Slide
Slide
Slide
previous arrow
next arrow

ಆಕಳಿಲ್ಲದ ಮನೆ ದೇವರಿಲ್ಲದ ಗುಡಿಯಂತೆ: ಸುರೇಶ್ಚಂದ್ರ ಕೆಶಿನ್ಮನೆ

300x250 AD

ಶಿರಸಿ: ಧಾರವಾಡ,ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ವತಿಯಿಂದ ಅನುದಾನದ ಅಡಿಯಲ್ಲಿ ನೀಡಲಾಗುವ ಎ.ಎಂ.ಸಿ.ಯು. ಸೆಟ್‌ನ್ನು ತಾಲೂಕಿನ ಕಲ್ಗುಂಡಿಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ವಿತರಿಸಿ, ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ನಾವೆಲ್ಲರೂ ಆಕಳನ್ನು ದೇವರೆಂದು ಪೂಜಿಸುತ್ತೇವೆ. ಆಕಳಿಲ್ಲದ ಮನೆ ದೇವರಿಲ್ಲದ ಗುಡಿಯಂತೆ. ಅದಕ್ಕಾಗಿ ಪ್ರತಿಯೊಬ್ಬರೂ ಸಹ ನಮ್ಮ ಮನೆಯಲ್ಲಿ ನಮಗೆ ಸಾಧ್ಯವಾದಷ್ಟು ಆಕಳುಗಳನ್ನು ಸಾಕಿ ಜಿಲ್ಲೆಯಲ್ಲಿ ಹಾಲಿನ ಶೇಖರಣೆಯನ್ನು ಹೆಚ್ಚು ಮಾಡಲು ಪರಿಶ್ರಮವಹಿಸಬೇಕಿದೆ ಎಂದರು.
ಒಕ್ಕೂಟದ ವತಿಯಿಂದ ಅರ್ಹ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಎ.ಎಂ.ಸಿ.ಯು ಸೆಟ್‌ಗಳನ್ನು ಅನುದಾನದ ಅಡಿಯಲ್ಲಿ ವಿತರಿಸುವ ಬಗ್ಗೆ ಒಕ್ಕೂಟದ ಆಡಳಿತ ಮಂಡಳಿಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಅದರಂತೆಯೇ ಶಿರಸಿ ತಾಲೂಕಿನ ಒಟ್ಟೂ ಹದಿನೈದು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಈಗಾಗಲೇ ಎ.ಎಂ.ಸಿ.ಯು ಸೆಟ್‌ಗಳನ್ನು ನೇರವಾಗಿ ತಲುಪಿಸಲಾಗಿದೆ ಎಂದರು. ಹಾಲು ಸಂಘಗಳಿಗೆ ಅನುಕೂಲವಾಗುವ ದೃಷ್ಠಿಯಿಂದ ಹಾಗೂ ಸಂಘಗಳು ಉತ್ತಮ ಗುಣಮಟ್ಟದ ಹಾಲನ್ನು ಖರೀದಿಸಲು ಉಪಯೋಗವಾಗುವಂತೆ ದೊಡ್ಡ ಪ್ರಮಾಣದ ಅನುದಾನದವನ್ನು ಸಂಘಗಳಿಗೆ ಒದಗಿಸಿ ಸಂಘಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎ.ಎಂ.ಸಿ.ಯು. ಸೆಟ್‌ಗಳನ್ನು ಈ ಮೂಲಕ ವಿತರಿಸಿಲಾಗಿದೆ. ಶಿರಸಿ ತಾಲೂಕಿನ ನಿರ್ದೇಶಕನಾದರು ಸಹ ನಾನು ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು ನನ್ನ ಸಂಘಗಳೆಂದು ಪರಿಗಣಿಸಿ ಯಾವುದೇ ಸಂಘಗಳಿಂದ ಮೂಲಭೂತ ಸೌಕರ್ಯಕ್ಕಾಗಲೀ, ಸಂಘಗಳಿಗೆ ಬೇಕಾದ ಇತರ ಸವಲತ್ತುಗಳಿಗಾಗಲೀ ಬಂದಂತಹ ಬೇಡಿಕೆಯನ್ನು ನನ್ನ ಶಕ್ತ್ಯಾನುಸಾರ ಅವುಗಳನ್ನು ಪೂರೈಸುವಂತಹ ಕೆಲಸಗಳನ್ನು ಮಾಡಿಕೊಂಡು ಬಂದದ್ದೇನೆ. ಬಹುದಿನಗಳ ನಮ್ಮ ಜಿಲ್ಲೆಯ ಹಾಲು ಉತ್ಪಾದಕರ ಬೇಡಿಕೆಯಾಗಿದ್ದ ರಾಜ್ಯದ ಮೊದಲ ಪಿ.ಪಿ.ಪಿ. ಯೋಜನೆಯಲ್ಲಿ ನಿರ್ಮಾಣ ಮಾಡಲ್ಪಟ್ಟ ಹಾಲು ಪ್ಯಾಕಿಂಗ್‌ ಘಟಕವನ್ನು ನಮಗೆ ಎದುರಾದ ಹಲವು ಕಠಿಣ ಸವಾಲುಗಳ ನಡುವೆ ಯಶಸ್ವಿಯಾಗಿ ಹನುಮಂತಿಯಲ್ಲಿ ನಿರ್ಮಿಸಲಾಯಿತು. ಅದರಂತಯೇ ಉತ್ತರಕನ್ನಡ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಬೇಕೆಂಬ ಜನರ ಆಶಯದಂತೆ ಜಿಲ್ಲೆಯ ಜನಪ್ರತಿನಿಧಿಗಳ ಸಹಾಯದಿಂದ ಎನ್.