• Slide
    Slide
    Slide
    previous arrow
    next arrow
  • ಲಯನ್ಸ ಶಾಲೆಯ SSLC ವಿದ್ಯಾರ್ಥಿಗಳಿಗೆ ದೀಕ್ಷಾವಿಧಿ

    300x250 AD

    ಶಿರಸಿ: ನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ 2022- 23ರ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಮಾ. ಮಂಗಳವಾರದಂದು ದೀಕ್ಷಾವಿಧಿ ಬೋಧನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
    ಶಾಲೆಯ ಸಂಗೀತ ಶಿಕ್ಷಕಿ ದೀಪಾ ಶಶಾಂಕ್ ನಿರ್ದೇಶನದ ನೇತೃತ್ವದಲ್ಲಿ ಪ್ರಾರ್ಥನಾ ಗೀತೆಯನ್ನು ಪ್ರಸ್ತುತ ಸಾಲಿನ 9ನೇ ತರಗತಿ ವಿದ್ಯಾರ್ಥಿಗಳು ಸುಶ್ರಾವ್ಯವಾಗಿ ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಮುನ್ನುಡಿ ಇಡಲಾಯಿತು. ಶಾಲೆಯ
    ಮುಖ್ಯೋಪಾಧ್ಯಾಯ ಶಶಾಂಕ್ ಹೆಗಡೆಯವರು ಸರ್ವರನ್ನು ಸ್ವಾಗತಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
    ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಲ.ಪ್ರೊ. ಎನ್.ವಿ. ಜಿ.ಭಟ್ , ಉಪಾಧ್ಯಕ್ಷರಾದ MJF .ಲ. ಪ್ರಭಾಕರ್ ಹೆಗಡೆ, ಗೌರವ ಕಾರ್ಯದರ್ಶಿಗಳಾದ ಲ. ಪ್ರೊ. ರವಿ ನಾಯಕ್, ಕೋಶಾಧ್ಯಕ್ಷರಾದ MJF ಲ.ಉದಯ ಸ್ವಾದಿ, ಲಯನ್ಸ್ ಕ್ಲಬ್ ಅಧ್ಯಕ್ಷರಾದ MJF ಲಯನ್ ತ್ರಿವಿಕ್ರಮ ಪಟವರ್ಧನ್, ಲಯನ್ಸ್ ಕ್ಲಬ್ ಕಾರ್ಯದರ್ಶಿ MJF .ಲ. ರಮಾ ಪಟವರ್ಧನ್, ಸದಸ್ಯರಾದ ಶ್ಯಾಮ ಸುಂದರ್ ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಸಜ್ಜಾಗಿ ನಿಂತಿರುವ ವಿದ್ಯಾರ್ಥಿಗಳಿಗೆ ಹಲವಾರು ಅಮೂಲ್ಯ ಸಲಹೆ ಸೂಚನೆಗಳನ್ನು ಕೊಡುವುದರ ಜೊತೆಗೆ ಶುಭ ಹಾರೈಸಿದರು. ಶಿಕ್ಷಕರ ಪರವಾಗಿ ಶಿಕ್ಷಕರಾದ ಸಚಿನ್ ಕೊಡಿಯಾ ಮಾತನಾಡುತ್ತಾ ಭಾವುಕರಾಗಿ ವಿದ್ಯಾರ್ಥಿಗಳ ನಡುವಿನ ತಮ್ಮ ಅವಿನಾಭಾವ ಸಂಬಂಧದ ಬಗ್ಗೆ ಹಂಚಿಕೊಂಡರು. ಪಾಲಕರ ಪರವಾಗಿ, ಶಾಲೆಯ ಶಿಕ್ಷಕಿಯೂ ಆದ ಶ್ರೀಮತಿ ಚೈತ್ರಾ ಹೆಗಡೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ವಿದ್ಯಾರ್ಥಿಗಳಾದ ವಾಸವಿ ಜೋಶಿ, ಸ್ವರೂಪ ಲೋಖಂಡೆ ಸಿಂಚನಾ ಪಾಟನೇಕರ್ ಸಿಂಚನಾ ರಾಯ್ಕರ್ ಇವರು ಶಾಲೆಯಲ್ಲಿ ಇಷ್ಟು ವರ್ಷ ತಾವು ಕಳೆದ ಕ್ಷಣಗಳನ್ನು ನೆನಪಿಸಿಕೊಂಡು ತಮ್ಮ ಅನುಭವಗಳನ್ನು ತಮ್ಮದೇ ಆದ ರೀತಿಯಲ್ಲಿ ಹಂಚಿಕೊಂಡರು. ಕುಮಾರಿ ಸುವಿಧಾ ಹೆಗಡೆ ತನ್ನ ಹಾಡಿನ ಮೂಲಕ ಶಿಕ್ಷಕ ವೃಂದಕ್ಕೆ ವಂದನೆ ಅರ್ಪಿಸಿದಳು. ಎಲ್ಲಾ ಶಿಕ್ಷಕರ ಸಹಕಾರದಿಂದ ವಿದ್ಯಾರ್ಥಿಗಳಿಗಾಗಿ ಅವರ ಪ್ರೌಢಶಾಲಾ ಜೀವನದ ನೆನಪುಗಳ ಬುತ್ತಿಯನ್ನು ಬಿಚ್ಚಿಡುವಂತಹ ವಿಡಿಯೋವನ್ನು ಬಿತ್ತರಿಸಲಾಯಿತು.
    ಕಲಿಕೆಯಲ್ಲಿ ಮುಂದಿದ್ದು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗ ನೀಡುವಂತಹ ಸೌಲಭ್ಯವನ್ನು ಕುಮಾರಿ ಸುಧ ಶೆಟ್ಟಿ ಇವಳಿಗೆ ನೀಡಲಾಯಿತು. ಲಯನ್ ಡಿಸ್ಟ್ರಿಕ್ಟ್ ಗವರ್ನರ್ ಸುಘಲಾ ಯಳಿಮಲಿ ಕೊಡುಗೆಯಾದ ಲ್ಯಾಪ್ಟಾಪ್ ಅನ್ನು ವಿದ್ಯಾರ್ಥಿನಿಗೆ ವಿತರಿಸಲಾಯಿತು. ಸಹ ಶಿಕ್ಷಕಿ ಶ್ರೀಮತಿ ಮುಕ್ತಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು ಸಹಶಿಕ್ಷಕಿ ಶ್ರೀಮತಿ ವಿದ್ಯಾ ಭಟ್ಟ ವಂದನಾರ್ಪಣೆಯನ್ನು ನೆರವೇರಿಸಿದರು. ಒಟ್ಟಿನಲ್ಲಿ ಒಂದು ಅರ್ಥಪೂರ್ಣ ಕಾರ್ಯಕ್ರಮವು ಅಚ್ಚುಕಟ್ಟಾಗಿ ಸಂಪೂರ್ಣಗೊಂಡಿತು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top