ಶಿರಸಿ: ಪರಿಸರ ಪ್ರೇಮಿ, ನಗರದ ಜ್ಯೋತಿ ಹೆಗಡೆ ಬೆಂಗಳೂರಿನಲ್ಲಿ ನಡೆದ ಪ್ರತಿಷ್ಠಿತ ಸುಧಾ ವೆಂಚರ್ಸ ಅವರ SHE-RO ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹಿರಿಯ ಪರಿಸರವಾದಿ ಸಾಲುಮರದ ತಿಮ್ಮಕ್ಕ ಅವರಿಂದ ‘’ಗ್ಲೋಬಲ್ ವರ್ಲ್ಡ್ ರೆಕಾರ್ಡ್” ಪ್ರಶಸ್ತಿ ಪಡೆದು ತಮ್ಮ ಕುಟುಂಬಕ್ಕೆ ,ಸಂಸ್ಥೆಗೆ ಹಾಗೂ ಶಿರಸಿಗೆ ಕೀರ್ತಿ ತಂದಿದ್ದಾರೆ.
ಜ್ಯೋತಿ ಅವರು ಮಲ್ನಾಡ್ ಇಕೋ ಗ್ರೀನ್ ಪ್ಯಾನಲ್ಸ್ ಸಂಸ್ಥೆಯ ರೂವಾರಿ ಹಾಗೂ ಯುವಜನಾಂಗಕ್ಕೆ ಸ್ಪೂರ್ತಿಯಾಗಿರುವ ಮಹಿಳಾ ಉದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪದವೀಧರೆಯಾಗಿರುವ ಜ್ಯೋತಿ ಹೆಗಡೆ ತಮ್ಮ ಪತಿ ಉದ್ಯಮಿ ರೋಟೇರಿಯನ್ ಹರೀಶ್ ಹೆಗಡೆ ಅವರ ಜೊತೆ ನಿರಂತರ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು.
ಜ್ಯೋತಿ ಪ್ಲ್ಯಾಸ್ಟಿಕ್ ಮರುಬಳಕೆಯಿಂದ ಪ್ಲ್ಯಾಸ್ಟಿಕ್ ಬಳಕೆಯನ್ನು ಹೇಗೆ ಕಡಿಮೆ ಮಾಡಬಹುದು ಎಂದು ಅರಿತು ಈ ಕ್ಷೇತ್ರದಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡು ಅನೇಕ ಸಮಕಾಲೀನ ಸಮಸ್ಯೆಗಳಿಗೆ ಮಲ್ನಾಡ್ ಇಕೋ ಗ್ರೀನ್ ಪ್ಯಾನಲ್ ಮುಖೇನ ಪರಿಹಾರ ಒದಗಿಸಿದ್ದಾರೆ.
ಇನ್ನರ್ ವೀಲ್ ಕ್ಲಬ್ ಶಿರಸಿ ಹೆರಿಟೇಜ್ ನ ಸದಸ್ಯರೂ ಆಗಿರುವ ಅವರು ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.