ಡಿ.ಡಿ.ಬಿ. ಅಧಿಕಾರಿಗಳಿಂದ ಸರ್ವೇ ಕಾರ್ಯ ಮಾಡಿಸಿ ಸಾಧ್ಯತಾ ವರದಿಗಳನ್ನು ಸಿದ್ಧ ಪಡಿಸಿ ರಾಜ್ಯ ಸರ್ಕಾರದ ಅನುಮೋದನೆಗೂ ಸಹ ಕಳುಹಿಸಲಾಗಿತ್ತು ಆದರೆ ಕೆಲ ತಾಂತ್ರಿಕ ಕಾರಣಗಳಿಂದ ಆ ಪ್ರಕ್ರಿಯೆ ಪೂರ್ಣಗೊಳ್ಳಲಿಲ್ಲ ಆದರೂ ಸಹ ನಾವು ಛಲ ಬಿಡದೇ ಪ್ರಯತ್ನ ಮಾಡುತ್ತಿದ್ದೇವೆ ಅದಕ್ಕೆ ತಮ್ಮ ಹಾಗೂ ಜಿಲ್ಲೆಯ ಎಲ್ಲಾ ರೈತರ ಸಹಕಾರ ಬೇಕಿದೆ ಜಿಲ್ಲೆಯಲ್ಲಿ ಹಾಲಿನ ಪ್ರಮಾಣ ಹೆಚ್ಚಾಗಬೇಕಿದೆ ಎಂದರು.
ಜಿಲ್ಲೆಯಾದ್ಯಂತ ಅನೇಕ ಸಂಘಗಳಲ್ಲಿ ಸ್ಥಳೀಯ ಹಾಲಿನ ಮಾರಾಟ ಅಧಿಕವಾಗಿರುವುದು ಕಂಡು ಬಂದಿದ್ದು, ಹಾಲನ್ನು ಸಂಘಗಳಿಂದ ಕೆಲ ಖಾಸಗಿಯವರು ಹಾಲನ್ನು ಖರೀದಿಸಿ ಹೊಗುತ್ತಿರುವುದು ನಮ್ಮ ಗಮಕ್ಕೆ ಬಂದಿದ್ದು ಅದನ್ನು ನಿಯಂತ್ರಿಸಲು ಜಿಲ್ಲೆಯ ಎಲ್ಲಾ ಸಂಘಗಳಿಗೆ ಈಗಾಗಲೇ ಸುತ್ತೋಲೆಗಳನ್ನು ಹೊರಡಿಸಲಾಗಿದೆ ಎಂದರು. ಶ್ರಮಿಕ ವರ್ಗದ ಜನರು, ಮಹಿಳೆಯರು, ಕೃಷಿ ಹಾಗೂ ಇತರೇ ಕೂಲಿ ಕಾರ್ಮಿಕರು ಹೈನುಗಾರಿಕೆಯಲ್ಲಿ ತೊಡಗಿಕೊಳ್ಳಲು ಅಪಾರ ಆಸಕ್ತಿ ಹೊಂದಿದ್ದು ಈ ನಿಟ್ಟಿನಲ್ಲಿ ನಾವು ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ದಿಶೆಯಲ್ಲಿ ಅವರಿಗೆ ಉತ್ತೇಜನ ನೀಡುವ ದೃಷ್ಠಿಯಿಂದ ಸಾಲ ನೀಡಲು ಚಿಂತನೆ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ವಿದ್ಯುತ್‌ ಸಮಸ್ಯೆ ಇರುವ ಕಾರಣ ಅನುದಾನದ ಅಡಿಯಲ್ಲಿ ಸೌರಚಾಲಿತ ಹಾಲು ಕರೆಯುವ ಯಂತ್ರಗಳನ್ನು ಸಹ ವಿತರಿಸಲಾಗುವುದು ಎಂದರು. ಕಡಿಮೆ ದರದಲ್ಲಿ ಹಾಲು ಉತ್ಪಾದಕ ರೈತರಿಗೆ ಮೇವಿನ ಅಚ್ಚುಗಳನ್ನು ಸಹ ನೇರವಾಗಿ ಸಂಘಗಳಿಗೆ ವಿತರಿಸುವ ಬಗ್ಗೆ ಕುರಿತು ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಲಾಗಿದೆ. ಅತೀ ಶೀಘ್ರದಲ್ಲಿ ಜಿಲ್ಲೆಯಾದ್ಯಂತ ಕಡಿಮೆ ದರದಲ್ಲಿ ಹಾಲು ಉತ್ಪಾದಕ ರೈತರಿಗೆ ಮೇವಿನ ಅಚ್ಚುಗಳನ್ನು ನೇರವಾಗಿ ತಲುಪುವಂತೆ ಸಂಘಗಳಿಗೆ ಸಹ ವಿತರಿಸಲಾಗುವುದು. ನಿಮಗಾಗಿ ನಾವು, ನಮಗಾಗಿ ನೀವು ಎಂಬ ಸಹಕಾರದ ತತ್ವಗಳನ್ನು ನಾವು ಅಳವಡಿಸಿಕೊಂಡು ಈ ವ್ಯವಸ್ಥೆಯನ್ನು ಉತ್ತಮ ರೀತಿಯಲ್ಲಿ ಮುಂದಿನ ದಿನಗಳಲ್ಲಿ ನಡೆಸುಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದ್ದು, ಮುಂದಿನ ದಿನಗಳಲ್ಲಿ ಸಂಘಕ್ಕೆ ಸಿಗಬಹುದಾದ ಎಲ್ಲಾ ಸೌಕರ್ಯಗಳನ್ನು ಕೊಡಿಸಲು ನಾನು ಸದಾ ನಿಮ್ಮೊಂದಿಗೆ ಇರುತ್ತೇನೆಂದು ತಿಳಿಸಿ, ಶುಭಕೋರಿದರು.

