕೆಗಳ ಮೇಲೂ ನಿಗಾ ಇಡಲಾಗುತ್ತಿದೆ. ವಿವಿಧ ರೀತಿಯ ಚುನಾವಣಾ ಅಕ್ರಮಗಳನ್ನು ತಡೆಯಲು ಮತ್ತು ಸಾರ್ವಜನಿಕರ ಸಹಾಯಕ್ಕಾಗಿ ವಿಶೇಷ ಸಹಾಯವಾಣಿಯನ್ನು ದೂ. 08386-222052 ತೆರೆಯಾಗಿದೆ. ಯಾವುದೇ ಸಮಯದಲ್ಲಿ ಈ ಸಹಾಯವಾಣಿ ಕ್ಷೇಂದ್ರಕ್ಕೆ ಕರೆ ಮಾಡುವ ಮೂಲಕ ದೂರು ಸೇರಿದಂತೆ ಇನ್ನಿತರೆ ಸಹಾಯ ಪಡೆಯಬಹುದಾಗಿದೆ ಎಂದು ತಿಳಿಸಿದರು. ತಹಶೀಲ್ದಾರ್ ಆರ್.ವಿ.ಕಟ್ಟಿ, ಗ್ರೇಡ್-2 ತಹಶೀಲ್ದಾರ್ ಸತೀಶ್ ಗೌಡ ಇದ್ದರು.

300x250 AD
Share This
300x250 AD
300x250 AD
300x250 AD
Back to top