ಕಾರವಾರ: 2023ನೇ ಏಪ್ರಿಲ್ / ಮೇ ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ನಡೆಯಲಿರುವ ಸಾರ್ವಜನಿಕ ಚುನಾವಣೆಯನ್ನು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸುವ ಉದ್ದೇಶದಿಂದ ಮದ್ಯಗಳ ತಯಾರಿಕೆ, ಸಂಗ್ರಹಣೆ, ಮತ್ತು ಹಂಚಿಕೆಯನ್ನು ತಡೆಗಟ್ಟಲು ಹಾಗೂ ಚುನಾವಣೆ ನಡೆಯಲಿರುವ ಸಂದರ್ಭದಲ್ಲಿ ಹಾಗೂ ಮತ ಎಣಿಕೆ ನಡೆಯಲಿರುವ ಸಂದರ್ಭಗಳಲ್ಲಿ ಅಬಕಾರಿ ಅಕ್ರಮಗಳನ್ನು ಯಶಸ್ವಿಯಾಗಿ ತಡೆಗಟ್ಟಲು ಹಾಗೂ ಚುನಾವಣಾ ಸಂದರ್ಭದಲ್ಲಿ ಅನಧಿಕೃತವಾಗಿ ಗೋವಾ ರಾಜ್ಯದ ಮದ್ಯ ವನ್ನ ಕಳ್ಳಭಟ್ಟಿ ಸರಾಯಿ ನಕಲಿ ಮದ್ಯ ನಕಲಿ ಸಾರಾಯಿ ಮುಂತಾದವುಗಳನ್ನು ದಾಸ್ತಾನು ಮಾಡಿ ವಿತರಿಸುವಂತಹ ಅಕ್ರಮಗಳನ್ನು ತಡೆಗಟ್ಟಲು, ಕಟ್ಟುನಿಟ್ಟಿನ ಕರ್ತವ್ಯ ನಿರ್ವಹಿಸಿ ಅಕ್ರಮಗಳನ್ನು ಪತ್ತೆಹಚ್ಚಿ, ಕಾನೂನು ಕ್ರಮ ಜರುಗಿಸಲು ಮತ್ತು ನಿಷ್ಪಕ್ಷಪಾತವಾಗಿ ಚುನಾವಣೆಯು ನಡೆಯುವಂತೆ ನೋಡಿಕೊಳ್ಳಲು ಹಾಗೂ ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶವಾಗದಂತೆ ನೋಡಿಕೊಳ್ಳಲು ಮತ್ತು ಚುನಾವಣೆ ಹಾಗೂ ಮತ ಎಣಿಕೆ ಸಂದರ್ಭದಲ್ಲಿ ಜಿಲ್ಲಾ ದಂಡಾಧಿಕಾರಿಗಳು ಮದ್ಯ ಮಾರಾಟ ನಿಷೇಧಿಸಿ ಹೊರಡಿಸುವ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲೆಯಾದ್ಯಂತ ತಾಲೂಕು ತಂಡ ಹಾಗೂ ಜಿಲ್ಲಾ ತಂಡಗಳನ್ನು ರಚಿಸಿ ದಿನದ 24 ಗಂಟೆಯು ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿರುತ್ತದೆ.
ಜಿಲ್ಲಾ ತಂಡದಲ್ಲಿ ಅಬಕಾರಿ ಉಪ ಆಯುಕ್ತರ ಕಚೇರಿಯಿಂದ ಬಸವರಾಜ ಕರವಿನಕೊಪ್ಪ – tel:+919449597117, tel:+919353477936, ಕಾರವಾರ ತಾಲೂಕು ವಲಯದಿಂದ ದಯಾನಂದ – tel:+919448954958, ಅಂಕೋಲಾ ತಾಲೂಕು ವಲಯದಿಂದ ರಾಹುಲ ನಾಯಕ – tel:+9108388230440, ಕುಮಟಾ ತಾಲೂಕು ವಲಯದಿಂದ ಶ್ರೀಮತಿ – tel:+919901320012, ಹೊನ್ನಾವರ ತಾಲೂಕು ವಲಯದಿಂದ ದಾಮೋದರ ಎನ್ ನಾಯ್ಕ- tel:+919449955896, ಭಟ್ಕಳ್ ತಾಲೂಕು ವಲಯದಿಂದ ವಿಶ್ವಾನಾಥ್ ಭಟ್ – tel:+919482297747, ಶಿರಸಿ ತಾಲೂಕು ವಲಯದಿಂದ ಜ್ಯೋತಿಶ್ರೀ – tel:+919902745874, tel:+919449597122, ತಹಸೀಲ್ದಾರ ಕಛೇರಿ ಸಿದ್ದಾಪುರದಿಂದ ಮಹೇಂದ್ರ ಎಸ್. ನಾಯ್ಕ-tel:+919448804737, ಯಲ್ಲಾಪುರ ತಾಲೂಕು ವಲಯದಿಂದ ಪ್ರಶಾಂತ್ ಪಾಟೀಲ- tel:+919483909353, ತಹಶೀಲ್ದಾರ ಕಛೇರಿ, ಮುಂಡಗೋಡದಿAದ ಅನಿಲ ಕೊಕಟಾನೂರು –tel:+917483393400, ದಾಂಡೇಲಿ ತಾಲೂಕು ವಲಯದಿಂದ ಗಣೇಶ್ ಎಸ್. ನಾಯ್ಕ- tel:+919742837336, ತಹಸೀಲ್ದಾರ ಕಛೇರಿ ಜೋಯಿಡದಿಂದ ಟಿ. ಬಿ. ಮಲ್ಲಣ್ಣನವರ ಇವರನ್ನು ತಂಡದ ಮುಖ್ಯಸ್ಥರಾಗಿ ಆಯ್ಕೆ ಮಾಡಲಾಗಿದೆ.
ಸಾರ್ವಜನಿಕರಿಗೆ ಯಾವುದೇ ರೀತಿಯ ಅನಧೀಕೃತ ಮದ್ಯದ ದಾಸ್ತಾನು, ಸಾಗಾಟ, ಮಾರಾಟ ಅಥವಾ ತಯಾರಿಕೆಗೆ ಸಂಬoಧಿಸಿದ ವ್ಯವಹಾರಗಳು, ಕಂಡುಬoದಲ್ಲಿ ಕೂಡಲೇ ಮೇಲಿನ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡುವಂತೆ ಡೆಪ್ಯೂಟಿ ಕಮಿಷನರ್ ಆಫ್ ಎಕ್ಸೆoಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.