300x250 AD

ಈ ಸಂದರ್ಭದಲ್ಲಿ ಕಲ್ಗುಂಡಿಕೊಪ್ಪ ಹಾಲು ಸಂಘದ ಅಧ್ಯಕ್ಷರಾದ ವಿಜಯಕುಮಾರ ರಾವ್, ಧಾರವಾಡ ಸಹಕಾರ ಹಾಲು ಒಕ್ಕೂಟದ ಜಿಲ್ಲಾ ಮುಖ್ಯಸ್ಥರಾದ ಎಸ್.ಎಸ್.ಬಿಜೂರ್‌, ವಿಸ್ತರಣಾಧಿಕಾರಿಗಳಾದ ಮೌನೇಶ ಎಂ ಸೋನಾರ, ವಿಸ್ತರಣಾಸಮಾಲೋಚಕರಾದ ಅಭಿಷೇಕ ನಾಯ್ಕ, ಜಯಂತ ಪಟಗಾರ, ಕಲ್ಗುಂಡಿಕೊಪ್ಪ ಸಂಘದ ಆಡಳಿತ ಮಂಡಳಿ ಸದಸ್ಯರಾದ ಶಾಂತಿ ಬಡಗಿ, ಧನಂಜಯ ಹೆಗಡೆ, ಕೇಶವ ಬಡಗಿ, ಗಣೇಶ ಜೋಶಿ, ಜಯಂತ ಹೆಗಡೆ, ಮಂಜುನಾಥ ಪೂಜಾರಿ, ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಸಂಘದ ಹಾಲು ಉತ್ಪಾದಕರು ಹಾಗೂ ಊರ ನಾಗರೀಕರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top