ಸಿದ್ದಾಪುರ: ಮಂಗನ ಕಾಯಿಲೆ ಕುರಿತು ಸರ್ಕಾರ ನಿರ್ಲಕ್ಷ್ಯ ವಹಿಸಿಲ್ಲ. ಹೊಸ ಲಸಿಕೆ ಬರುವ ವರ್ಷ ಬರಲಿದೆ. ಈ ಕುರಿತು ಈಗಾಗಲೇ ಹೈದರಾಬಾದ್ ಸಂಸ್ಥೆಯೊಂದಿಗೆ ಮಾತನಾಡಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ಅವರು ಸಿದ್ದಾಪುರದಲ್ಲಿ ಪತ್ರಕರ್ತರರೊಂದಿಗೆ ಶುಕ್ರವಾರ ಮಾತನಾಡಿ, ಮಂಗನ ಕಾಯಿಲೆಯಿಂದ ಮೃತಪಟ್ಟವರಿಗೆ ಈ ಹಿಂದೆ ಒಂದು ವರ್ಷ ಪರಿಹಾರ ನೀಡಿದೆ. ಈ ಹಿಂದೆ ಪರಿಹಾರ ಹೇಗೆ ನೀಡಿದೆ ಎಂದು ಪರಿಶೀಲಿಸುತ್ತೇನೆ. ಇದು ಯಾವುದೇ ಕಾಯಿದೆ ಅಡಿಯಲ್ಲಿ ಪರಿಹಾರ ನೀಡುವಂತೆ ಇಲ್ಲ. ಪೃಕೃತಿ ವಿಕೋಪ, ಕಾಡುಪ್ರಾಣಿಗಳಿಂದ ಹಾನಿ ಆಗಿದ್ದರೆ ಪರಿಹಾರ ನೀಡುವುದಕ್ಕೆ ಅವಕಾಶ ಇದೆ. ಆದರೂ ಈ ಕುರಿತು ಕ್ರಮಕೈಗೊಳ್ಳುತ್ತೇನೆ. ಮಂಗನ ಕಾಯಿಲೆ ಹರಡದಂತೆ ಡಿಸೆಂಬರ್ ತಿಂಗಳಲ್ಲಿ ಪೂರ್ವಭಾವಿ ಸಭೆ ನಡೆಸಿ ರೋಗ ಹರಡದಂತೆ ಸೂಕ್ತ ಕ್ರಮಕೈಗೊಳ್ಳಲಾಗಿದೆ.
ಜನಿವಾರ ವಿಷಯದ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ ಇದು ಆಗ ಬಾರದು. ಇದನ್ನು ನಾನು ಖಂಡಿಸುತ್ತೇನೆ. ಸಮಾಜದಲ್ಲಿ ಈ ರೀತಿಯ ಘಟನೆ ಆಗಬಾರರದು ಯಾರೋ ಈ ರೀತಿ ಮಾಡಿದ್ದಾರೆ. ಕೆಲವರ ಪೂರ್ವಾಗ್ರಹವಾಗಿದೆ. ಈಗಾಗಲೇ ಉನ್ನತ ಶಿಕ್ಷಣ ಸಚಿವರು ಇದನ್ನು ಖಂಡಿಸಿದ್ದಾರೆ. ಅನ್ಯಾಯವಾದವರಿಗೆ ನ್ಯಾಯ ಒದಗಿಸಲಾಗುವುದು ಎಂದು ಹೇಳಿದ್ದಾರೆ.