ದಾಂಡೇಲಿ: ನಿರ್ಮಲನಗರದ ಶ್ರೀಕಾಳಿಕಾ ದೇವಿ ದೇವಸ್ಥಾನದ ಜಾತ್ರೆಯು ಶ್ರದ್ಧಾಭಕ್ತಿಯಿಂದ ಜರುಗಿತು. ಜಾತ್ರೋತ್ಸವದ ನಿಮಿತ್ತವಾಗಿ ಬೆಳಗ್ಗಿನಿಂದಲೆ ವಿಶೇಷ ಪೂಜಾರಾಧನೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆ ಮಹಾಭಿಷೇಕ, ಅಲಂಕಾರ ಹಾಗೂ ಆರತಿ ನಡೆದು. ಮಧ್ಯಾಹ್ನ ಮಹಾ ಮಂಗಳಾರತಿ ನಡೆಯಿತು. ಆ ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು. ಸಂಜೆ ಶ್ರೀದೇವಿಯ ಉತ್ಸವ ಮೂರ್ತಿಯ ಪಲ್ಲಕಿ ಉತ್ಸವವು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕೊನೆಯಲ್ಲಿ ಶ್ರೀಕಾಳಿಕಾ ಭವಾನಿ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.
ಜಾತ್ರೋತ್ಸವ ಹಾಗೂ ಅನ್ನಸಂತರ್ಪಣೆಯ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಿ, ಶ್ರೀಕಾಳಿಕಾದೇವಿಯ ಕೃಪೆಗೆ ಪಾತ್ರರಾದರು. ಜಾತ್ರೋತ್ಸವದ ಯಶಸ್ಸಿಗೆ ಶ್ರೀಕಾಳಿಕಾ ಭವಾನಿ ಸೇವಾ ಸಮಿತಿ ದೇವಸ್ಥಾನ ಟ್ರಸ್ಟ್ ಇದರ ಸರ್ವ ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ಸ್ಥಳೀಯ ಭಕ್ತಾಭಿಮಾನಿಗಳು ಶ್ರಮಿಸಿದ್ದರು. ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಭಕ್ತಪ್ರಧಾನವಾಗಿ ಜಾತ್ರೆ ನಡೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.