Slide
Slide
Slide
previous arrow
next arrow

ಇಂಗ್ಲೀಷ್ ಓಲಂಪಿಯಾಡ್: ಲಯನ್ಸ್ ವಿದ್ಯಾರ್ಥಿಗಳ ಸಾಧನೆ

300x250 AD

ಶಿರಸಿ: SOF Science Olympiad foundation ರವರ ಅಂತರಾಷ್ಟ್ರೀಯ ಮಟ್ಟದ ಒಲಿಂಪಿಯಾಡ್ ಪರೀಕ್ಷೆಯ ಇಂಗ್ಲೀಷ್ ವಿಭಾಗದಲ್ಲಿ  ಲಯನ್ಸ್ ಶಾಲೆಯ ಒಟ್ಟು 47 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 10 ಮಕ್ಕಳು ಚಿನ್ನದ ಪದಕ ಗಳಿಸಿ ಸಾಧನೆ ಮೆರೆದಿದ್ದಾರೆ. ಮತ್ತು ಕುಮಾರಿ ಸ್ಪೂರ್ತಿ ಹೆಗಡೆ (10ನೇ ತರಗತಿ) ಕುಮಾರಿ ಸುವಿಧಾ ಹೆಗಡೆ (10ನೇ ತರಗತಿ)ಕು. ವಿನೀತ್ ಭಟ್ (6ನೇ ತರಗತಿ) ಕುಮಾರಿ ಅನನ್ಯಾ (8ನೇ ತರಗತಿ) ಮುಂದಿನ ಹಂತದ ಪರೀಕ್ಷೆಗೂ ಆಯ್ಕೆಯಾಗಿದ್ದಾರೆ.

ಈ ಎಲ್ಲಾ ವಿದ್ಯಾರ್ಥಿಗಳಿಗೂ ಉತ್ತಮ ಮಾರ್ಗದರ್ಶನ ನೀಡಿದ ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಮುಕ್ತಾ ನಾಯ್ಕ ಮತ್ತು ಶ್ರೀಮತಿ ಅನಿತಾ ಭಟ್ ಇವರನ್ನು ಮತ್ತು ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಸರ್ವಸದಸ್ಯರು, ಶಾಲೆಯ ಮುಖ್ಯೋಪಾಧ್ಯಾಯ ಶಶಾಂಕ ಹೆಗಡೆ, ಶಿಕ್ಷಕ-ಶಿಕ್ಷಕೇತರ ವೃಂದ, ಲಯನ್ಸ್ ಬಳಗ ಮತ್ತು ಪಾಲಕರ ವೃಂದ ಆಶೀರ್ವಾದಪೂರ್ವಕವಾಗಿ ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top