ಕಾರವಾರ: ವಿದ್ಯಾರ್ಥಿಗಳು ತಮ್ಮ ಗುರಿಗಳ ಸ್ಪಷ್ಟ ಕಲ್ಪನೆಯನ್ನು ಹೊಂದಿದ್ದರೆ ಆ ಕಲ್ಪನೆಗೆ ಆದ್ಯತೆ ನೀಡುವದು ಮುಖ್ಯವಾಗಿದೆ. ಈಗ ಓದುವದು ಬರೆಯುವದು ಮುಖ್ಯವೆಂದು ನೀರ್ಣಯಿಸಿ ಹಾಗು ಅದಕ್ಕೆ ಸಮರ್ಪಣಾ ಭಾವ ಅರ್ಪಿಸಿ, ನಿಮ್ಮ ಸಮಯ ಹಾಗೂ ಶಕ್ತಿಯನ್ನು ಹೆಚ್ಚು ಪರೀಕ್ಷೆಯತ್ತ ಕೇಂದ್ರಿಕರಿಸಿರೆoದು ಖ್ಯಾತ ವಿಜ್ಞಾನಿ ಡಾ.ಅನಿಲಕುಮಾರ ಗಾಂವಕರ (ಯುಎಸ್‌ಎ) ಹೇಳಿದರು.
ಅವರು ಶಿವಾಜಿ ವಿದ್ಯಾ ಮಂದಿರ ಅಸ್ನೋಟಿಯಲ್ಲಿ ಆಯೋಜಿಸಲಾಗಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡಗೆ ಸಮಾರಂಭ ಉದ್ದೇಶಿಸಿ ಮಾತನಾಡುತ್ತಾ, ಸಮಯ ನಿರ್ವಹಣೆ ತುಂಬಾ ಮುಖ್ಯ ಮೊದಲು ವೇಳಾಪಟ್ಟಿ ರಚಿಸುವುದು ಜೊತೆಗೆ ಸ್ವಯಂ ಕಲಿಕೆಯನ್ನು ರೂಢಿಸಿಕೊಳ್ಳುವದು ಅಂತಿಮವಾಗಿ ಗೊಂದಲ ಮತ್ತು ಸಮಯವ್ಯರ್ಥದ ಬಗ್ಗೆ ಗಮನ ಹರಿಸಿ ಹೆಚ್ಚಾಗಿ ಕಾಲಹರಟೆಯನ್ನು ತಪ್ಪಿಸಿ ಇದು ವಾಸ್ತವವಾದ ಬದುಕನ್ನು ತಿಂದು ಬೀಡುತ್ತದೆ ಮತ್ತು ಮಾನಸಿಕ ಒತ್ತಡ ಹೆಚ್ಚಿಸುತ್ತದೆ. ಯೋಗ, ಧ್ಯಾನ ಹಾಗೂ ಅಭ್ಯಾಸ ನಿಮ್ಮ ಮೂಲ ತಂತ್ರಗಳಾಗಿರಲಿ ,ತಂತ್ರಜ್ಞಾನದ ಯುಗದಲ್ಲಿ ಇದ್ದೇವೆ ಅಂದುಕೊAಡ ಬದುಕನ್ನು ಕಂಡುಕೊಳ್ಳಲು ವಿದ್ಯಾರ್ಥಿ ಜೀವನ ಸಾಧಕತೆಯಿಂದ ಕೂಡಿರಲೆಂದು ಮಾರ್ಮಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾದ ಪ.ಅ.ಅಧಿಕಾರಿಗಳಾದ ವಿದ್ಯೇಶ್ವರಿ ನಾಯ್ಕರವರು ವಿದ್ಯಾರ್ಥಿಗಳು ಇಂದಿನ ಬದುಕನ್ನು ಅರ್ಥಮಾಡಿಕೊಂಡು ಮುಂದೆ ಸಾಗಬೇಕೆಂದರು.ಇನ್ನೋರ್ವ ಅತಿಥಿಗಳಾದ ಸೀತಾರಾಮ ಗಾಂವಕರವರು ಮಕ್ಕಳಿಗೆ ಶುಭ ಕೋರಿದರು.ಸಾನಿಧ್ಯ ವಹಿಸಿದ ಗುರೂಜಿ ಆರ್ ಜಿ ಪ್ರಭುರವರು ಮನಸ್ಸು, ಬುದ್ಧಿ ಸಮಚಿತ್ತದಿಂದ ಸಾಗಲೆಂದರು ವೇದಿಕೆಯ ಮೇಲೆ ಉಪಸ್ಥಿತರಿದ್ದ ಆಡಳಿತ ಮಂಡಳಿಯ ಸದಸ್ಯರಾದ ಕೃಷ್ಣಾನಂದ ಸಾಳುಂಕೆ ಹಾಗೂ ಉದಯ ಸಾಳುಂಕೆ ಶುಭ ಕೋರಿದರು. ಮುಖ್ಯಾಧ್ಯಪಕರಾದ ದಿನೇಶ ಗಾಂವಕರವರು ಕೃತಜ್ಞತೆಯ ನುಡಿ ಹೇಳಿದರು. ಇದೆ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂವುಗಳನ್ನು ನೀಡಿ ಬೀಳ್ಕೊಡಲಾಯಿತು.
ಪ್ರತೀಕ್ಷಾ ಪಾಟೇಲ ಸಂಗಡಿಗರ ಪ್ರಾರ್ಥನೆಯೊಂದಿಗೆ ಆರಂಭಗೊoಡ ಕಾರ್ಯಕ್ರಮದಲ್ಲಿ ಶಿಕ್ಷಕರಾದ ವಿಜಯಕುಮಾರ್ ನಾಯ್ಕ ಸ್ವಾಗತಿಸಿದರು ಗಣೇಶ ಬಿಷ್ಠಣ್ಣನವರ ನಿರೂಪಿಸಿ ವಂದಿಸಿದರು.