ಹೊನ್ನಾವರ: ಇಲ್ಲಿನ ರೋಟರಿ ಕ್ಲಬ್‌ನಿಂದ ಪಟ್ಟಣದ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾದ ರಾಮತೀರ್ಥದ ಆವರಣದಲ್ಲಿ ಸೋಲಾರ್ ದೀಪಗಳನ್ನು ಅಳವಡಿಸಲಾಯಿತು.
ರಾಮತೀರ್ಥ ಕ್ಷೇತ್ರದ ಆವರಣ ರಾತ್ರಿಯ ಸಮಯದಲ್ಲಿ ದೀಪಗಳು ಇಲ್ಲದ ಕಾರಣ ಅಕ್ರಮ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ. ಈ ಕುರಿತು ದೇವಸ್ತಾನದ ಅರ್ಚಕರು ರೋಟರಿ ಕ್ಲಬ್ ಸದಸ್ಯರ ಬಳಿ ದೀಪಗಳನ್ನು ಅಳವಡಿಸುವ ಕುರಿತು ಮನವಿಯನ್ನು ಮಾಡಿದ್ದರು.
ಇದನ್ನು ಪರಿಗಣಿಸಿ ರೋಟರಿ ಕ್ಲಬ್ ತಮ್ಮ ಗ್ರೀನ್ ಏನರ್ಜಿ ಕ್ಲೀನ್ ಎನರ್ಜಿ ಪರಿಕಲ್ಪನೆಯ ಅಡಿಯಲ್ಲಿ ಸರಿಸುಮಾರು 40 ಸಾವಿರ ರೂ. ವೆಚ್ಚದಲ್ಲಿ ಸೆಲ್ಕೊ ಕಂಪನಿಯ ಎರಡು ಸೋಲಾರ್ ವಿಧ್ಯುತ್ ದೀಪಗಳ ಕಂಬಗಳನ್ನು ರಾಮತೀರ್ಥ ಕ್ಷೇತ್ರದ ಆವರಣದಲ್ಲಿ ಅಳವಡಿಸಲಾಗಿದೆ ಎಂದು ರೋಟರಿ ಅಧ್ಯಕ್ಷ ಮಹೇಶ್ ಕಲ್ಯಾಣಪೂರ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.