ಕಾರವಾರ: ಇತ್ತೀಚೆಗೆ ರೋಟರಿ ಜಿಲ್ಲಾ ಪ್ರಾಂತಪಾಲ ವೆಂಕಟೇಶ ದೇಶಪಾಂಡೆ ಅವರು ರೋಟರಿ ಕ್ಲಬ್‌ಗೆ ಭೇಟಿ ನೀಡಿದಾಗ ನಂದನಗದ್ದಾ ಆಶಾ ನಾಯಕ್ ಆಂಗ್ಲ ಮಾಧ್ಯಮ ಶಾಲೆಗೆ ಭೇಟಿ ನೀಡಿ, ಕಾರವಾರ ರೋಟರಿ ಸಂಸ್ಥೆಯವರು ನಿರ್ಮಿಸಿಕೊಟ್ಟಿರುವ ವಿದ್ಯಾರ್ಥಿಗಳಿಗೆ ಕೈ-ಕಾಲು ತೊಳೆಯುವ ಹೈಟೆಕ್ ವಾಷ್ ಇನ್ ಸ್ಟೇಶನ್ ಉದ್ಘಾಟಿಸಿದರು.
ಸದ್ರಿ ಶಾಲೆಯಲ್ಲಿ ಸುಮಾರು 500 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಮಧ್ಯಾಹ್ನದ ಬಿಸಿಊಟದ ನಂತರ ವಿದ್ಯಾರ್ಥಿಗಳಿಗೆ ಕೈ ತೊಳೆಯಲು ವ್ಯವಸ್ಥೆ ಸರಿಯಾಗಿರಲಿಲ್ಲ. ಸದ್ರಿ ಶಾಲೆಗೆ ಕಾರವಾರ ರೋಟರಿ ಸಂಸ್ಥೆಯವರು ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಕೈ-ಕಾಲು ತೊಳೆಯವ ವಾಷ್ ಇನ್ ಸ್ಟೇಶನ್ ಅಳವಡಿಸಿಕೊಡಲು ನೀರು ಮತ್ತು ನೈರ್ಮಲ್ಯ ಯೋಜನೆಯಡಿಯಲ್ಲಿ ಕ್ರಮ ವಹಿಸಿದ್ದರು. ಪ್ರಸ್ತುತ ರೋಟರಿ ಅಧ್ಯಕ್ಷ ರಾಘವೇಂದ್ರ ಜಿ.ಪ್ರಭು ಆಸಕ್ತಿ ವಹಿಸಿ ಅನುಪ ಯೋಗಿಶ ಪ್ರಭು ಹಾಗೂ ಕೆ.ಆರ್.ವಾಸುದೇವ ಪ್ರಭು ಸಹಯೋಗದಲ್ಲಿ 6 ಉತ್ತಮ ಗುಣಮಟ್ಟದ ಸ್ಟೀಲ್ ಸಿಂಕ್, ಸಂಪೂರ್ಣ ಟೈಲ್ಸ್ ಜೋಡಣೆಯೊಂದಿಗೆ ಹಾಗೂ ಉತ್ತಮ ಗುಣಮಟ್ಟದ ಪ್ಲಂಬಿoಗ್ ವ್ಯವಸ್ಥೆಯೊಂದಿಗೆ ವಿದ್ಯಾರ್ಥಿಗಳಿಗೆ ಕೈ ಮತ್ತು ಕಾಲು ತೊಳಯಲು ಅನುಕೂಲವಾಗುವಂತಹ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ.
ಅದಕ್ಕೆ ತಕ್ಕಂತೆ ಕನ್ನಡಿಗಳನ್ನು ಅಳವಡಿಸಿ ವಿದ್ಯಾರ್ಥಿಗಳಿಗೆ ಸುಚಿತ್ವದ ಮಾಹಿತಿ ನೀಡುವಂತಹ ನಾಮ ಫಲಕಗಳನ್ನು ಅಳವಡಿಸಲಾಗಿದೆ. ಹಾಗೂ ಭದ್ರತಾ ದೃಷ್ಟಿಯಿಂದ ಎರಡು ಕಬ್ಬಿಣದ ಬಾಗಿಲನ್ನು ಅಳವಡಿಸಿಕೊಟ್ಟಿದ್ದಾರೆ. ಜಿಲ್ಲಾ ಪ್ರಾಂತಪಾಲರು ಸಂಸ್ಥೆಯ ಕಾರ್ಯವನ್ನು ಶ್ಲಾಘಿಸುತ್ತ ಕಾರವಾರ ರೋಟರಿ ಸಂಸ್ಥೆಯು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅತೀ ಹಚ್ಚಿನ ಪ್ರಾಮುಖ್ಯತ ನೀಡುತ್ತದೆ. ಈಗಾಗಲೇ ವಿದ್ಯಾರ್ಥಿಗಳಿಗಾಗಿ, ಶಾಲೆಗಳಿಗಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಪ್ರಾರಂಭದಲ್ಲಿ ಶಾಲೆಯ ವಿದ್ಯಾರ್ಥಿಗಳು ಅತಿಥಿಗಳನ್ನು ಶಿಸ್ತುಬದ್ಧವಾಗಿ ಪಥಸಂಚಲನದೊoದಿಗೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಉಪ ಪ್ರಾಂತಪಾಲರಾದ ದಾಂಡೇಲಿಯ ಪ್ರಕಾಶ ಶೆಟ್ಟಿ ಉಪಸ್ಥಿತರಿದ್ದರು ಹಾಗೂ ಕಾರವಾರ ರೋಟರಿ ಸಂಸ್ಥೆಯ ಕಾರ್ಯದರ್ಶಿ ಗುರುದತ್ತ ಬಂಟ, ಸದಸ್ಯರಾದ ಕೃಷ್ಣಾನಂದ ಬಾಂದೇಕರ, ಶೈಲೇಶ ಹಳದೀಪುರ, ನಾಗರಾಜ ಜೋಶಿ, ಮೋಹನ ನಾಯ್ಕ, ಡಾ. ಸಮೀರಕುಮಾರ ನಾಯಕ, ಗುರು ಹೆಗಡೆ, ಮಾಧವ ನೆವರೇಕರ, ಪ್ರಶಾಂತ ಮಾಂಜ್ರೇಕರ, ಗೋವಿಂದಪ್ಪಾ, ರಾಜೇಶ ಶೇಣ್ವಿ, ಗುರುರಾಜ ಭಟ್, ಶ್ರೀಮತಿ ರಾಜಶ್ರಿ ರಾಘವೇಂದ್ರ ಪ್ರಭು, ಅನೀಲ ಭಟ್, ಸಂಸ್ಥೆಯ ಚೇರಮನ್ ಬಾಳಾ ಕಾಮತ, ಶಾಲಾ ಮುಖ್ಯಾಧ್ಯಾಪಕಿ ರೂಪಾ ಬಾಂದೇಕರ ಹಾಗೂ ಇತರ ಶಿಕ್ಷಕರು ಇದ್ದರು.