• Slide
    Slide
    Slide
    previous arrow
    next arrow
  • ಏ.3ರಿಂದ ಚಿಣ್ಣರ ಕಲರವ ಬೇಸಿಗೆ ಶಿಬಿರ

    300x250 AD

    ಸಿದ್ದಾಪುರ: ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ ಹಾಗೂ ಲಯನ್ಸ್ ಕ್ಲಬ್ ಇವರ ಸಹಯೋಗದಲ್ಲಿ ಏ.3ರಿಂದ 9ರವರೆಗೆ ಚಿಣ್ಣರ ಕಲರವ ಬೇಸಿಗೆ ಶಿಬಿರ ಕಾರ್ಯಕ್ರಮ ಪಟ್ಟಣದ ಬಾಲಭವನದಲ್ಲಿ ನಡೆಯಲಿದೆ ಎಂದು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್ ತಿಳಿಸಿದರು.
    ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 9ರಿಂದ 15 ವರ್ಷದ ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ. ಪ್ರತಿ ದಿನ ಬೆಳಿಗ್ಗೆ 9.30ರಿಂದ 1ರವರೆಗೆ ಶಿಬಿರ ನಡೆಯುತ್ತದೆ. ಶಿಬಿರದಲ್ಲಿ ಯೋಗ, ಚಿತ್ರಕಲೆ, ಕ್ರೀಡೆ, ಕರಾಟೆ, ಸಾಹಿತ್ಯ, ಕ್ರಾಫ್ಟ್, ತರಬೇತಿ ಹಾಗೂ ಒಂದು ದಿನದ ಹೊರ ಸಂಚಾರ ನಡೆಯುತ್ತದೆ. 150 ರೂ. ಪ್ರವೇಶ ಶುಲ್ಕವಿರುತ್ತದೆ. ಮೊದಲು ಹೆಸರು ನೋಂದಾಯಿಸಿದ 40 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ. ತಾಲೂಕಿನ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು. ಹೆಸರು ನೋಂದಣಿಗಾಗಿ ಮೊ.ಸಂ: tel:+919448738131, Tel:+919901717336, tel:+917760226002 ನಂಬರ್‌ಗೆ ಸಂಪರ್ಕಿಸುವoತೆ ತಿಳಿಸಿದ್ದಾರೆ.
    ಈ ಸಂದರ್ಭದಲ್ಲಿ ಲಯನ್ಸ್ ಅಧ್ಯಕ್ಷ ಆರ್.ಎಂ.ಪಾಟೀಲ್, ಕಾರ್ಯದರ್ಶಿ ಕುಮಾರ್ ಗೌಡರ್, ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಎನ್.ವಿ.ಹೆಗಡೆ ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top